ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?

|
Google Oneindia Kannada News

ಬೆಂಗಳೂರು, ಏ. 10: ಸಾಹಿತಿಗಳ ಗೋಮಾಂಸ ಭಕ್ಷಣೆ ವಿಚಾರಕ್ಕೆ ವಿಭಿನ್ನ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಗಳನ್ನು ತರಾಟೆಗೆ ತೆಗೆದುಕೊಂಡಿರುವ ನಾಗರಿಕರು ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ.

ಗೋಮಾಂಸ ಭಕ್ಷಣೆ ಕುರಿತಂತೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, 'ಅವರಿಗೆ ಪ್ರೀತಿಯಾದ ಆಹಾರವನ್ನು ಅವರು ತಿನ್ನಲಿ, ಕುರಿ ಮಾಂಸ ತಿನ್ನುವರು ಕುರಿ ಮಾಂಸ ತಿನ್ನಲಿ , ಗೋಮಾಂಸ ತಿನ್ನುವವರು ಗೋ ಮಾಂಸ ತಿನ್ನಲಿ' ಎಂದು ಹೇಳಿಕೆ ನೀಡಿದ್ದಾರೆ.[ಗೋಮಾಂಸ ಭಕ್ಷಣೆ: ವಿವಾದ ಸೃಷ್ಟಿಸಿದ ಹೇಳಿಕೆಗಳು]

beef

ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಾಹಿತಿಗಳಿಂದ ಅನಾಗರೀಕ ವರ್ತನೆಯಾಗಿದೆ. ಸಮಾಜ ತಲೆತಗ್ಗಿಸುವಂಥ ಕೆಲಸ ಇದಾಗಿದ್ದು ಸರ್ಕಾರ ಹಿಂದಿನಿಂದ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಮತ್ತು ಒನ್ಇಂಡಿಯಾದ ಗುರುವಾರದ ವರದಿಗೆ ಬಂದ ಪ್ರಶ್ನೆಗಳ ಕೆಲ ಸಾಲುಗಳು ಇಲ್ಲಿದೆ.

* ಹಿಂದೂ ದಲಿತರು ಎಂದೂ ಗೋಮಾಂಸ ತಿಂದಿಲ್ಲ. ಅವರ ಹೆಸರಿನಲ್ಲಿ ಯಾಕೆ ಸುಮ್ಮನೆ ಇಲ್ಲಸಲ್ಲದ ತಗಾದೆ ತೆಗಿತೀರಿ? ಒಂದು ವೇಳೆ ಬ್ರಾಹ್ಮಣರು ಪುರಾಣಕಾಲದಲ್ಲಿ ಗೋಮಾಂಸ ಭಕ್ಷಣೆ ಮಾಡುತ್ತಿದ್ದರು ಅಂತ ಇದ್ದರೆ, ಪುರಾಣಕಾಲದ ಎಲ್ಲ ರೀತಿ ರಿವಾಜುಗಳನ್ನು ಪುನಃ ಸಮಾಜಮುಖಿಗೆ ತರಲು ನೀವು ತಯಾರಿದ್ದೀರಾ?

* ನಿಷ್ಠಾವಂತ ಅಧಿಕಾರಿ ಡಿಕೆ ರವಿ ಸಾವಿಗೀಡಾದಾಗ ಇಲ್ಲಸ ಸಾಮಾಜಿಕ ಕಾಳಜಿ ಈಗ ಎಲ್ಲಿಂದ ಬಂತು?[ಅನಂತಮೂರ್ತಿ ಗೋಮಾಂಸ ಹೇಳಿಕೆಗೆ ಬ್ರಾಹ್ಮಣರ ಖಂಡನೆ]

* ಆಹಾರ ಸಂಸ್ಕೃತಿ ಬಗ್ಗೆ ಪಾಠ ಮಾಡುವವರು ಮೊದಲು ದೇಶದ ಸಂಸ್ಕೃತಿ ತಿಳಿದಿಕೊಳ್ಳಲಿ

* ಗೋ ಮಾಂಸ ತಿನ್ನುವವರು ಮನುಷ್ಯರ ಮಾಂಸ ತಿನ್ನಲು ಹೇಸುವುದಿಲ್ಲ.

* ಬನ್ನಿ ಸರ್, ಪತ್ತೆನೇ ಇರಲಿಲ್ಲ, ಪ್ರಚಾರ ಬೇಕೆಂದು ಈಗ ನೆನಪಾಯಿತಾ?

* ನಿಮ್ಮೆಲ್ಲಾ ಸಿನಿಕತನ, ರಾಜಕೀಯ, ಬುದ್ಧಿವಂತಿಕೆ (?!), ವಿತ್ತಂಡವಾದಗಳನ್ನೊಮ್ಮೆ ಬದಿಗಿರಿಸಿ, ಒಮ್ಮೆ ಆ ಗೋಮಾತೆಯನ್ನು, ಆಕೆಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನವಿಟ್ಟು ನೋಡಿರಿ. ಆಕೆಯಿಂದ ನಿಮಗಾಗುವ ಉಪಕಾರವನ್ನು ಮನದಲ್ಲೊಮ್ಮೆ ಸ್ಮರಿಸಿಕೊಳ್ಳಿರಿ. ಆಗ ಗೋಮಾಂಸ ಭಕ್ಷಣೆಯಂತಹ ದುರ್ವಿಚಾರವು (ಒ೦ದು ವೇಳೆ ನೀವು ಮನುಷ್ಯರೇ ಆಗಿದ್ದಲ್ಲಿ) ನಿಮ್ಮ ಮನದಲ್ಲಿ ಸುಳಿಯಲಾರದು.-ದಿನಕರ್

* ಮಧ್ಯಪ್ರಾಚ್ಯ ದೇಶಗಳಲ್ಲಿ ಪ್ರಪಂಚದ ಎಲ್ಲ ಧರ್ಮದ ಜನರೂ ಕೆಲಸ, ಕಾರ್ಯಗಳನ್ನು ಮಾಡುತ್ತ ವಾಸವಾಗಿದ್ದಾರೆ. ಇದರಲ್ಲಿ ಕ್ರೈಸ್ತರು, ಹಿಂದೂಗಳು ಸಹ ಬಹಳ ಸಂಖ್ಯೆಯಲ್ಲಿ ಇದ್ದಾರೆ. ಇವರು ಸಹ ಹಂದಿಮಾಂಸವನ್ನ ಆಹಾರ ಅಂತ ಪರಿಗಣಿಸ್ತಾರೆ. ಸೌದಿ ಅರೇಬಿಯಾದ ಯಾವುದಾದರೂ ಟೌನ್ ಹಾಲಿನಲ್ಲಿ ಇದೇ ರೀತಿ ಹಂದಿಮಾಂಸ ಭಕ್ಷಣೆಗೆ ಚಾಲನೆ ಕೊಡುವ ತಾಕತ್ತು ನಿಮಗೆ ಇದೆಯಾ?-ಜಿಕೆ

* ನಿಮಗೆ ಸಂಸ್ಕೃತಿ, ನಾಗರಿಕತೆಯಂತೂ ಇಲ್ಲ, ಮನುಷ್ಯತ್ವವಾದರೂ ಬೇಡವೇ? ಮನುಷ್ಯತ್ವ ಎನ್ನುವ ಪದಕ್ಕೇನೀವು ಅವಮಾನ ಮಾಡಿದ್ದೀರಾ!

ಇನ್ನು ಅನೇಕ ರೀತಿಯ ಕಟುವಾದ ಹೇಳಿಕೆಗಳು, ಆಕ್ರೋಶ ಸಾಹಿತಿಗಳ ಮೇಲೆ ಮೂಡಿ ಬಂದಿದೆ. ಗುರುವಾರ ಸಂಜೆ ಬೆಂಗಳೂರಿನ ಪುರಭವನದ ಎದುರು ಏರ್ಪಡಿಸಿದ್ದ ಆಹಾರ ಸಂಸ್ಕೃತಿ ಉಳಿವು ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಗಿರೀಶ್ ಕಾರ್ನಾಡ್, ದಲಿತ ಸಾಹಿತಿ ಎಲ್ ಹನುಮಂತಯ್ಯ, ವಿಮರ್ಶಕ ಮರುಳಸಿದ್ದಪ್ಪ ಗೋಮಾಂಸ ಭಕ್ಷಣೆಗೆ ಮುಂದಾಗಿದ್ದರು. ಇದನ್ನು ಪೊಲೀಸರು ತಡೆದಿದ್ದು ಗೊಂದಲಕ್ಕೆ ಕಾರಣವಾಗಿತ್ತು.[ನವೀಕರಣಗೊಂಡ ಬೆಂಗಳೂರು ಪುರಭವನ ಹೇಗಿದೆ?]

ಘಟನೆನಂತರ ಗೋಮಾಂಸ ಭಕ್ಷಣೆ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗುದ್ದು ಏಪ್ರಿಲ್ 28 ರಂದು ವಿಚಾರಣೆ ನಡೆಯಲಿದೆ. ಮಹಾರಾಷ್ಟ್ರ ಸರ್ಕಾರ ಇತ್ತೀಚೆಗಷ್ಟೇ ಗೋಮಾಂಸ ನಿಷೇಧ ಮಾಡಿ ಆದೇಶ ಹೊರಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Karnataka Beef Drama, Friday updates. : Social media agog and upset with Kannada literary celebritys attempt to eat Beef in front of Town Hall Bengaluru. The controversial Beef eating movement was aimed at saving Food Culture
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X