ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಬೆಂಬಲಿಸುವ ಜಮೀರ್ ಅಹಮದ್ ತಂತ್ರ ಅತಂತ್ರ!

|
Google Oneindia Kannada News

ಬೆಂಗಳೂರು, ಮೇ 28 : 'ಜೆಡಿಎಸ್ ಪಕ್ಷ ತಮಗೆ ತಾಯಿ ಇದ್ದಂತೆ, ತಾಯಿಯನ್ನು ಮರೆತರೆ ಅನ್ನ ಸಿಗುವುದಿಲ್ಲ'. 'ಜೆಡಿಎಸ್ ಪಕ್ಷದ ಜೋಪಡಿಯೇ ತಮಗೆ ಮನೆ. ಕಾಂಗ್ರೆಸ್ ಮತ್ತು ಬಿಜೆಪಿಯ ಹಂಗಿನ ಅರಮನೆ ತಮಗೆ ಬೇಕಿಲ್ಲ' ಇವೆಲ್ಲಾ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರ ಡೈಲಾಗ್‌ಗಳು.

ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂದು ಹೇಳುವ ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಪಾಳಯದಲ್ಲಿ ಸದಾ ಗುರುತಿಸಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮುದ್ದೆ ಸವಿದಿದ್ದ ಜಮೀರ್ ಈಗ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. [ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ]

zameer ahmed khan

'ರಾಜ್ಯಸಭೆ ಚುನಾವಣೆಯಲ್ಲಿ ಐವರು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತೇವೆ' ಎಂದು ಹೇಳಿದ್ದ ಜಮೀರ್ ಅಹಮದ್ ಖಾನ್, ಶುಕ್ರವಾರ ದೆಹಲಿಯಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾತುಕತೆಯ ವಿವರಗಳು ಪೂರ್ಣವಾಗಿ ಲಭ್ಯವಾಗಿಲ್ಲ. [ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ ಜಮೀರ್ ಅಂಡ್ ಟೀಂ]

ಜಮೀರ್‌ಗೆ ಕೈಕೊಟ್ಟ ಕಾಂಗ್ರೆಸ್ : ಮೇ 26ರಂದು ಬೆಂಗಳೂರಿನಲ್ಲಿ ಮಾತನಾಡಿದ್ದ ಜಮೀರ್ ಅಹಮದ್ ಖಾನ್ ಅವರು, 'ಜೆಡಿಎಸ್‌ನ ಐವರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ಬೆಂಬಲ ನೀಡುತ್ತೇವೆ. ಈ ಕುರಿತು ನಾವು ಈಗಾಗಲೇ ತೀರ್ಮಾನ ಕೈಗೊಂಡಿದ್ದೇವೆ' ಎಂದು ಹೇಳಿದ್ದರು. [ಚಿತ್ರಗಳು : ಸಿದ್ದರಾಮಯ್ಯ ಜೊತೆ ಮುದ್ದೆ ಸವಿದ ಜಮೀರ್!]

ಆದರೆ, ಶನಿವಾರ ಎಐಸಿಸಿ ರಾಜ್ಯಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೆ.ಸಿ.ರಾಮಮೂರ್ತಿ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಮಾಜಿ ಸಚಿವರಾದ ಆಸ್ಕರ್ ಫರ್ನಾಂಡೀಸ್ ಮತ್ತು ಜೈರಾಮ್ ರಮೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಕೆ.ಸಿ.ರಾಮಮೂರ್ತಿ ಅವರು 3ನೇ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕಿತ್ತು. ಆದರೆ, ಪಕ್ಷ ಅವರಿಗೆ ಟಿಕೆಟ್ ನೀಡಿಲ್ಲ.

ಕನ್ನಡಿಗರಿಗೆ ಟಿಕೆಟ್ : ಜೆಡಿಎಸ್ ಪಕ್ಷ ಸಹ ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಹೊಂದಿದೆ. 'ಪಕ್ಷ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಕನ್ನಡಿಗರಿಗೆ ಟಿಕೆಟ್ ನೀಡಲಾಗುತ್ತದೆ' ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಪಕ್ಷದ ಅಭ್ಯರ್ಥಿಗೆ ಜಮೀರ್ ಅಂಡ್ ಟೀಮ್ ಬೆಂಬಲ ನೀಡಲಿದೆಯೇ? ಕಾದು ನೋಡಬೇಕು. [ರಾಜ್ಯಸಭೆ ಚುನಾವಣೆಗೆ ಕನ್ನಡಿಗರಿಗೆ ಟಿಕೆಟ್ : ಎಚ್ಡಿಕೆ]

ಕಾಂಗ್ರೆಸ್‌ ಬೆಂಬಲಿಸುವ ಶಾಸಕರು

* ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ)
* ಚೆಲುವರಾಯಸ್ವಾಮಿ (ನಾಗಮಂಗಲ)
* ಎಚ್.ಸಿ.ಬಾಲಕೃಷ್ಣ (ಮಾಗಡಿ)
* ಇಕ್ಬಾಲ್ ಅನ್ಸಾರಿ (ಗಂಗಾವತಿ)
* ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ)

English summary
Chamarajpet JDS MLA Zameer Ahmed Khan met Karnataka Congress in-charge Digvijay Singh on Friday, May 27, 2016. Few days back Zameer Ahmed Khan announced that, 5 JDS MLA's will support for Congress in Rajya sabha election scheduled on June 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X