ಮುಂಗಾರು ಮಳೆಯ ಕೊಡಗಿನ ಅತಿಥಿಗಳು!

Written by: ಬಿ.ಎಂ.ಲವಕುಮಾರ್
Subscribe to Oneindia Kannada

ಮುಂಗಾರು ಮಳೆಯೇ ಹಾಗೆ... ಅದರ ಲೀಲೆಗೆ ಒಳಗಾಗದವರೇ ಇಲ್ಲ... ಬಿಸಿಲ ಬೇಗೆಗೆ ಬೆಂದು ಹೋದ ಪ್ರಕೃತಿಗೆ ಪುಳಕ ನೀಡುತ್ತೆ... ಹೆಬ್ಬಂಡೆಗಳ ಮೇಲೆ ಸೊರಗಿ ಹೋದ ಜಲಧಾರೆಗಳಿಗೆ ಮರು ಜೀವ ತುಂಬುತ್ತೆ...

ಮಲೆನಾಡಿಗೊಂದು ಸುತ್ತು ಹೊಡೆದರೆ ನಿಸರ್ಗದ ಸುಂದರ ನೋಟ ನಮ್ಮನ್ನು ಮೂಕಸ್ಮಿತರನ್ನಾಗಿಸಿ ಬಿಡುತ್ತದೆ. ಪಕೃತಿಯ ಚೆಲುವೇ ಒಂದು ವಿಸ್ಮಯ. ಅದು ಮೊಗೆದಷ್ಟೂ ಮುಗಿಯದ ಅಕ್ಷಯಪಾತ್ರೆ. [ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ]

ಮುಂಗಾರು ಮಳೆಗೆ ನೀವು ಯಾವತ್ತಾದರೊಂದು ದಿನ ಹಾಗೆ ಸುಮ್ಮನೆ ಕೊಡಗಿನ ಕಾಡು, ಗದ್ದೆ ಬಯಲು, ಕಾಫಿ, ಏಲಕ್ಕಿ ತೋಟಗಳ ನಡುವೆ ಹೆಜ್ಜೆ ಹಾಕುತ್ತಾ ಹೋಗಿ ನಿಸರ್ಗದ ವಿಸ್ಮಯಗಳು ಒಂದರ ಮೇಲೊಂದರಂತೆ ತೆರೆಯುತ್ತಾ ಹೋಗುತ್ತವೆ.[ಕೊಡಗಿನಲ್ಲಿ ಆರಿದ್ರಾ ಮಳೆಗೆ ಮಲ್ಲಳ್ಳಿಯಲ್ಲಿ ಜಲನರ್ತನ]

ಮಳೆ ಬಿದ್ದು ಭೂಮಿ ತೇವವಾದಾಗ ಗಿಡ, ಮರ, ಬೆಟ್ಟಗುಡ್ಡ ಹೀಗೆ ಎಲ್ಲೆಲ್ಲಿಂದಲೂ ಹೊಸ ಅತಿಥಿಗಳು ಗೋಚರಿಸಿ ನಮಗೆ ಅಚ್ಚರಿ ಮೂಡಿಸಿ ಬಿಡುತ್ತಾರೆ. ನಮ್ಮ ಮುಂದೆ ಕೋಟ್ಯಂತರ ಜೀವ ರಾಶಿಗಳಿವೆ. ಅವುಗಳ ಬಣ್ಣ, ಆಕಾರ, ಎಲ್ಲವೂ ಚಿತ್ರ ವಿಚಿತ್ರ. [ಕೊಡಗಿನ ಹಾರಂಗಿ, ಚಿಕ್ಲಿಹೊಳೆ ಜಲಾಶಯಗಳಲ್ಲಿ ಜೀವಕಳೆ!]

ಜೀವ ರಾಶಿಗಳು ಹಿಂದೆ ಹೇರಳವಾಗಿದ್ದವು

ಈ ಜೀವ ರಾಶಿಗಳು ಹಿಂದೆ ಹೇರಳವಾಗಿದ್ದವು. ಅವು ಅಲ್ಲಲ್ಲಿ ಕಂಡಾಗ ಜನರಿಗೂ ಏನೂ ಅನ್ನಿಸುತ್ತಿರಲಿಲ್ಲ.

ಣ್ಣಿಗೆ ಗೋಚರಿಸಿ ಅಚ್ಚರಿ ಮೂಡಿಸಿ ಬಿಡುತ್ತವೆ

ಈಗ ಆಧುನಿಕತೆಯ ಭರಾಟೆಯಲ್ಲಿ ಹಲವು ಜೀವರಾಶಿಗಳು ಅಳಿದು ಹೋಗಿವೆ. ಇನ್ನುಳಿದವು ಕೆಲವೊಮ್ಮೆ ನಮ್ಮ ಕಣ್ಣಿಗೆ ಗೋಚರಿಸಿ ಅಚ್ಚರಿ ಮೂಡಿಸಿ ಬಿಡುತ್ತವೆ. ಜೊತೆಗೆ ಸುದ್ದಿಯಾಗುತ್ತವೆ.

ಕೆಲವು ಕುತೂಹಲ ಹುಟ್ಟಿಸುತ್ತವೆ

ಕೆಲವೊಂದು ಜೀವರಾಶಿಗಳು ನೋಡಿದ ತಕ್ಷಣ ಭಯಹುಟ್ಟಿಸಿದರೆ ಮತ್ತೆ ಕೆಲವು ಕುತೂಹಲ ಹುಟ್ಟಿಸುತ್ತವೆ.

ಕೆಲವು ನೋಡಲು ಸುಂದರ ಆದರೆ ಭಯಂಕರ

ಕೆಲವು ನೋಡಲಷ್ಟೆ ಭಯಂಕರ ಆದರೆ ಮೃದು ಜೀವಿಗಳು... ಇನ್ನು ಕೆಲವು ನೋಡಲು ಸುಂದರ ಆದರೆ ಭಯಂಕರ.

ಅತಿಯಾದ ರಾಸಾಯನಿಕ ಬಳಕೆಯಿಂದ ನಾಶ

ಮಲೆನಾಡಿನಲ್ಲಿ ಅಡ್ಡಾಡುವಾಗ ಅಪರೂಪದ ಜೀವರಾಶಿಗಳನ್ನು ಎಲ್ಲರು ನೋಡಿರಬಹುದು. ಪರಿಸರ ನಾಶ, ಅತಿಯಾದ ರಾಸಾಯನಿಕ ಬಳಕೆಯಿಂದ ಕೆಲವು ಅಪರೂಪದ ಜೀವಿಗಳ ಸಂತತಿ ಉಳಿಯಬಹುದೆಂಬ ಖಚಿತತೆಯೇ ಇಲ್ಲವಾಗಿದೆ.

English summary
Kodagu : This Monsoon welcome unique insects with thick forests around deadly insects and feisty blood-sucking leeches. A pre monsoon, monsoon which can extend up to six months every year
Please Wait while comments are loading...