ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ಘೋಷಿಸಿ : ಮಾದೇಗೌಡ

By:
Subscribe to Oneindia Kannada

ಮಂಡ್ಯ, ಸೆ. 11: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ನಡೆ ಬಗ್ಗೆ ಚರ್ಚಿಸಲು ಕಾವೇರಿ ಕಣಿವೆ ರೈತ ಹಿತರಕ್ಷಣಾ ಸಮಿತಿಯಿಂದ ಭಾನುವಾರದಂದು ಮಹತ್ವ ಸಭೆ ನಡೆಸಲಾಯಿತು. ಜಿ ಮಾದೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳ ವಿವರ ಇಲ್ಲಿದೆ.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸ೦ಸದ ಜಿ.ಮಾದೇಗೌಡ ಅವರು ಸಭೆ ಬಳಿಕ ಮಾತನಾಡಿ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ತಕ್ಷಣ, ರೈತರ ಪ್ರತಿಭಟನೆ ನಿಲ್ಲಿಸಲಾಗುತ್ತದೆ. ರೈತರ ಆಕ್ರೋಶಕ್ಕೆ ಹೆದರಿ ನಾಲೆಗಳಿಗೆ ನೀರು ಬಿಡಲಾಗುತ್ತಿದೆ. [ಮಂಡ್ಯ: ರೈತರ ಜತೆ ಕುಳಿತು ಸಿಎಂಗೆ ಪ್ರಶ್ನೆ ಎಸೆದ ಯಡಿಯೂರಪ್ಪ]

ಈಗಾಗಲೇ ನೀರು ಸಿಗುವುದು ತಡವಾಗಿದೆ. ಬೆಳೆ ಕೈಗೆ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ರೈತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದರು.

ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ 5 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ
* ಕಾವೇರಿ ಮೇಲುಸ್ತುವಾರಿ ಸಮಿತಿಯ ಮುಂದೆ ವಾದ ಮಂಡಿಸಬೇಕು.
* ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು
* ರೈತರಿಗೆ ಒಂದು ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಿಸಿ, ಹೋರಾಟಗಾರರ ವಿರುದ್ಧ ಕೇಸ್ ಗಳನ್ನು ವಜಾಗೊಳಿಸಿ
* ಕಾವೇರಿ ಕಣಿವೆ ವ್ಯಾಪ್ತಿಯ ಎಲ್ಲಾ ಶಾಸಕರು, ಸಂಸದರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು.
* ಸೆಪ್ಟೆಂಬರ್ 14ರಂದು ಶಾಸಕರ ಸಭೆ ಕರೆಯಲು ನಿರ್ಧಾರ. [ದೇವೇಗೌಡರಿಂದ ಅಣೆಕಟ್ಟುಗಳ ವೈಮಾನಿಕ ಸಮೀಕ್ಷೆ ಆರಂಭ]
{photo-feature}

English summary
Cauvery Dispute : Cauvery Hita Rakshana Vedike in Mandya had meeting on 11 September and taken five important decision regarding the protest.
Please Wait while comments are loading...