ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಆಗಸ್ಟ್ 27: ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಗಜಪಡೆಗಳ ಪೈಕಿ ಕೊಡಗಿನ ಆನೆ ಶಿಬಿರಗಳಿಂದ ತೆರಳಿರುವ ಗಜಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹವಾಗಿದೆ. ಜಂಬೂ ಸವಾರಿಯಲ್ಲಿ ಈ ಬಾರಿ ಸುಮಾರು 12 ಆನೆಗಳು ಭಾಗವಹಿಸುತ್ತಿದ್ದರೆ, ಅವುಗಳಲ್ಲಿ 9 ಆನೆಗಳು ಕೊಡಗಿನ ಮತ್ತಿಗೋಡು, ಮೂರ್ಕಲ್, ದುಬಾರೆ, ಆನೆಕಾಡು ಆನೆ ಶಿಬಿರಗಳಲ್ಲಿರುವಂಥವು.

ಈ ಒಂಬತ್ತು ಆನೆಗಳು ಕೂಡ ಜಂಬೂಸವಾರಿಯ ಸಂದರ್ಭ ಒಂದೊಂದು ರೀತಿ ಜವಾಬ್ದಾರಿ ವಹಿಸುತ್ತಿವೆ. ಕಾಡಿನ ನಡುವೆ ಇರುವ ಆನೆ ಶಿಬಿರಗಳಲ್ಲಿ ಇದ್ದರೂ ದಸರಾ ಸಂದರ್ಭ ಮೈಸೂರು ನಗರದ ಗೌಜು, ಗದ್ದಲಗಳಿಗೆ ವಿಚಲಿತವಾಗದೆ ಗಂಭೀರವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬರುತ್ತಿವೆ.[ಮೈಸೂರು ಅರಮನೆಯಲ್ಲಿ ಆನೆಗಳಿಗೆ ಅದ್ಧೂರಿ ಸ್ವಾಗತ]

Balarama

ಅದರಲ್ಲೂ ಬಲರಾಮನ ಸೇವೆ ಮರೆಯಲಾರದ್ದು, ಸುಮಾರು 19 ವರ್ಷಗಳ ಅನುಭವಿದೆ. ಅದಕ್ಕಿಂತ ಹೆಚ್ಚಾಗಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. 58 ವರ್ಷ ವಯಸ್ಸಿನ ಬಲರಾಮನನ್ನು 1978ರಲ್ಲಿ ಕೊಡಗಿನ ಕಟ್ಟೆಪುರ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. ತಿತಿಮತಿಯ ಮತ್ತಿಗೋಡು ಆನೆಶಿಬಿರ ವಾಸ್ತವ್ಯದ ಸ್ಥಾನ. 2.7 ಮೀ ಎತ್ತರ, 3.70 ಮೀ. ಉದ್ದವಿದ್ದಾನೆ.

Abhimanyu

ಪುಂಡ ಆನೆಗಳನ್ನು ಸದೆ ಬಡಿದು ಹೆಡೆಮುರಿಗೆ ಕಟ್ಟುವುದರಲ್ಲಿ ನಿಸ್ಸೀಮನಾಗಿರುವ ಅಭಿಮನ್ಯು, ಜಂಬೂಸವಾರಿಯಲ್ಲಿ 17 ವರ್ಷಗಳ ಕಾಲ ಭಾಗವಹಿಸಿ ಅನುಭವ ಹೊಂದಿದ್ದಾನೆ. ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಾಬ್ದಾರಿ ಈತನದು. 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾದ ಈತನ ವಯಸ್ಸು ಈಗ 50ವರ್ಷ ತಿತಿಮತಿಯ ಮತ್ತಿಗೋಡು ಆನೆಶಿಬಿರದಲ್ಲಿ ವಾಸ್ತವ್ಯ. 2.68 ಮೀ ಎತ್ತರ, 3.51 ಮೀ. ಉದ್ದವಿದ್ದಾನೆ.[ದಸರಾ ವಿಶೇಷ: ಮಾವುತರೆಂಬ ಗಜಪಡೆಯ ರಿಂಗ್ ಮಾಸ್ಟರ್!]

ಕಳೆದ ಒಂಬತ್ತು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಸಾಧುಸ್ವಭಾವದ ಹೆಣ್ಣು ಆನೆ ವಿಜಯ ಭಾಗವಹಿಸುತ್ತಿದ್ದಾಳೆ. ಆನೆಕಾಡು ಆನೆಶಿಬಿರದಲ್ಲಿರುವ ಈಕೆಯನ್ನು 1963ರಲ್ಲಿ ದುಬಾರೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. 2.29ಮೀ. ಎತ್ತರ, 3.00ಮೀ ಉದ್ದ ಇದ್ದಾಳೆ.

2009ರಲ್ಲಿ ಕೊಡಗಿನ ಸೋಮವಾರಪೇಟೆಯ ಅಡನಾಡೂರು ಅರಣ್ಯಪ್ರದೇಶದಲ್ಲಿ ಸೆರೆಸಿಕ್ಕಿರುವ ಹೆಣ್ಣಾನೆ ಕಾವೇರಿಗೆ ಈಗ 38 ವರ್ಷ. 2.50ಮೀ ಎತ್ತರ, 3.32 ಮೀ. ಉದ್ದ ಹಾಗೂ ಅಂದಾಜು 3152 ಕೆ.ಜಿ. ತೂಕ ಹೊಂದಿರುವ ಈಕೆ ದುಬಾರೆ ಆನೆ ಶಿಬಿರದವಳು.[ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ದಸರಾ ಗಜಪಡೆ]

Gaja pravesha

60 ವರ್ಷದ ಪ್ರಶಾಂತನನ್ನು 1993ರಲ್ಲಿ ಕೊಡಗಿನ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ದುಬಾರೆಯಲ್ಲಿ ವಾಸ್ತವ್ಯ ಹೂಡಿದ್ದಾನೆ. 2.61ಮೀ ಎತ್ತರ, 3.46 ಮೀ ಉದ್ದ ಮತ್ತು 4329 ಕೆ.ಜಿ. ತೂಕ ಹೊಂದಿದ್ದಾನೆ.

ಗೋಪಾಲಸ್ವಾಮಿ ತಿತಿಮತಿಯ ಮೂರ್ಕಲ್ ಆನೆ ಶಿಬಿರದವನಾಗಿದ್ದು, ಶಾಂತ ಸ್ವಭಾವದ ಬಲಶಾಲಿ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲಾಗಿದೆ. 2.62 ಮೀ. ಎತ್ತರ, 3.42 ಮೀ. ಉದ್ದ, ಅಂದಾಜು 3242 ಕೆ.ಜಿ. ತೂಕ ಇದ್ದಾನೆ.

12ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ವಿಕ್ರಮನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ದುಬಾರೆ ಆನೆ ಶಿಬಿರದಲ್ಲಿ ವಾಸ್ತವ್ಯ. 43 ವರ್ಷ ವಯಸ್ಸು, 2.60 ಮೀ. ಎತ್ತರ, 3.43 ಮೀ. ಉದ್ದ ಇದ್ದಾನೆ.[ಮೈಸೂರು ದಸರಾಕ್ಕೆ ಕಳೆಕಟ್ಟಿದ ಗಜಪಯಣ]

1993ರಲ್ಲಿ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾದ ಗೋಪಿ, ದುಬಾರೆ ಆನೆಶಿಬಿರದವನು. ಅಲ್ಲಿ ಸಫಾರಿ ಕಾರ್ಯ ನಿರ್ವಹಿಸುತ್ತಾನೆ. 34 ವರ್ಷ, ಎತ್ತರ 2.92 ಮೀ. ಉದ್ದ 3.42 ಮೀ. ಇದ್ದು, ಈತನಿಗೆ 6ನೇ ದಸರಾ ಆಗಿದೆ.

ಹರ್ಷನಿಗೆ ಈಗ 49 ವರ್ಷ. 2.55 ಮೀ ಎತ್ತರ, 3.40 ಮೀ ಉದ್ದ ಅಂದಾಜು 3290 ಕೆ.ಜಿ. ತೂಕವನ್ನು ಹೊಂದಿದ್ದಾನೆ. ದುಬಾರೆ ಆನೆ ಶಿಬಿರದವನಾದ ಈತನನ್ನು 1990ರಲ್ಲಿ ದೊಡ್ಡಬೆಟ್ಟದಲ್ಲಿ ಸೆರೆ ಹಿಡಿಯಲಾಗಿದೆ. 14 ವರ್ಷದಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.
ಒಟ್ಟಾರೆಯಾಗಿ ಹೇಳುವುದಾದರೆ ಮೈಸೂರು ದಸರಾಕ್ಕೆ ಕಳೆ ನೀಡುವುದೇ ಗಜಪಡೆ. ಈ ಗಜಪಡೆಯಲ್ಲಿ ಕೊಡಗಿನ ಗಜಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಹೆಮ್ಮೆ ತಂದಿದೆ.

English summary
Majority of Mysuru dasara elephants from Kodagu camp. Balarama, Abhimanyu, Vijaya, Kaveri, Prashantha, Gopalaswami and Vikarama Participating in Dasara. These elephants from Kodagu camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X