ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಲಕಾವೇರಿ ಕಡೆ ಹೊರಟಿದೀರಾ? ಒಂದೆರಡು ದಿನ ಪೋಸ್ಟ್ ಪೋನ್ ಮಾಡಿ

ಕೊಡಗಿನ ಭಾಗಮಂಡಲದ ಸುತ್ತಲಿನ ಅರಣ್ಯ ಪ್ರದೇಶವನ್ನು ಜೈವಿಕ ಸೂಕ್ಷ್ಮ ವಲಯವನ್ನಾಗಿ ಘೋಷಿಸಿರುವ ಸರ್ಕಾರ. ವಲಯದ ಬಫರ್ ಝೋನ್ ಅನ್ನು 1 ಕಿ.ಮೀ. ನಿಂದ 16 ಕಿ.ಮೀ.ವರೆಗೆ ವಿಸ್ತರಿಸಿ ಹೊಸ ಆದೇಶ. ಆದೇಶದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ನಾನಾ ಸಂ

By ಕೊಡಗು ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜೂನ್ 10: ವೀಕೆಂಡ್‍ನಲ್ಲಿ ಕೊಡಗಿನ ತಲಕಾವೇರಿಯತ್ತ ಹೋರಡಬೇಕೆನ್ನುವವರು ತಮ್ಮ ಟ್ರಿಪ್‍ನ್ನು ಮುಂದೂಡುವುದು ಒಳಿತು. ಏಕೆಂದರೆ ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿ ಬಫರ್ ಜೋನ್ ಮಿತಿಯನ್ನು 1 ಕಿ.ಮೀ. ನಿಂದ 16 ಕಿ.ಮೀ.ವರೆಗೆ ವಿಸ್ತರಿಸಿರುವುದನ್ನು ವಿರೋಧಿಸಿ ಭಾಗಮಂಡಲದ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಬಂದ್‍ಗೆ ಕರೆ ನೀಡಿರುವುದರಿಂದಾಗಿ ಜೂ. 10 ಮತ್ತು 11ರಂದು ಭಾಗಮಂಡಲ ಮತ್ತು ತಲಕಾವೇರಿ ಸ್ತಬ್ಧಗೊಳ್ಳಲಿದೆ.

ಮಡಿಕೇರಿ ಮತ್ತು ನಾಪೋಕ್ಲು ಕಡೆಗಳಿಂದ ಬರುವ ವಾಹನಗಳಿಗೆ ತಡೆಯೊಡ್ಡುವ ಸಾಧ್ಯತೆಯಿರುವುದರಿಂದ ದೂರದಿಂದ ಬರುವ ತೆರಳುವ ಪ್ರವಾಸಿಗರು ಪರದಾಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ತಲಕಾವೇರಿಯತ್ತ ಹೊರಡುವ ಆಲೋಚನೆಯಿದ್ದರೆ ಅದನ್ನು ಮುಂದೂಡುವುದು ಒಳಿತು.[ಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನ]

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯಲಿದೆ. ಜೂ. 12 ರಂದು ಬಹಿರಂಗ ಸಭೆ ನಡೆಯಲಿದ್ದು, ಸಂತೆ ದಿನವಾದ್ದರಿಂದ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಂದ್ ಆಚರಿಸಿ ಸಭೆ ನಡೆಸಲಾಗುವುದು ಎಂದು ಸಂಘಟಕರಲ್ಲೊಬ್ಬರಾದ ಕಾಳನ ರವಿ ತಿಳಿಸಿದ್ದು, ಈ ಸಂಬಂಧ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತಳೆಯಲಾಗುವುದೆಂದು ತಿಳಿಸಿದ್ದಾರೆ.[ವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿಗೆ ಮನವಿ]

ಈಗಾಗಲೇ ಅಲ್ಲಿನ ವಾಹನ ಮಾಲೀಕರು, ಚಾಲಕರು, ಆಟೋ ಚಾಲಕರು, ಮಾಲೀಕರ ಸಂಘದವರು ಬೆಂಬಲ ನೀಡಿರುವುದರಿಂದ ಯಾವುದೇ ವಾಹನಗಳ ಸಂಚಾರವಿರುವದಿಲ್ಲ ಎನ್ನಲಾಗಿದೆ.

ಪ್ರವಾಸಿಗರ ವಾಹನಗಳಿಗೂ, ಕ್ಷೇತ್ರಗಳಿಗೆ ತೆರಳುವ ಭಕ್ತರ ವಾಹನಗಳಿಗೂ ಅವಕಾಶವಿಲ್ಲ. ಭಾಗಮಂಡಲ ಪ್ರವೇಶದ್ವಾರದ ಬಳಿ ವಾಹನಗಳನ್ನು ನಿಲ್ಲಿಸಿ, ಭಗಂಡೇಶ್ವರ ಹಾಗೂ ತಲಕಾವೇರಿ ಸನ್ನಿಧಿಗೆ ನಡೆದುಕೊಂಡೇ ಹೋಗಬೇಕಾಗುತ್ತದೆ. ಬಂದ್‍ಗೆ ಅಯ್ಯಂಗೇರಿ, ಕರಿಕೆ, ಚೆಟ್ಟಿಮಾನಿ ಗ್ರಾಮಸ್ಥರು ಬೆಂಬಲಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿ ಬಫರ್ ಜೋನ್ ಮಿತಿಯನ್ನು 1 ಕಿ.ಮೀ. ನಿಂದ 16 ಕಿ.ಮೀ.ವರೆಗೆ ವಿಸ್ತರಿಸಿರುವುದು ಸ್ಥಳೀಯರಿಗೆ ಕಂಟಕವಾಗಿ ಪರಿಣಮಿಸಿದ್ದು, ಹೋರಾಟಕ್ಕೆ ಹಾದಿ ಮಾಡಿಕೊಟ್ಟಿದೆ.

ಇಲ್ಲಿನ ಜನ ಕಾಡಿನೊಂದಿಗೆ ನಂಟು ಹೊಂದಿ ಕೃಷಿ ಮಾಡುತ್ತಾ ಬಂದಿದ್ದಾರೆ. ಸುಮಾರು 16 ಕಿ.ಮೀ.ವರೆಗೆ ಪ್ರದೇಶವನ್ನು ವಿಸ್ತರಿಸಿರುವುದರಿಂದ ಹಲವು ಕಾನೂನು ಕಾಯ್ದೆಗಳು ಕೃಷಿಕರಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ.

English summary
As government declares the area around Bhagamandala as bio sensitive area and increases buffer zone from 1 K.M. to 16 K.M., several organisations going to protest against it on 10, 11th of June 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X