ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್, ಬಿಜೆಪಿಗೆ ಬಿಸಿ ತುಪ್ಪವಾದ ಭಿನ್ನಮತ!

By ಮೈತ್ರೇಯಿ
|
Google Oneindia Kannada News

ಬೆಂಗಳೂರು, ಜುಲೈ 04 : ಕರ್ನಾಟಕದಲ್ಲಿ 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈಗಲೇ ತಯಾರಿ ಆರಂಭಿಸಿವೆ. ಆದರೆ, ಎರಡೂ ಪಕ್ಷಗಳಿಗೆ ಭಿನ್ನಮತ ಬಿಸಿತುಪ್ಪವಾಗಿದೆ. ಭಿನ್ನಮತ ಶಮನಗೊಳಿಸುವ ಕಸರತ್ತು ಮುಂದುವರೆದಿದೆ.

ಮುಂಬರುವ ಚುನಾವಣೆ ಎರಡೂ ಪಕ್ಷಗಳಿಗೂ ಬಹುಮುಖ್ಯವಾಗಿದೆ. ಆದರೆ, ಭಿನ್ನಮತವನ್ನು ಶಮನಗೊಳಿಸಿಕೊಂಡು ಪಕ್ಷಗಳು ಚುನಾವಣಾ ಆಖಾಡಕ್ಕೆ ಇಳಿಯಬೇಕಾಗಿದೆ. ಸಂಪುಟ ಪುನಾರಚನೆ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಭಿನ್ನಮತದ ಬಿಸಿ ಅನುಭವಿಸುತ್ತಿದ್ದಾರೆ. ಭಿನ್ನಮತೀಯ ಶಾಸಕರ ಜೊತೆ ನಡೆಸಿದ ಸಂಧಾನ ಸಭೆಗಳು ಇನ್ನೂ ಫಲಕೊಟ್ಟಿಲ್ಲ. [ಅತೃಪ್ತಿಯ ಹೊಗೆಯ ನಡುವೆ, ಸದನದಲ್ಲೂ ಸಿದ್ದು ಮೇಲುಗೈ?]

yediyurappa-siddaramaiah

14 ಸಚಿವರನ್ನು ಸಂಪುಟದಿಂದ ಕೈ ಬಿಟ್ಟು 13 ಶಾಸಕರನ್ನು ಸಿದ್ದರಾಮಯ್ಯ ಅವರು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಅಂಬರೀಶ್, ವಿ.ಶ್ರೀನಿವಾಸ ಪ್ರಸಾದ್, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಎಂ.ಕೃಷ್ಣಪ್ಪ ಮುಂತಾದವರು ಅಸಮಾಧಾನಗೊಂಡಿದ್ದಾರೆ. [ಶಿಸ್ತು ಸಮಿತಿ ರಚಿಸಿದ ಯಡಿಯೂರಪ್ಪ, ಈಶ್ವರಪ್ಪಗೆ ಹಿನ್ನಡೆ]

ಎಚ್ಚರಿಕೆ ಕೊಟ್ಟ ಪರಮೇಶ್ವರ : 'ಸಂಪುಟ ಪುನಾರಚನೆ ಬಳಿಕ ಅಸಮಾಧಾನ ಸಹಜ. ಯಾವ ನಾಯಕರೂ ಸಹ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸಬಾರದು' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. [ಮಂಡ್ಯದಲ್ಲಿ ನನ್ನ ಅಂತಿಮ ನಿರ್ಧಾರ ಪ್ರಕಟಿಸುವೆ: ಅಂಬರೀಶ್]

ಬಿಜೆಪಿಯಲ್ಲೂ ಭಿನ್ನಮತ : ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿ ಸಹ ಭಿನ್ನಮತದ ಬಿಸಿ ಎದುರಿಸುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾದ ಬಳಿಕ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ಇತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣ. [ಈಶ್ವರಪ್ಪನ ಮೂಲೆಗೆ ತಳ್ಳಿ ಒಗ್ಗೂಡಿದ ಬಿಜೆಪಿ ನಾಯಕರು]

'ಯಾವುದೇ ಭಿನ್ನಮತೀಯ ಚಟುವಟಿಕೆ ಸಹಿಸುವುದಿಲ್ಲ. ಭಿನ್ನಮತೀಯ ಚಟುವಟಿಕೆ ನಡೆಸುವ ನಾಯಕರು ಎಷ್ಟೇ ದೊಡ್ಡವರಾಗಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದಲ್ಲಿ ಭಿನ್ನಮತ ಸಹಿಸುವುದಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

English summary
In the next two years, the southern state of Karnataka is slated for the assembly elections in 2018. The two major parties—both the Congress and BJP—have already started making preparations for the polls. First resolve their internal feuds and appease the rebels before jumping into the poll fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X