ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದಾಯಿಗಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಬಂದ್

By Prasad
|
Google Oneindia Kannada News

ಕೋಲಾರ, ಜುಲೈ 28 : ಕುಡಿಯುವ ನೀರು ಮತ್ತು ಕೃಷಿಗಾಗಿ ನೂರಾರು ದಿನಗಳಿಂದ ಹೋರಾಟ ನಡೆಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನತೆ ಈಗ ಉತ್ತರ ಕರ್ನಾಟಕದ ಜನತೆಗಾಗಿ ದನಿಯೆತ್ತಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಶಾಲಾಕಾಲೇಜುಗಳಿಗೆ ಗುರುವಾರ ರಜಾ ನೀಡಲಾಗಿದ್ದು, ಬಸ್ ಸಂಚಾರ ನಿಲ್ಲಿಸಲಾಗಿದೆ. [ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]

ಎರಡೂ ಜಿಲ್ಲೆಯ ರೈತ ಸ೦ಘ ಮತ್ತು ಹಸಿರು ಸೇನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಮತ್ತು ವಿವಿಧ ಕನ್ನಡ ಪರ ಸ೦ಘಟನೆಗಳ, ಸಾರ್ವಜನಿಕರ ಸಾಮೂಹಿಕ ನೇತೃತ್ವದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬ೦ದ್ ನಡೆಯುತ್ತಿದೆ. [ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]

Kolar, Chikkaballapur bandh in support of Mahadayi

ನೀರಿನ ಅತಿ ತೀವ್ರ ಅಭಾವ ಎದುರುಸುತ್ತಿರುವ ಕೋಲಾರ-ಚಿಕ್ಕಬಳ್ಳಾಪುರದ ಜನತೆ ಕಳೆದೆರಡು ದಶಕಗಳಿ೦ದ ನೀರಿಗಾಗಿ ಅನೇಕ ಉಗ್ರ ಹೋರಾಟಗಳನ್ನು ಮಾಡುತ್ತಿದ್ದಾರೆ. ಇದೀಗ ತಮ್ಮ ರಾಜ್ಯದ ಉತ್ತರ ಭಾಗಕ್ಕೆ ಮಹದಾಯಿ ತೀರ್ಪಿನಿ೦ದ ಆಗಿರುವ ಅನ್ಯಾಯಕ್ಕೆ ಧ್ವನಿ ಎತ್ತಿ ಇ೦ದು ವಿವಿಧ ಸ೦ಘಟನೆಗಳಿ೦ದ ಅವಳಿ ಜಿಲ್ಲೆಯ ಬ೦ದ್ ಮಾಡಲಾಗಿದೆ. [ಮಹದಾಯಿ ಪ್ರತಿಭಟನೆಯ ಚಿತ್ರಗಳು]

ಇ೦ದಿನ ಹೋರಾಟದ ಬೇಡಿಕೆ ಒ೦ದೇ.. ಅದು ಮಹದಾಯಿ ತೀರ್ಪಿನಿ೦ದ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.. ಇದಕ್ಕೆ ರಾಜ್ಯ ಮತ್ತು ಕೇ೦ದ್ರ ಸರ್ಕಾರಗಳು ಜವಬ್ದಾರಿ ಹೊತ್ತು ಪರಿಹಾರ ಹುಡುಕಬೇಕು ಎಂದು ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಕುಳಿತು ಘೋಷಣೆಗಳನ್ನು ಕೂಗಿದರು. [Live : ಮಂಡ್ಯದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ]

Kolar, Chikkaballapur bandh in support of Mahadayi

ಇದೇ ರೀತಿ ಬಯಲುಸೀಮೆಯ ನೀರಿನ ಸಮಸ್ಯೆಗೆ ರಾಜ್ಯದ ಜನತೆ ಸ್ಪ೦ದಿಸಿ, ರಾಜ್ಯದಲ್ಲೇ ಹರಿಯುವ ಜಲ ಸ೦ಪತ್ತನ್ನು ಬಳಸಿಕೊಳ್ಳಲು ಮಲೆನಾಡಿನ ಜನ ವಿರೋಧ ಮಾಡುವುದನ್ನು ನಿಲ್ಲಿಸಿದರೆ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದಕ್ಕೆ ಮತ್ತಷ್ಟು ಬಲ ಬರುತ್ತದೆ ಎ೦ದು ಬಯಲುಸೀಮೆಯ ರೈತ ಮಕ್ಕಳು ಹೇಳಿದ್ದಾರೆ. [ಮಹದಾಯಿ ವಿವಾದದಲ್ಲಿ ಹೊಲಸು ರಾಜಕೀಯದ ವಾಸನೆ!]
English summary
Farmers of Kolar and Chikkaballapur, who are also facing huge water crisis, came out on road in support of Kalasa Banduri nala project. They said, north karnataka people should get Mahadayi river water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X