ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಸಚಿವ ಸಂಪುಟ ವಿಸ್ತರಣೆ: ಇರೋ 2 ಸ್ಥಾನಕ್ಕೆ ರೇಸಿನಲ್ಲಿರುವ ಸಂಭಾವ್ಯರು

ಖಾಲಿಯಿರುವ ಎರಡು ಸಚಿವ ಸ್ಥಾನವನ್ನು ತುಂಬಲು ಸಿದ್ದರಾಮಯ್ಯ ನಿರ್ಧರಿಸಿದ್ದು, ಕುರುಬ ಮತ್ತು ಲಿಂಗಾಯಿತ ಸಮುದಾಯದ ಮುಖಂಡರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

By Balaraj Tantry
|
Google Oneindia Kannada News

ಉಪಚುನಾವಣೆ ಗೆದ್ದ ಖುಷಿಯಲ್ಲಿರುವ ಸಿದ್ದರಾಮಯ್ಯ ಇರೋ ಎರಡು ಸಚಿವ ಸ್ಥಾನವನ್ನು ಸದ್ಯದಲ್ಲೇ ತುಂಬಲಾಗುವುದು ಎಂದು ಹೇಳಿಕೆ ನೀಡಿದ್ದೇ ತಡ, ನೆನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ ಕಸರತ್ತಿಗೆ ಮತ್ತೆ ಚಾಲನೆ ದೊರೆತಿದೆ.

ಯಾರು ಎಷ್ಟೇ ಹೈಕಮಾಂಡ್ ಕಡೆಯಿಂದ ಲಾಬಿ ನಡೆಸಿದರೂ, ತನ್ನ ಆಯ್ಕೆಯೇ ಅಂತಿಮ ಎಂದು ಈಗಾಗಲೇ ಸಾರಿ ಸಾರಿ ಸಿದ್ದರಾಮಯ್ಯ ರುಜುವಾತು ಪಡಿಸಿದ್ದರೂ, ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಕಡೆಯಿಂದ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ, ಕೆಪಿಸಿಸಿ ಕಾರ್ಯಾಧ್ಯಕ್ಷರ ಜೊತೆ ದೆಹಲಿಗೆ ಪ್ರಯಾಣಿಸಿರುವ ಸಿದ್ದರಾಮಯ್ಯ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ.

ಖಾಲಿಯಿರುವ ಎರಡು ಸ್ಥಾನಕ್ಕೆ ಲಿಂಗಾಯಿತ ಮತ್ತು ಕುರುಬ ಸಮುದಾಯದ ಮುಖಂಡರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಮುಖ್ಯಮಂತ್ರಿಗಳು ಬಂದಿದ್ದು, ಪಟ್ಟಿ ಸಮೇತ ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಎರಡು ಸಚಿವ ಸ್ಥಾನದ ಜೊತೆ ಕೆಪಿಸಿಸಿ ಅಧ್ಯಕ್ಷರನ್ನೂ ಬದಲಾವಣೆ ಮಾಡಲು ಸಿದ್ದರಾಮಯ್ಯ ಒಲವು ತೋರಿದ್ದು, ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎನ್ನುವ ತನ್ನ ಅಭಿಪ್ರಾಯವನ್ನು ಹೈಕಮಾಂಡಿಗೆ ನೀಡಲಿದ್ದಾರೆ ಎನ್ನುತ್ತದೆ ಕಾಂಗ್ರೆಸ್ ಮೂಲಗಳು.

ಎರಡು ಸ್ಥಾನಕ್ಕೆ ಯಾರ್ಯಾರು ಸಂಭಾವ್ಯರ ಪಟ್ಟಿಯಲ್ಲಿದ್ದಾರೆ, ಮುಂದೆ ಓದಿ..

ಅಧ್ಯಕ್ಷ ಹುದ್ದೆಗೆ ಮುನಿಯಪ್ಪ ಲಾಬಿ

ಅಧ್ಯಕ್ಷ ಹುದ್ದೆಗೆ ಮುನಿಯಪ್ಪ ಲಾಬಿ

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೋಲಾರ ಸಂಸದ ಕೆ ಎಚ್ ಮುನಿಯಪ್ಪ ತೀವ್ರ ಲಾಬಿ ನಡೆಸುತ್ತಿದ್ದಾರೆ. ಆ ಹುದ್ದೆಯನ್ನು ನಾನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ಈಗಾಗಲೇ ಹಲವು ಬಾರಿ ಮುನಿಯಪ್ಪ ಹೇಳಿದ್ದಾಗಿದೆ. ರಾಜ್ಯ ಕೆಲವು ಸಚಿವರೂ ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷರಾಗುವುದಕ್ಕೆ ಒಲವು ತೋರಿದ್ದಾರೆ.

ಪರಮೇಶ್ವರ್ ಗೆ ಮುಂದುವರಿಯುವ ಆಸೆ

ಪರಮೇಶ್ವರ್ ಗೆ ಮುಂದುವರಿಯುವ ಆಸೆ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಗೃಹ ಖಾತೆಯನ್ನು ಸಂಭಾಳಿಸುತ್ತಿರುವ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಹೆಚ್ಚಿನ ಒಲವನ್ನು ತೋರಿದ್ದಾರೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಪಕ್ಷವನ್ನು ಮುನ್ನಡೆಸುವ ಆಸೆಯಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಕುರುಬ ಸಮುದಾಯದಲ್ಲಿ ಮೂವರು ಆಕಾಂಕ್ಷಿಗಳು

ಕುರುಬ ಸಮುದಾಯದಲ್ಲಿ ಮೂವರು ಆಕಾಂಕ್ಷಿಗಳು

ಇರೋ ಎರಡು ಸ್ಥಾನಗಳಲ್ಲಿ ಒಂದನ್ನು ಕುರುಬ ಸಮುದಾಯಕ್ಕೆ ನೀಡಿದರೆ, ಪಟ್ಟಿಯಲ್ಲಿರುವ ಸಂಭಾವ್ಯರೆಂದರೆ, ವಿಧಾನಪರಿಷತ್ ಸದಸ್ಯ ಎಚ್ ಎಂ ರೇವಣ್ಣ, ಕುಂದುಗೋಳದ ಶಾಸಕ ಸಿ ಎಸ್ ಶಿವಳ್ಳಿ ಮತ್ತು ಬಾದಾಮಿ ಶಾಸಕ ಚಿಮ್ಮನಕಟ್ಟಿ ಈ ಮೂವರಲ್ಲಿ ಒಬ್ಬರನ್ನು ಸಿದ್ದರಾಮಯ್ಯ ಆಯ್ಕೆ ಮಾಡಬಹುದು.

ಲಿಂಗಾಯಿತ ಸಮುದಾಯದ ಪಟ್ಟಿ ದೊಡ್ಡದು

ಲಿಂಗಾಯಿತ ಸಮುದಾಯದ ಪಟ್ಟಿ ದೊಡ್ಡದು

ಇನ್ನು ಲಿಂಗಾಯಿತ ಸಮದಾಯಕ್ಕೆ ಒಂದು ಸ್ಥಾನಕ್ಕೆ ನೀಡಿದರೆ ಪಟ್ಟಿಯಲ್ಲಿ ಹತ್ತಕ್ಕೂ ಹೆಚ್ಚು ಮುಖಂಡರು ಸಂಭಾವ್ಯ ಪಟ್ಟಿಯಲ್ಲಿದ್ದಾರೆ.
1. ಅಲ್ಲಂ ವೀರಭದ್ರಪ್ಪ
2. ಎ ಬಿ ಮಾಲಕ ರೆಡ್ಡಿ
3. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜಯಸಾಧಿಸಿದ ಗೀತಾ ಮಹಾದೇವ ಪ್ರಸಾದ್
(ಚಿತ್ರದಲ್ಲಿ ಗೀತಾ ಮಹಾದೇವ ಪ್ರಸಾದ್)

ರೇಸಿನಲ್ಲಿರುವ ಇತರ ಲಿಂಗಾಯಿತ ಮುಖಂಡರು

ರೇಸಿನಲ್ಲಿರುವ ಇತರ ಲಿಂಗಾಯಿತ ಮುಖಂಡರು

4. ಅಪ್ಪಾಜಿ ನಾಡಗೌಡ
5. ಸಿದ್ದುನ್ಯಾಮೇ ಗೌಡ
6. ಬಿ ಆರ್ ಯಾವಗಲ್
7. ಎಸ್ ಆರ್ ಪಾಟೀಲ್
(ಚಿತ್ರದಲ್ಲಿ ಎಸ್ ಆರ್ ಪಾಟೀಲ್)

English summary
Who will get the two of vacant cabinet birth in Siddaramaiah government, list of probables in Kuruba and Lingayat community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X