ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರ್ಗಿ ಹತ್ಯೆಯ ತನಿಖೆ ವಿಳಂಬಕ್ಕೆ ಯಾರು ಕಾರಣ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 30 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ. ಇತ್ತ ಹತ್ಯೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುತ್ತಿಲ್ಲ ಎಂದು ರಾಜ್ಯ ಸರ್ಕಾರವನ್ನು ದೂರುತ್ತಿದ್ದಾರೆ.

ಧಾರವಾಡದ ಕಲ್ಯಾಣ ನಗರದಲ್ಲಿನ ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ವಿದ್ಯಾರ್ಥಿಗಳ ಸೋಗಿನಲ್ಲಿ ಆಗಸ್ಟ್ 30ರ ಬೆಳಗ್ಗೆ 8.40ರ ಸುಮಾರಿಗೆ ಬಂದ ಇಬ್ಬರು ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಈ ಹತ್ಯೆ ನಡೆದು ಎರಡು ತಿಂಗಳು ಕಳೆದರೂ ಹಂತಕರ ಸುಳಿವು ಇನ್ನೂ ಪತ್ತೆಯಾಗಿಲ್ಲ. [ಕಲಬುರ್ಗಿ ಹತ್ಯೆಯಾಗಿ 2 ತಿಂಗಳು : ಎತ್ತ ಸಾಗಿದೆ ತನಿಖೆ?]

dharwad

ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾದಾಗ ಇದರ ತನಿಖೆ ಬೇಗ ಪೂರ್ಣಗೊಳ್ಳಲಿದೆ ಎಂದು ಜನರು ನಿರೀಕ್ಷಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಸಿದ್ದರಾಮಯ್ಯ ಅವರು ಮಠಗಳಿಗೆ ತೆರಳದೇ ಸಾಹಿತಿಗಳ ಮನೆಗೆ ಭೇಟಿ ನೀಡಿದ್ದರು. [ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]

ಸಾಹಿತಿಗಳು, ಬರಹಗಾರರಿಗೆ ಸಿದ್ದರಾಮಯ್ಯ ಅವರು ಅಪಾರವಾದ ಗೌರವ ಕೊಡುತ್ತಿರುವುದರಿಂದ ಬೇಗ ತನಿಖೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎರಡು ತಿಂಗಳು ಕಳೆದರೂ ಹತ್ಯೆ ಮಾಡಿದವರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

ಭದ್ರತೆ ಹಿಂಪಡೆಯಲಾಯಿತು : ಕಲಬುರ್ಗಿ ಅವರ ಹತ್ಯೆಯಾದಾಗ ಕೇಳಿಬಂದ ಮೊದಲ ಪ್ರಶ್ನೆ ಅವರಿಗೆ ನೀಡಿದ್ದ ಭದ್ರತೆಯನ್ನು ಏಕೆ ವಾಪಸ್ ಪಡೆಯಲಾಯಿತು? ಎಂಬುದು. ತಮಗೆ ನೀಡಿದ ಭದ್ರತೆಯನ್ನು ವಾಪಸ್ ಪಡೆಯುವಂತೆ ಕಲಬುರ್ಗಿ ಅವರು ಮನವಿ ಮಾಡಿದ್ದರು. ಕಲಬುರ್ಗಿ ಅವರ ಜೀವಕ್ಕೆ ಅಪಾಯವಿದೆ ಎಂಬ ಕುರಿತು ಗುಪ್ತಚರ ಇಲಾಖೆಯ ಸೂಚನೆಯೂ ಇರಲಿಲ್ಲವೇ ಎಂಬುದು ಸದ್ಯದ ಪ್ರಶ್ನೆ.

ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಮೊದಲು ಸಿಸಿಟಿವಿ ದೃಶ್ಯಾವಳಿಗಳು ಇಲ್ಲವೆಂದರು. ನಂತರ ಸಿಸಿಟಿವಿ ದೃಶ್ಯವಿದ್ದು ಅದು ಸ್ಪಷ್ಟವಾಗಿಲ್ಲ ಎಂದರು. ನಂತರ ಆರೋಪಿಗಳ ರೇಖಾಚಿತ್ರ ಬಿಡುಗಡೆ ಮಾಡಿದರು. ಆದರೆ, ಅವರ ಬಗ್ಗೆ ಇದುವರೆಗೆ ಸುಳಿವು ಲಭ್ಯವಾಗಿಲ್ಲ.

ಅಪರಿಚಿತ ಶವ ಪತ್ತೆ : ಕಲಬುರ್ಗಿ ಅವರ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟವಾದ ಸುಳಿವುಗಳು ಲಭ್ಯವಾಗಿಲ್ಲ. ಸದ್ಯ, ಬೆಳಗಾವಿಯಲ್ಲಿ ಸಿಕ್ಕ ಅಪರಿಚಿತ ಶವ ಕಲಬುರ್ಗಿ ಅವರನ್ನು ಕೊಂದ ರುದ್ರಪಾಟೀಲ್‌ನದ್ದು ಎಂಬ ಸುದ್ದಿ ಹಬ್ಬಿದೆ. ಆದರೆ, ಶವ ರುದ್ರಪಾಟೀಲ್‌ ಅವರದ್ದು ಎಂಬುದಕ್ಕೆ ಖಚಿತವಾದ ಪುರಾವೆ ಸಿಕ್ಕಿಲ್ಲ, ತನಿಖೆ ನಡೆಯುತ್ತಿದೆ.

English summary
In a country which has seen debates galore over the powers of the state in handling law and order, it comes as a surprise that the union government is being blamed for the murder of Professor M.M.Kalburgi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X