ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸರ್ಕಾರ ಲೋಕಾಯುಕ್ತರನ್ನು ರಕ್ಷಿಸುತ್ತಿರುವುದೇಕೆ?'

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05 : ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಹಾಳು ಮಾಡಿರುವ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರನ್ನು ಕರ್ನಾಟಕ ಸರ್ಕಾರ ರಕ್ಷಣೆ ಮಾಡುತ್ತಿದೆಯೇ? ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ. ಆಡಳಿತದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡದಿದ್ದರೆ ಪಕ್ಷ ರಾಜ್ಯ ಸರ್ಕಾರ ವಿರುದ್ಧ ಹೋರಾಟ ಮಾಡಲಿದೆ ಎಂದು ಆಮ್ ಆದ್ಮಿ ಪಕ್ಷ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿಯವರು, 'ದೇಶಕ್ಕೆ ಮಾದರಿಯಾಗಿದ್ದ ರಾಜ್ಯದ ಲೋಕಾಯುಕ್ತ ಸಂಸ್ಥೆಯನ್ನು ಇಂದು ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಪಾತ್ರವೂ ಇದೆ' ಎಂದು ಆರೋಪಿಸಿದರು. [ಲೋಕಾಯುಕ್ತದ ಭ್ರಷ್ಟಾಚಾರದಲ್ಲಿ ಅಕ್ರಮ ಹಣ ವರ್ಗಾವಣೆ?]

aam admi party

'ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರ ಮನೆಯ ಮೇಲೆ ಕೆಲವು ದಿನಗಳ ಹಿಂದೆ ಆದಾಯ ತೆರಿಗೆ ದಾಳಿ ನಡೆದಿದೆ. ಬಿಡಿಎ ಆಯುಕ್ತರಾಗಿರುವ ಶ್ಯಾಮ್ ಭಟ್ ಅವರು ಲೋಕಾಯುಕ್ತದ ಭ್ರಷ್ಟಾಚಾರ ಪ್ರಕರಣದ ಆರೋಪಿ ಅಶ್ವಿನ್ ರಾವ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಮಾಧ್ಯಗಳಲ್ಲಿ ಬರುತ್ತಿದೆ.' ['ಲೋಕಾಯುಕ್ತರನ್ನು ಬಂಧಿಸಿ, ವಿಚಾರಿಸಲು ಸಕಾಲ']

'ಇಂತಹ ವ್ಯಕ್ತಿಗಳನ್ನು ಅವರ ಸ್ಥಾನದಿಂದ ವಜಾ ಮಾಡಿ ತನಿಖೆಗೆ ಆದೇಶಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ' ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು. 'ಸರ್ಕಾರ ಭಾಸ್ಕರರಾವ್ ಅವರನ್ನು ರಕ್ಷಣೆ ಮಾಡಲು ಎಸ್‌ಐಟಿಯನ್ನು ನೇಮಕ ಮಾಡಿ ನಾಟಕವಾಡುತ್ತಿದೆ' ಎಂದು ಆರೋಪಿಸಿದರು. [ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಗೆ ಬಂಧನ ಭೀತಿ]

'ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಹಾಳು ಮಾಡಿದ ಮತ್ತು ಅದರ ಅಧಃಪತನಕ್ಕೆ ಕಾರಣವಾದ ಭಾಸ್ಕರರಾವ್‌ ಅವರನ್ನು ಎಸ್‍ಐಟಿ ಇಲ್ಲಿಯವರೆಗಿನ ಎರಡೂ ಆರೋಪಪಟ್ಟಿಗಳಲ್ಲಿ ಸಾಕ್ಷಿಯಾಗಿ ಪರಿಗಣಿಸುವ ಮೂಲಕ ನಗೆಪಾಟಲಿಗೀಡಾಗಿದೆ' ಎಂದು ಹೇಳಿದರು.

'ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಲಂಚವನ್ನು ನಿಯಂತ್ರಿಸಲು ಸರ್ಕಾರ ತಕ್ಷಣ ಮುಂದಾಗಬೇಕು. ಇಲ್ಲವಾದಲ್ಲಿ ಜನಾದೇಶವನ್ನು ಕಡೆಗಣಿಸಿ ಜನರನ್ನು ಹೀನಾಯವಾಗಿ ಕಾಣುತ್ತಿರುವ ಸರ್ಕಾರದ ವಿರುದ್ಧ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ' ಎಂದು ರವಿಕೃಷ್ಣಾ ರೆಡ್ಡಿ ಎಚ್ಚರಿಕೆ ನೀಡಿದರು.

English summary
Will Karnataka government protecting Lokayukta Y.Bhaskar Rao Aam Admi Party asked on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X