ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪರ್ಧಿಗಳು ಸೆರೆಹಿಡಿದ ಉಡುಪಿ ಪರ್ಯಾಯದ ಸುಂದರ ಛಾಯಾಚಿತ್ರ

By Vanitha
|
Google Oneindia Kannada News

ಉಡುಪಿ,ಮಾರ್ಚ್,09: ಸ್ಥಳೀಯ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಆಶ್ರಯದಲ್ಲಿ ಪೇಜಾವರ ಶ್ರೀಗಳ 5ನೇ ಪರ್ಯಾಯದ ಅಂಗವಾಗಿ ಉಡುಪಿ ಪ್ರೆಸ್ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಆಯೋಜಿಸಿದ್ದ 'ವಿಶ್ವ'ವರ್ಣ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

'ವಿಶ್ವ'ವರ್ಣ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪೇಜಾವರ ಶ್ರೀಗಳ ಪುರಪ್ರವೇಶದಿಂದ ಪ್ರಾರಂಭಗೊಂಡು ಜನವರಿ 25ರವರೆಗಿನ ಪರ್ಯಾಯ ಸಂಭ್ರಮದ ವರೆಗಿನ ಸಂತಸದ ಕ್ಷಣಗಳನ್ನು ಸೆರೆ ಹಿಡಿದು ಕಳುಹಿಸಿಕೊಡಲಾಗಿತ್ತು. ಖ್ಯಾತ ಛಾಯಾಚಿತ್ರಗ್ರಾಹಕ ಎ.ಈಶ್ವರಯ್ಯಾ ಹಾಗೂ ಕಲಾವಿದ ರಮೇಶ್ ರಾವ್ ಉಡುಪಿ ಅಧಿತಿ ಗ್ಯಾಲರಿಯಲ್ಲಿ ತೀರ್ಪು ಪ್ರಕಟಿಸಿದರು.

ಸ್ಪರ್ಧಿಗಳು ಪರ್ಯಾಯಕ್ಕೆ ಸಂಬಂಧಿಸಿದಂತೆ 12*18 ಗಾತ್ರದ ಗರಿಷ್ಠ ನಾಲ್ಕು ಚಿತ್ರಗಳನ್ನು ಕಳುಹಿಸಿ ಕೊಡಬೇಕಿತ್ತು. ಸ್ಪರ್ಧೆಗೆ ಕಳಿಸುವ ಚಿತ್ರಗಳು ಉಡುಪಿಯಲ್ಲಿ 2016ರ ಪೇಜಾವರ ಪರ್ಯಾಯ ಮಹೋತ್ಸವಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿರಬೇಕಾಗಿತ್ತು ಎಂದು ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು ಅವರು ಸ್ಪರ್ಧೆಗೆ ಇದ್ದ ಕೆಲವು ನಿಯಮಗಳನ್ನು ತಿಳಿಸಿದರು.[ಉಡುಪಿ ಪೇಜಾವರ ಶ್ರೀಗಳ ಪಂಚಮ ಪರ್ಯಾಯ]

ಬಹುಮಾನಗಳ ವಿವರ:

ಪ್ರಥಮ : ಸತೀಶ್ ಸೇರಿಗಾರ್, ದ್ವಿತೀಯ- ಸಂದೀಪ್ ನಾಯಕ್, ತೃತೀಯ-ನಿದೇಶ್ ಕುಮಾರ್.
ತೀರ್ಪುಗಾರರ ಮೆಚ್ಚುಗೆ ಗಳಿಸಿದವರು: ಶೈಲಾ ಮಿನೇಜಸ್, ಪ್ರದೀಪ್ ಉಪ್ಪೂರ್, ವಿಜಯೇಂದ್ರ ಅಂಬಲಪಾಡಿ, ಪ್ರಸನ್ನ ಪೆರ್ಡೂರ್, ಪ್ರೇಮ್ ಮಿನೇಜಸ್.

ಬಹುಮಾನದ ಮೊತ್ತ

ವಿಜೇತರಿಗೆ ಪ್ರಥಮ ರೂ. 10,000, ದ್ವಿತೀಯ ರೂ.5,000, ತೃತೀಯ-ರೂ.3,000 ನಗದು ಹಾಗೂ 5 ಸಮಾಧಾನಕರ ಬಹುಮಾನ ಮತ್ತು ಆಕರ್ಷಕ ಸ್ಮರಣಿಕೆ ನೀಡಲಾಯಿತು. ಪ್ರಶಸ್ತಿ ಪಡೆದ ಛಾಯಾಚಿತ್ರಗಳು ಇಲ್ಲಿವೆ.

ಹೂವಿನ ಪಲ್ಲಕ್ಕಿ

ಹೂವಿನ ಪಲ್ಲಕ್ಕಿ

ಪರ್ಯಾಯದ ಪ್ರಯುಕ್ತ ಹೂವಿನ ಪಲ್ಲಕ್ಕಿ ಮೇಲೆ ಕುಳಿತ ಪೇಜಾವರ ಶ್ರೀ, ಹಾಗೆಯೇ ಹೂವಿನಿಂದ ಅಲಂಕಾರಗೊಂಡಿದ್ದ ಪಲ್ಲಕ್ಕಿ ಪರ್ಯಾಯ ಹಬ್ಬಕ್ಕೆ ಮೆರಗು ತಂದುಕೊಟ್ಟಿತು.

ಪೇಜಾವರ ಶ್ರೀ ನಗು

ಪೇಜಾವರ ಶ್ರೀ ನಗು

ಪೇಜಾವರ ಶ್ರೀ ಅವರ ಅಪರೂಪದ ನೋಟ, ನಗುವನ್ನು ಸೆರೆಹಿಡಿದಿರುವುದು. ಪ್ರತಿಯೊಬ್ಬ ಪ್ರೇಕ್ಷಕರು ಇಷ್ಟಪಟ್ಟ ಫೋಟೋ ಇದು.

ವೇದಿಕೆಯಲ್ಲಿ ಪೀಠಾಧಿಪತಿಗಳು

ವೇದಿಕೆಯಲ್ಲಿ ಪೀಠಾಧಿಪತಿಗಳು

ವೇದಿಕೆಯಲ್ಲಿ ಪೀಠಾಧಿಪತಿಗಳ ಆಸೀನರಾಗಿರುವುದು, ವೇದಿಕೆಯ ಕೆಳಗೆ ನೃತ್ಯದ ಭಂಗಿಯಲ್ಲಿ ನಿಂತ ನೃತ್ಯ ಕಲಾವಿದರು.

ಬಾಲಕನಿಂದ ಮಲ್ಲಿಗೆ ಹಾರ

ಬಾಲಕನಿಂದ ಮಲ್ಲಿಗೆ ಹಾರ

ಬಾಲಕನೊಬ್ಬ ಪೇಜಾವರ ಶ್ರೀ ಅವರಿಗೆ ಮಲ್ಲಿಗೆ ಹಾರ ಹಾಕುತ್ತಿರುವುದು. ಪೇಜಾವರ ಅವರು ಓರೆಗಣ್ಣಿನ ನೋಟ ಬೀರಿರುವುದು.

ಪರ್ಯಾಯದ ಅಪರೂಪದ ದೃಶ್ಯ

ಪರ್ಯಾಯದ ಅಪರೂಪದ ದೃಶ್ಯ

ಪರ್ಯಾಯದಲ್ಲಿ ಕಂಡು ಬಂದ ಅಪರೂಪದ ದೃಶ್ಯವಿದು. ಇದರಿಂದ ಇಡೀ ಪರ್ಯಾಯವೇ ಕಳೆಗಟ್ಟಿತು.

ಯಕ್ಷಗಾನ

ಯಕ್ಷಗಾನ

ಕಲೆಗಳಲ್ಲಿ ಮೇರು ಕಲೆಯಾದ ಯಕ್ಷಗಾನ ಪ್ರದರ್ಶಿಸಿದ ಕಲಾವಿದರ ನೃತ್ಯ ಭಂಗಿ

ಹುಲಿವೇಷ

ಹುಲಿವೇಷ

ಜಾನಪದ ಕಲೆಯಲ್ಲಿ ಗಂಡು ಕಲೆ ಎಂದೇ ಪ್ರಸಿದ್ಧಿಯಾದ ಹುಲಿ ವೇಷದ ಫೋಟೋ.

English summary
Pejawar seer paryaya's relate photo competation winners name announced in Udupi. This Vishwa Varna Photo competation organized by Press Photographers Association at Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X