ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಯಾತ್ರಿ ಬರೆದ ಪತ್ರಕ್ಕೆ, ಮೋದಿ ಕೊಟ್ಟ ಉತ್ತರವೇನು?

By ಐಸಾಕ್ ರಿಚರ್ಡ್
|
Google Oneindia Kannada News

ಉತ್ತರ ಕನ್ನಡ, ಜು, 04 : ಡೆಹ್ರಡೂನ್ ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಹೆಸರು ಬದಲಾಯಿಸುವಂತೆ ಉಡುಪಿ ನಿವಾಸಿ ಬಾಲಾಜಿ ರಾಘವೇಂದ್ರ ಆಚಾರ್ಯ ಪ್ರಧಾನ ಮಂತ್ರಿ ಕಚೇರಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆ ದೊರೆತಿದೆ.

ಒಂದು ಶತಮಾನದ ಹಿಂದೆ, ಡೆಹ್ರಡುನ್ ನಲ್ಲಿ ಸರ್ಕಾರ ನಿರ್ಮಾಣ ಮಾಡಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಬೇಕು ಎಂದು ಅದರ ಹಿನ್ನೆಲೆಯನ್ನು ಪತ್ರದಲ್ಲಿ ಬರೆದ ಬಾಲಾಜಿ ಅವರು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಚೇರಿ ಇದಕ್ಕೆ ಕರಾರುವಕ್ಕಾದ ಹಿನ್ನೆಲೆಯಿಲ್ಲದ ಕಾರಣ ಇದರ ಹೆಸರನ್ನು 'ದ್ರೋಣಚಾರ್ಯ ಚಾರ್ದಮ್ ವಿಮಾನ ನಿಲ್ದಾಣ' ಎಂದು ಬದಲಾಯಿಸಲು ನಿರ್ಧಾರ ತೆಗೆದುಕೊಂಡಿದೆ.[ಉತ್ತರ ಕನ್ನಡ : ಅಬಕಾರಿ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]

udupi pilgrim letter, what's Modi answer?

ಒಮ್ಮೆ ಬಾಲಾಜಿ ರಾಘವೇಂದ್ರ ಆಚಾರ್ಯ ಅವರು ಸುಮಾರು 15 ವರ್ಷಗಳ ಹಿಂದೆ ಬದ್ರಿನಾಥಕ್ಕೆ ತೀರ್ಥಯಾತ್ರೆಗೆ ಡೆಹ್ರಡೂನ್ ನಲ್ಲಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ಮೂಲಕ ತೆರಳಿದ್ದರು. ತೀರ್ಥಯಾತ್ರೆಯಲ್ಲಿ ಹಿಂದೂಗಳ ಧಾರ್ಮಿಕ ಕೇಂದ್ರಬಿಂದುವೇ ಚರ್ದಮ್ ಯಾತ್ರೆ(Chardham Yathra). ಇದರ ನಂತರ ಬದರಿನಾಥ, ಕೇದರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಪ್ರದೇಶಗಳ ಯಾತ್ರೆ ಮುಖ್ಯವಾಗುತ್ತದೆ. ಇದರ ಪೂರ್ಣ ಪುರಾಣ ತಿಳಿದ ಇವರು ಹೆಸರು ಬದಲಾಯಿಸಲು ನಿರ್ಧರಿಸಿದರು.

ಪುರಾಣ ಕಥೆಯಲ್ಲಿ ಡೆಹ್ರಡೂನ್ ಕೌರವ ಮತ್ತು ಪಾಂಡವರ ರಾಜಗುರುವಾದ ದ್ರೋಣಾಚಾರ್ಯರ ಆವಾಸ ಸ್ಥಾನವಾಗಿತ್ತು. ಇದರ ಹಿಂದಿನ ಹೆಸರು ದ್ರೋಣಗಿರಿ ಎಂದಿದ್ದು, ಇದು ದ್ರೋಣಾಚಾರ್ಯರೊಂದಿಗೆ ಅವಿನಾಬಾವ ಸಂಬಂಧ ಹೊಂದಿತ್ತು. ಬ್ರಿಟಿಷರು ತಮ್ಮ ಆಡಳಿತ ಅವಧಿಯಲ್ಲಿ ದ್ರೋಣಗಿರಿ ಡೆಹ್ರಾಡೂನ್ ಆಗಿ ಬದಲಾಯಿಸಿದರು.

ರಸ್ತೆ ಸಾರಿಗೆ ಸಚಿವಾಲಯವು ಉತ್ತರ ಕನ್ನಡ ರಾಜ್ಯ ಸಾರಿಗೆ ಸಚಿವಾಲಯ ಕಮಿಷನರ್ ಕಚೇರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವಿಲ್ಲ ಎಂದು ತಿಳಿಸಿದೆ.

English summary
The Airport at Dehradun was named as 'Jolly Grant' by the government. Taking note of the same, Balaji Raghavendra Acharya, in his letter to the Primary Minister Office has said that since there is no specific background on which the Airport was named so, it would be relevant to name the Airport as 'Dronacharya-Chardham Airport'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X