ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದ ಕೊಡಗಿನ ಪಿ.ಸಿ.ತಮ್ಮಯ್ಯ

By ಮಡಿಕೇರಿ, ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜನವರಿ. 16 : ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗು ಮೂಲದ ಮೇಜರ್ ಜನರಲ್ ಪಿ.ಸಿ.ತಿಮ್ಮಯ್ಯ ಅವರು ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಹೊಂದಿದ್ದಾರೆ.

ಇವರು ಕೊಡಗಿನ ಪಟ್ಟಚೆರುವಂಡ ಪೊನ್ನಪ್ಪ ಚಂಗಪ್ಪ ಹಾಗೂ ಗೌರು ಚಂಗಪ್ಪರ ಪುತ್ರರಾಗಿದ್ದು, ಭುವನೇಶ್ವರ ಸೈನಿಕ ಶಾಲೆಯಲ್ಲಿ ಓದಿ, ಖಡಕ್ ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಇಂಡಿಯನ್ ಮಿಲಿಟರಿ ಆಕಾಡೆಮಿ ಡೆಹ್ರಾಡೂನ್ನಂದ "ಖಡ್ಗ ಗೌರವ" ದೊಂದಿಗೆ ಭಾರತೀಯ ಸೇನೆಯನ್ನು 1981ರ ಜುಲೈ 31 ರಂದು ಸೇರ್ಪಡೆಗೊಂಡಿದ್ದರು.

Major Gen P C Thimmaiah promoted as Lieutenant General

ಬಾಂಗ್ಲಾದೇಶದಲ್ಲಿ ಭಾರತೀಯ ಹೈಕಮೀಷನರ್ ಗೆ ರಕ್ಷಣಾ ಸಲಹೆಗಾರರಾಗಿ ಕೆಲಸ ಮಾಡಿದ ತಿಮ್ಮಯ್ಯ ಪಶ್ಚಿಮ ಕಮಾಂಡ್‍ ನ ಮುಖ್ಯಸ್ಥ ಹಾಗೂ ಪೂರ್ವ ಕಮಾಂಡಿನ ಮುಖ್ಯಸ್ಥರ ಪ್ರಶಂಸಾ ಪತ್ರಗಳಿಗೆ ಪಾತ್ರರಾಗಿದ್ದಾರೆ.

ಸೇನಾ ಮುಖ್ಯಸ್ಥರ ಎಡಿಸಿ, ಅಸ್ಸಾಂ ರೈಫಲ್ಸ್ ನ ಮುಖ್ಯಸ್ಥರಾಗಿ, ಭಾರತೀಯ ಭೂಸೇನಾ ಕೇಂದ್ರ ಕಚೇರಿಯಲ್ಲಿ ಸಹಾಯಕ ಮಿಲಿಟರಿ ಕಾರ್ಯದರ್ಶಿಯಾಗಿ, ವಿಶ್ವ ಸಂಸ್ಥೆಯ ಕಾರ್ಯಪಾಲನಾ ಪಡೆಯಲ್ಲಿ ಅಂಗೋಲಾದಲ್ಲಿ ಮಿಲಿಟರಿ ವೀಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಇದೀಗ ಲೆಫ್ಟಿನೆಂಟ್ ಜನರಲ್ ಆಗಿ ಸೇನಾ ಮುಖ್ಯಸ್ಥರ ಕಚೇರಿಯಲ್ಲಿರುವ ದೂರು ಮತ್ತು ಸಲಹಾ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ.

ಪತ್ನಿ ನೀನಾ ಹಾಗೂ ಪುತ್ರರ ಪೈಕಿ ಅರ್ಜುನ್ ತಿಮ್ಮಯ್ಯ ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಆಗಿದ್ದರೆ, ಮತ್ತೊಬ್ಬ ಪುತ್ರ ಅಕ್ಷಯ್ ತಿಮ್ಮಯ್ಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

English summary
Indian Land Army Major General P C Thimmaiah has been promoted as Lieutenant General and has been posted as Additional Director General of Army Complaints and Grievances Centre, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X