ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣಪತಿ ಆತ್ಮಹತ್ಯೆ, ಸಿಐಡಿ ತನಿಖೆಗೆ ಗಡುವು ನಿಗದಿ

|
Google Oneindia Kannada News

ಮಡಿಕೇರಿ, ಆಗಸ್ಟ್ 06 : ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಸೆಪ್ಟೆಂಬರ್ 19ರೊಳಗೆ ಸಲ್ಲಿಸಬೇಕು ಎಂದು ಮಡಿಕೇರಿ ಕೋರ್ಟ್ ಸಿಐಡಿಗೆ ಸೂಚನೆ ನೀಡಿದೆ. ಸಿಐಡಿ ಅಧಿಕಾರಿಗಳು ಮಡಿಕೇರಿ ಪೊಲೀಸರಿಂದ ಎಫ್‌ಐಆರ್ ಪಡೆದುಕೊಂಡು ತನಿಖೆ ಆರಂಭಿಸಿದೆ.

ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಯೇ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಸಿಐಡಿ ಡಿವೈಎಸ್‌ಪಿ ಇ.ಬಿ.ಶ್ರೀಧರ್ ಅವರು ಮಡಿಕೇರಿ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.[ಗಣಪತಿ ಆತ್ಮಹತ್ಯೆ : ನ್ಯಾಯಾಂಗ ತನಿಖೆಗೆ ವ್ಯವಸ್ಥೆಗಳೇ ಇಲ್ಲ!]

mk ganapathi

ಹೈಕೋರ್ಟ್ ನಿರ್ದೇಶನದಂತೆ ತನಿಖೆ ಮುಂದುವರೆಸಿದ್ದೇವೆ. ಅಂತಿಮ ವರದಿಯನ್ನು ನೀಡಲು ಕಾಲಾವಕಾಶ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಧೀಶೆ ಅನ್ನಪೂರ್ಣ ಅವರು ಸೆ.19ರೊಳಗೆ ಅಂತಿಮ ವರದಿ ನೀಡಿ ಎಂದು ಸೂಚಿಸಿದೆ.[ಗಣಪತಿ ಆತ್ಮಹತ್ಯೆ : ಕೆಜೆ ಜಾರ್ಜ್ ವಿರುದ್ಧ ಎಫ್ ಐಆರ್]

ಎಫ್‌ಐಆರ್ ಪ್ರತಿ ಸಿಐಡಿಗೆ : ಮಡಿಕೇರಿ ಕೋರ್ಟ್ ಆದೇಶದಂತೆ ಮಡಿಕೇರಿ ನಗರ ಠಾಣೆ ಪೊಲೀಸರು ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿ ಕೆ.ಜೆ.ಜಾರ್ಜ್‌, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ, ಎ.ಎಂ.ಪ್ರಸಾದ್‌ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ. ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ಠಾಣೆಗೆ ಭೇಟಿ ನೀಡಿ ಐಪಿಸಿ 306ರ ಅಡಿ (ಆತ್ಮಹತ್ಯೆಗೆ ಪ್ರಚೋದನೆ) ದಾಖಲಾಗಿದ್ದ ಎಫ್‌ಐಆರ್‌ ಪ್ರತಿಯನ್ನು ಪಡೆದುಕೊಂಡಿದೆ.

English summary
Madikeri JMFC court directed CID to submit final report on DySP Ganapathi suicide case on September 19, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X