ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳದ ಅದ್ನಾನ್ ದಮುಡಿಯನ್ನು ಕರೆತರಲು ವಿಳಂಬವೇಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 25 : ಐಎಸ್ಐಎಸ್ ಉಗ್ರರ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ದುಬೈನಲ್ಲಿ ಬಂಧಿತನಾಗಿರುವ ಭಟ್ಕಳದ ನಿವಾಸಿ ಅದ್ನಾನ್ ದಮುಡಿಯನ್ನು ಭಾರತಕ್ಕೆ ಕರೆತರಲು ವಿಳಂಬವಾಗುತ್ತಿದೆ. ದಮುಡಿಯನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಇ ಸೂಕ್ತವಾದ ಸಾಕ್ಷಿಗಳನ್ನು ಕೇಳುತ್ತಿದೆ.

ಅದ್ನಾನ್ ದಮುಡಿಯನ್ನು 2015ರ ಮಾರ್ಚ್‌ನಲ್ಲಿ ದುಬೈನಲ್ಲಿ ಬಂಧಿಸಲಾಗಿದೆ. ಹೈದರಾಬಾದ್‌ನ ಯುವಕರನ್ನು ಈತ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‌ಐಎಸ್) ಸಂಘಟನೆಗೆ ನೇಮಕ ಮಾಡಿಕೊಳ್ಳುತ್ತಿದ್ದ ಎಂಬ ಆರೋಪವಿದೆ. ಆದ್ದರಿಂದ ಭಾರತದಲ್ಲಿ ದುಮುಡಿ ವಿಚಾರಣೆ ನಡೆಯಬೇಕಾಗಿದೆ.[ಭಟ್ಕಳ ಮೂಲದ ವ್ಯಕ್ತಿ ದುಬೈಯಲ್ಲಿ ಬಂಧನ]

isis

ದಮುಡಿಯನ್ನು ಭಾರತಕ್ಕೆ ಕರೆತರಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಮಾಡುತ್ತಿರುವುದಾಗಿ ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಯುಎಇ ದಮುಡಿಯನ್ನು ಹಸ್ತಾಂತರ ಮಾಡುವ ಮೊದಲು ಸೂಕ್ತವಾದ ಸಾಕ್ಷಿ ಮತ್ತು ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ ಬೇಡಿಕೆ ಇಟ್ಟಿದೆ. [ISIS ಸೇರುವವರಿಗೆ ಹಣ, ಕೆಲಸದ ಆಮಿಷ]

ದಮುಡಿ ಹೈದರಾಬಾದ್‌ನಿಂದ ಯುವಕರನ್ನು ಸೆಳೆದು ಐಎಸ್‌ಐಎಸ್ ಉಗ್ರ ಸಂಘಟನೆಗೆ ನೇಮಕ ಮಾಡುತ್ತಿದ್ದ ಎಂಬ ಆರೋಪಗಳಿವೆ. ಆದ್ದರಿಂದ, ದಮುಡಿಯನ್ನು ಭಾರತಕ್ಕೆ ಹಸ್ತಾಂತರ ಮಾಡಿದರೆ ಹೈದರಾಬಾದ್ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿದ್ದಾರೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]

ಐಎಸ್‌ಐಎಸ್ ಸೇರಲು ಬಯಸುವ ಯುವಕರು ಹೈದರಾಬಾದ್‌ನಿಂದ ಸಿರಿಯಾಕ್ಕೆ ಹೋಗಲು ಸಹಾಯವಾಗುವಂತೆ ದಮುಡಿ ಅವರ ಬ್ಯಾಂಕ್ ಖಾತೆಗೆ 50 ಸಾವಿರ ರೂ. ಹಣ ಜಮಾ ಮಾಡುತ್ತಿದ್ದ ಎಂಬ ಆರೋಪಗಳು ಇವೆ. ದಮುಡಿ ಭಟ್ಕಳ ಮೂಲದ ಮತ್ತೊಬ್ಬ ಯುವಕ ಶಫಿ ಅಮರ್ ಜೊತೆ ಸಂಪರ್ಕದಲ್ಲಿದ್ದ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

ಶಫಿ ಅಮರ್ ಸಹ ಐಎಸ್‌ಐಎಸ್ ಉಗ್ರ ಸಂಘಟನೆಯಲ್ಲಿದ್ದು, ಭಾರತದಿಂದ ಯುವಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದ್ದ. ದಮುಡಿಯ ವಿರುದ್ಧದ ಆರೋಪಗಳ ಬಗ್ಗೆ ಹೈದರಾಬಾದ್ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು, ಅದನ್ನು ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದಾರೆ. ನಂತರ ದಮುಡಿಯನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ನಡೆಯಲಿದೆ.

English summary
Adnan Hassan Damudi a resident of Bhatkal who was detained in Dubai for an alleged link to the ISIS would be an important person for India to have deported or extradited. Damudi was detained in Dubai in the month of March 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X