ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿದೆ ವೈನ್ ಬೋಟಿಕ್

|
Google Oneindia Kannada News

ಬೆಂಗಳೂರು, ಜೂ. 23 : ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಮಾದರಿಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ವೈನ್ ಬೋಟಿಕ್ ಆರಂಭಿಸಲು ಕರ್ನಾಟಕ ದ್ರಾಕ್ಷಾರಸ ಮಂಡಳಿ ನಿರ್ಧರಿಸಿದೆ. ಬೆಂಗಳೂರು ನಗರದಲ್ಲಿ ಎರಡು ಮಾರಾಟ ಮಳಿಗೆಗಳು ಆರಂಭವಾಗಲಿವೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಅವರು ಈ ಕುರಿತು ಮಾಹಿತಿ ನೀಡಿದರು. ಎಂಎಸ್‌ಐಎಲ್ ರಾಜ್ಯದ ಬೇರೆ-ಬೇರೆ ಸ್ಥಳಗಳಲ್ಲಿ ಮಾರಾಟ ಮಳಿಗೆ ಆರಂಭಿಸಿರುವಂತೆ ವೈನ್ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು. [ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!]

wine

ಮೈಸೂರು, ಮಡಿಕೇರಿ, ಕಾರವಾರ, ಮಂಗಳೂರು, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ವೈನ್ ಬೋಟಿಕ್‌ಗಳನ್ನು ಆರಂಭಿಸಲಾಗುತ್ತದೆ. ಬೆಂಗಳೂರು ನಗರದಲ್ಲಿಯೂ ಎರಡು ಮಳಿಗೆಗಳನ್ನು ಆರಂಭಿಸಲಾಗುತ್ತದೆ. ಸಂಪೂರ್ಣ ಹವಾನಿಯಂತ್ರಿತವಾದ ಈ ಬೋಟಿಕ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತದೆ ಎಂದು ಕೃಷ್ಣ ಅವರು ವಿವರಣೆ ನೀಡಿದರು. [ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!]

ವೈನ್ ಸೇವನೆಯಿಂದ ಆಗುವ ಪ್ರಯೋಜನಗಳ ಮಾಹಿತಿ, ಗ್ರಾಹಕರಿಗೆ ಆಕರ್ಷಕ ಕೊಡುಗೆಗಳು, ವೈಜ್ಞಾನಿಕವಾಗಿ ವೈನ್ ಸಂಸ್ಕರಿಸುವ ವಿಧಾನ, ಮಹಿಳೆಯರು ವೈನ್ ಖರೀದಿ ಮಾಡಲು ಅನುಕೂಲವಾಗುವಂತಹ ವ್ಯವಸ್ಥೆಗಳನ್ನು ಬೋಟಿಕ್‌ಗಳಲ್ಲಿ ಕಲ್ಪಿಸಲಾಗುತ್ತದೆ ಎಂದು ಕೃಷ್ಣ ಅವರು ತಿಳಿಸಿದರು. [ವೈನು ಮತ್ತು ವಯನಾದ ಊಟಕ್ಕೆ ಫೈನ್ ಹೋಟೆಲ್]

ವಿವಿಧ ಜಿಲ್ಲೆಗಳಲ್ಲಿ ವೈನ್ ಮೇಳ : ಮುಂದಿನ ದಿನಗಳಲ್ಲಿ ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಬೀದರ್‌ನಲ್ಲಿ ವೈನ್ ಮೇಳವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಮಳೆಗಾಲದ ನಂತರ ಕೊಡಗಿನಲ್ಲಿ ವೈನ್ ಮೇಳ ನಡೆಸಲಾಗುವುದು ಎಂದರು.

ವಿಚಾರ ಸಂಕಿರಣ ಆಯೋಜನೆ : ದ್ರಾಕ್ಷಿ ಬೆಳೆಯುವ ಕುರಿತು ಕರ್ನಾಟಕ ದ್ರಾಕ್ಷಾರಸ ಮಂಡಳಿ ಮೈಸೂರು, ಹುಬ್ಬಳ್ಳಿ, ಬೀದರ್, ರಾಮನಗರ, ದಾವಣಗೆರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೈತರಿಗಾಗಿ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.

English summary
Karnataka Wine Board Managing Director Dr.B. Krishna said, board will set up wine boutiques in 11 districts across the State, including two in the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X