ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಪಾಸ್‌ಪೋರ್ಟ್‌ ವಾಪಸ್ ಕೊಟ್ಟ ಕೋರ್ಟ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ವಿದೇಶ ಪ್ರವಾಸ ಕೈಗೊಳ್ಳಬಹುದು. ಲೋಕಾಯುಕ್ತ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರ ಪಾಸ್‌ಪೋರ್ಟ್‌ಅನ್ನು ಮರಳಿಸಿದೆ.

ಸೋಮವಾರ ಯಡಿಯೂರಪ್ಪ ಅವರ ವಿರುದ್ಧ ವಕೀಲ ಸಿರಾಜಿನ್‌ ಬಾಷಾ ಸಲ್ಲಿಸಿದ್ದ ನಾಲ್ಕು ದೂರುಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಮತ್ತು 2012ರಿಂದ ವಶದಲ್ಲಿ ಇಟ್ಟುಕೊಂಡಿದ್ದ ಪಾಸ್‌ಪೋರ್ಟ್‌ ಅನ್ನು ವಾಪಸ್ ನೀಡುವಂತೆ ಆದೇಶ ನೀಡಿದೆ. [ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು]

yeddyurappa

ಎರಡು ವಾರಗಳಿಂದ ಕೋರ್ಟ್‌ನಲ್ಲಿ ಯಡಿಯೂರಪ್ಪ ಅವರಿಗೆ ರಿಲೀಫ್ ಸಿಗುತ್ತಿದೆ. ಕಳೆದ ವಾರ 5 ಅಕ್ರಮ ಡಿ-ನೋಟಿಫಿಕೇಷನ್‌ ಪ್ರಕರಣಗಳಲ್ಲಿ ಅಂದಿನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ನೀಡಿದ್ದ ಪೂರ್ವಾನುಮತಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿತ್ತು. [ಯಡಿಯೂರಪ್ಪ ವಿರುದ್ಧದ 4 ದೂರು ರದ್ದು]

ಹೈಕೋರ್ಟ್ ಆದೇಶದ ಪ್ರತಿಯನ್ನು ಬಿಎಸ್‌ವೈ ಪರ ವಕೀಲರಾದ ಸಿ.ವಿ. ನಾಗೇಶ್ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಯಡಿಯೂರಪ್ಪ ವಿರುದ್ಧದ ದೂರನ್ನೂ ರದ್ದು ಮಾಡಬೇಕು ಎಂದು ಕೋರಿದ್ದರು. ಇದನ್ನು ಮಾನ್ಯ ಮಾಡಿದ ಕೋರ್ಟ್, 4 ಪ್ರಕರಣಗಳಲ್ಲಿ ಜಾಮೀನು ಪಡೆಯುವಾಗ ಅವರು ಸಲ್ಲಿಸಿದ್ದ ಬಾಂಡ್‌ ರದ್ದುಪಡಿಸಿದ್ದು, ವಶಪಡಿಸಿಕೊಂಡಿದ್ದ ಪಾಸ್‌ಪೋರ್ಟ್‌ ಮರಳಿಸುವಂತೆ ಆದೇಶ ನೀಡಿದೆ.

ರಾಜ್ಯ ಘಟಕದಲ್ಲಿ ಹೊಸ ಚೈತನ್ಯ : ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಿರುವುದರಿಂದ ಕರ್ನಾಟಕ ಬಿಜೆಪಿಗೆ ಹೊಸ ಚೈತನ್ಯ ಬಂದಿದೆ. ರಾಜ್ಯದಲ್ಲಿ ಇಂದಿಗೂ ಯಡಿಯೂರಪ್ಪ ಅವರು ಪಕ್ಷದ ಪ್ರಬಲ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. [ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಇಲ್ಲಿ ಸಹಿ ಹಾಕಿ]

ತಮ್ಮ ಮೇಲಿನ ಆರೋಪಗಳ ಕಾರಣದಿಂದಾಗಿ ಸಕ್ರಿಯ ರಾಜಕಾರಣದಿಂದ ಯಡಿಯೂರಪ್ಪ ಅವರು ಸ್ಪಲ್ಪ ದೂರವಾಗಿದ್ದರು. ಈಗ ಪ್ರಕರಣಗಳು ರದ್ದಾಗಿರುವುದರಿಂದ ಅವರು ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ.

English summary
Former Chief Minister of Karnataka, B.S.Yeddyurappa has got his passport back. The passport that was impounded in the year 2012 following his arrest on alleged corruption charges was returned to him by special Lokayukta court which also quashed 4 FIRs against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X