ಶಾಲಾ ಮಕ್ಕಳ ನೃತ್ಯವನ್ನು ನಿಲ್ಲಿಸಿದ ಸಚಿವ ಡಿಕೆ ಶಿವಕುಮಾರ್!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಆಗಸ್ಟ್ 15 : ಶಾಲಾ ಮಕ್ಕಳ ನೃತ್ಯವನ್ನು ನಿಲ್ಲಿಸಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಡ್ಯದಲ್ಲಿ ಸೋಮವಾರ ನಡೆದಿದೆ. ಮಕ್ಕಳು 'ಹುಟ್ಟೋದ್ಯಾಕೆ ..ಸಾಯೋದ್ಯಾಕೆ' ಎಂಬ ಹಾಡಿಗೆ ನೃತ್ಯ ಮಾಡುತ್ತಿದ್ದರು.[ಚಿತ್ರಗಳು : 70ನೇ ಸ್ವಾತಂತ್ರ್ಯೋತ್ಸವ]

ಮಂಡ್ಯದಲ್ಲಿ ಸೋಮವಾರ ನಡೆದ 70ನೇ ಸ್ವಾತಂತ್ರ್ಯೋತ್ಸವ ವೇಳೆ ಶಾಲಾ ಮಕ್ಕಳ ನೃತ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅರ್ಧಕ್ಕೆ ನಿಲ್ಲಿಸಿದರು. ಧ್ವಜಾರೋಹಣದ ಬಳಿಕ ಶಾಲಾ ಮಕ್ಕಳಿಂದ ವಿವಿಧ ನೃತ್ಯಗಳನ್ನು ನಡೆಸಲಾಗುತ್ತಿತ್ತು.[ಮೋದಿ ಭಾಷಣದ ಮುಖ್ಯಾಂಶಗಳು]

DK Shiva Kumar upset over dance

ಈ ವೇಳೆ ಮಕ್ಕಳ ಕೈಯಲ್ಲಿದ್ದ ಆತ್ಮಹತ್ಯೆಗೆ ಶರಣಾದ ಐಎಎಸ್ ಅಧಿಕಾರಿ ಡಿ.ಕೆ.ರವಿ, ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್‌ ಮತ್ತು ಎಂ.ಕೆ ಗಣಪತಿ ಅವರ ಫೋಟೋಗಳನ್ನು ನೋಡಿದ ಸಚಿವರು, ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಲು ಸೂಚನೆ ನೀಡಿದರು.[ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು]

ಶಾಲಾ ಮಕ್ಕಳ ನೃತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಶಿಕ್ಷಣ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ) ಅವರನ್ನು ತರಾಟೆಗೆ ತೆಗೆದುಕೊಂಡರು.

independence day

70 ಮೀಟರ್ ಉದ್ದದ ರಾಷ್ಟ್ರಧ್ವಜ : ಮಂಡ್ಯ ಯೂತ್‌ ಗ್ರೂಪ್‌ ಸದಸ್ಯರು 70 ಮೀಟರ್ ಉದ್ದದ ರಾಷ್ಟ್ರಧ್ವಜದ ಮಾದರಿಯನ್ನು ಮೆರವಣಿಗೆ ಮಾಡುವ ಮೂಲಕ ಗಮನ ಸೆಳೆದರು. ನಗರದ ಪ್ರಮುಖ ರಸ್ತೆಗಳಲ್ಲಿ ನೂರಕ್ಕೂ ಹೆಚ್ಚು ಯುವಕರು ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಧ್ವಜದ ಮಾದರಿಯ ಮೆರವಣಿಗೆ ನಡೆಸಿದರು.

English summary
Mandya district incharge minister D.K.Shiva Kumar was irked during the students dance at 70th Independence Day celebration. q
Please Wait while comments are loading...