ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆಗೆ ಕಾರಣ ಯಾರು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 08 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಿಗಳ ವಿಚಾರದಲ್ಲಿ ಪದೇ-ಪದೇ ಇಕ್ಕಟ್ಟಿಗೆ ಸಿಲುಕುತ್ತಿದೆ. ಒಂದೇ ವಾರದಲ್ಲಿ ಇಬ್ಬರು ಡಿವೈಎಸ್‌ಪಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಅಧಿಕಾರಿಗಳ ಆತ್ಮಹತ್ಯೆಗೆ ವೈಯಕ್ತಿಕ ಕಾರಣವೇ?, ಹಿರಿಯ ಅಧಿಕಾರಿಗಳ ಒತ್ತಡ ಕಾರಣವೇ? ಎಂದು ಚರ್ಚೆ ನಡೆಯುತ್ತಿದೆ. ಆದರೆ, ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲವು ಅಧಿಕಾರಿಗಳ ಸಾವಿಗೆ ಒತ್ತಡ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. [ಕೊನೆಯಲ್ಲಿ ಡಿವೈಎಸ್ ಪಿ ಗಣಪತಿ ಹೇಳಿದ್ದೇನು?]

siddaramaiah

ಗುರುವಾರ ಮಂಗಳೂರು ಐಜಿ ಕಚೇರಿ (ಪಶ್ಚಿಮ ವಿಭಾಗ) ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಸ್ಥಳೀಯ ವಾಹಿನಿ ಜೊತೆ ಮಾತನಾಡಿರುವ ಗಣಪತಿ ಅವರು, ಸಾವಿಗೆ ಹಿರಿಯ ಅಧಿಕಾರಿ ಮತ್ತು ಸಚಿವರನ್ನು ದೂಷಿಸಿದ್ದಾರೆ. [ಗಣಪತಿ ಆತ್ಮಹತ್ಯೆ, ಸಚಿವ ಜಾರ್ಜ್ ಹೇಳುವುದೇನು?]

ಜುಲೈ 5ರ ಮಂಗಳವಾರ ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ತಿಂಗಳು ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆಗೆ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಕಿರುಕುಳ ಕಾರಣ ಎಂದು ಆರೋಪಿಸಿದ್ದರು. [ಚಿಕ್ಕಮಗಳೂರು DySP ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ]

ಸರ್ಕಾರದ ವರ್ತನೆ ಬದಲಾಗಬೇಕು : ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅದು ವೈಯಕ್ತಿಕ ಕಾರಣದಿಂದ ಎಂಬ ತೀರ್ಮಾನಕ್ಕೆ ಸರ್ಕಾರ ಬಂದು ಬಿಡುತ್ತದೆ. 2015ರಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡಾಗ ಸರ್ಕಾರ ವೈಯಕ್ತಿಕ ಕಾರಣ ಎಂದು ಘೋಷಣೆ ಮಾಡಿಬಿಟ್ಟಿತ್ತು.

ಅನುಪಮಾ ಶೆಣೈ ರಾಜೀನಾಮೆ ವಿಚಾರದಲ್ಲಿಯೂ ಸರ್ಕಾರ ಇದೇ ನೀತಿ ಅನುಸರಿಸಿತು. ಸಾಮಾಜಿಕ ಜಾಲ ತಾಣದಲ್ಲಿ ಸರ್ಕಾರದ ವಿರುದ್ಧ ಅವರು ಸಾಕಷ್ಟು ಆರೋಪಗಳನ್ನು ಮಾಡಿದರು. ಆದರೆ, ಸರ್ಕಾರ ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. [ಶೆಣೈ ಆರೋಪದಲ್ಲಿ ಹುರುಳಿಲ್ಲ, ತನಿಖೆಗೆ ಸಿದ್ಧ : ಬಳ್ಳಾರಿ ಎಸ್ಪಿ]

ಎಂ.ಕೆ.ಗಣಪತಿ ಅವರು ಆತ್ಮಹತ್ಯೆಗೆ ಮುನ್ನ ವಾಹಿನಿಯೊಂದರ ಜೊತೆ ಮಾತನಾಡಿ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಅವರ ಕಿರುಕುಳವೂ ನನ್ನ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ. ಸಿಐಡಿ ಈ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ತನಿಖೆ ನಡೆಸುವ ಅಧಿಕಾರಿಗಳು ಈ ನಿಟ್ಟಿನಲ್ಲಿಯೂ ತನಿಖೆ ನಡೆಸಬೇಕಿದೆ.

ಗಣಪತಿ ಅವರ ಹೇಳಿಕೆ ವಿಡಿಯೋ

ಅಧಿಕಾರಿಗಳು ಒತ್ತಡ ಬರುತ್ತಿದೆ ಎಂದು ದೂರು ಕೊಟ್ಟರೆ ಸರ್ಕಾರ ತಕ್ಷಣ ಸ್ಪಂದಿಸುವುದಿಲ್ಲ ಎಂಬುದು ಕೆಲವು ಅಧಿಕಾರಿಗಳ ಆರೋಪ. ರಾಜಕೀಯ ವ್ಯಕ್ತಿಗಳಿಂದ ಒತ್ತಡ ಬರುತ್ತಿದೆ ಎಂದರೆ ಸರ್ಕಾರ ಅದನ್ನು ಪರಿಗಣಿಸುತ್ತಿಲ್ಲ. ಇದರಿಂದಾಗಿ ಕೆಲವರು ರಾಜೀನಾಮೆ ಮತ್ತು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಕೆಲವು ಅಧಿಕಾರಿಗಳು.

English summary
The Siddaramaiah led dispensation in Karnataka has run into several problems when it comes to officials. Two cops have committed suicide in one week. Then there was the case of IAS officer D K Ravi who too had committed suicide sometime back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X