ವೀಲಿಂಗ್ ಮಾಡಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು

Subscribe to Oneindia Kannada

ರಾಮನಗರ, ಜುಲೈ 02 : ವೀಲಿಂಗ್ ಮಾಡಲು ಹೋದ ಇಬ್ಬರು ವಿದ್ಯಾರ್ಥಿಗಳು ಬಸ್ಸಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಮೃತಪಟ್ಟವರು ಬೆಂಗಳೂರಿನ ಬೃಂದಾವನ ಕಾಲೇಜಿನ ವಿದ್ಯಾರ್ಥಿಗಳು.

ಶನಿವಾರ ಬೆಳಗ್ಗೆ ರಾಮನಗರದ ಅರ್ಚಕರಹಳ್ಳಿ ಸಮೀಪದ ಕುಂಬಾಪುರದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ಕೇರಳ ಮೂಲದ ಅಭಿನವ್ (22), ಒರಿಸ್ಸಾ ಮೂಲದ ನವಜೋತ್ (23) ಎಂದು ಗುರುತಿಸಲಾಗಿದೆ. [ಯುವತಿ ಜೀವ ತೆಗೆದ ಟಿಪ್ಪರ್ ಲಾರಿ]

accident

ವಿದ್ಯಾರ್ಥಿಗಳು ಪಲ್ಸರ್ ಮತ್ತು ಹಿರೋ ಹೊಂಡಾ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್‌ನಲ್ಲಿದ್ದವರು ನಿಯಂತ್ರಣ ಕಳೆದುಕೊಂಡು ಎದುರಿಗಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಎರಡೂ ಬೈಕ್‌ನಲ್ಲಿದ್ದವರು ರಸ್ತೆ ಮೇಲೆ ಬಿದ್ದಿದ್ದಾರೆ. [ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]

ಆಗ ಹಿಂಬದಿಯಿಂದ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಅಭಿನವ್ ಮತ್ತು ನವಜೋತ್ ಮೇಲೆ ಹತ್ತಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಗರ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.

road accident
English summary
Navjot and Abhinav, Bengaluru Brindavan college students killed in Ramanagara, Bengaluru-Mysuru highway on July 2, 2016. Students goes out for a fun of two wheeler wheeling.
Please Wait while comments are loading...