ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಆರಂಭ: ಹೈಲೆಟ್ಸ್

|
Google Oneindia Kannada News

ಉಡುಪಿ, ಜ 18: ನಾಡಿನ ಹಿರಿಯ ಯತಿ, ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ್ವತೀರ್ಥ ಶ್ರೀಗಳ ಪಂಚಮ ಪರ್ಯಾಯ ಧಾರ್ಮಿಕ ವಿದಿವಿಧಾನ ಆರಂಭವಾಗಿದೆ.

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಇತಿಹಾಸದ 248ನೇ ಪೀಠ ಮಹೋತ್ಸವ ಧಾರ್ಮಿಕ ಮುಖಂಡರು, ಅಷ್ಠ ಮಠದ ಇತರ ಯತಿಗಳು. ಲಕ್ಷಾಂತರ ಭಕ್ತರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಆರಂಭವಾಗಿದೆ.

Udupi Pejawar seerr Paryaya religious activity and procession highlights

ಪರ್ಯಾಯ ಪೀಠವನ್ನೇರುವ ಮುನ್ನ ಕೃಷ್ಣ ಮಠದ ಸಂಪ್ರದಾಯದಂತೆ ಕಿರಿಯ ಶ್ರೀಗಳ ಜೊತೆ, ಉಡುಪಿ ನಗರದ ಹೊರವಲಯದಲ್ಲಿರುವ ಕಾಪುವಿನ ದಂಡತೀರ್ಥಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡಿದ ಪೇಜಾವರ ಶ್ರೀಗಳು.

ಪಟ್ಟದ ದೇವರು ಶ್ರೀರಾಮವಿಠರೊಂದಿಗೆ ಉಡುಪಿ ನಗರದ ಜೋಡುಕಟ್ಟೆ ವೃತ್ತಕ್ಕೆ ಆಗಮಿಸಿದ ಪೇಜಾವರ ಶ್ರೀಗಳು.

Udupi Pejawar seerr Paryaya religious activity and procession highlights

ಎಸ್ಪಿ ಅಣ್ಣಾಮಲೈ ಜೊತೆ ಪೇಜಾವರ ಶ್ರೀಗಳ ಮಾತುಕತೆ. ಜೋಡುಕಟ್ಟೆ ವೃತ್ತದಿಂದ ಭವ್ಯ ಪರ್ಯಾಯ ಮೆರವಣಿಗೆ ಆರಂಭ. ವಿವಿಧ ಕಲಾಪ್ರಾಕಾರಗಳು ಭಾಗಿ. ಮೆರವಣಿಗೆ ಹಾದಿಯುದ್ದಕ್ಕೂ ಇಕ್ಕೆಲಗಳಲ್ಲಿ ಸೇರಿರುವ ಜನಸಾಗರ.

ಅಷ್ಠ ಮಠಗಳ ಪೈಕಿ ಪುತ್ತಿಗೆ ಮಠದ ಶ್ರೀಗಳ ಗೈರು, ಉಳಿದ ಎಲ್ಲಾ ಪೀಠಾಧಿಪತಿಗಳು ಪರ್ಯಾಯ ಮೆರವಣಿಗೆಯಲ್ಲಿ ಹಾಜರು.

Udupi Pejawar seerr Paryaya religious activity and procession highlights

ಪಂಜಾಬಿನ ಕಲಾತಂಡ, ಕೇರಳದ ಕಾವಡಿ, ಗುಜರಾತಿನ ದಾಂಡಿಯಾ, ತಿರುಪತಿ ಭಜನಾ ತಂಡ, ನಂದಿಧ್ವಜ, ತಮಿಳುನಾಡಿನ ಕರಗ ನೃತ್ಯ, ವೀರಗಾಸೆ, ಕೊಂಬು. ಪಥಸಂಚಲನ, ಹುಲಿವೇಷ, ಮರಕಾಲು ಕುಣಿತ, ಭೂತಕುಣಿತ, ಕೊಂಬು ಕೊಹಳೆ, ಸುಗ್ಗಿಕುಣಿತ, ಯಕ್ಷಗಾನ, ಮಹಾರಾಷ್ಟ್ರದ ವಾಕರಿ, ಸ್ತಬ್ದ ಚಿತ್ರಗಳು ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದ 55 ಕಲಾತಂಡಗಳ ಪ್ರದರ್ಶನ.

ಮಾನವ ರಹಿತ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಆಗಮಿಸುತ್ತಿರುವ ಪೇಜಾವರ ಶ್ರೀಗಳು. ಸಿ ಟಿ ರವಿ, ಶೋಭಾ ಕರಂದ್ಲಾಜೆ, ವಿನಯ್ ಕುಮಾರ್ ಸೊರಕೆ, ಅನಂತಕುಮಾರ್, ಪ್ರಲ್ಹಾದ್ ಜೋಶಿ, ಸದಾನಂದ ಗೌಡ ಮುಂತಾದವರು ಭಾಗಿ.

Udupi Pejawar seerr Paryaya religious activity and procession highlights

ತಟ್ಟಿರಾಯ, ಬಂಟ್ವಾಳದ ಚಿಲಿಪಿಲಿ ಬಳಗ, ಸೋಮನ ಕುಣಿತ, ಚೆಂಡೆನಾದ, ಬ್ಯಾಂಡ್ ವಾದನ, ವಿವಿಧ ಟ್ಯಾಬ್ಲೋಗಳಿಂದ ಮೆರವಣಿಗೆಗೆ ವಿಶೇಷ ಮೆರುಗು.

ಇನ್ನೆರಡು ವರ್ಷ ಕೃಷ್ಣಮಠದ ಪೂಜಾ ಕಂಕರ್ಯ ಪೇಜಾವರ ಶ್ರೀಗಳಿಗೆ. ಎರಡು ವರ್ಷ ರಥಬೀದಿ ಬಿಟ್ಟು ಬರುವಂತಿಲ್ಲ.

ಮೆರವಣಿಗೆ ರಥಬೀದಿ ಪ್ರವೇಶಿಸಿದ ನಂತರ ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆಯುವ ಶ್ರೀಗಳು.

Udupi Pejawar seerr Paryaya religious activity and procession highlights

ರಥಬೀದಿ ಪ್ರವೇಶಿಸಿದ ನಂತರ ಪ್ರದಕ್ಷಿಣೆ ಹಾಕಿ, ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆಯಲಿರುವ ಅಷ್ಠಮಠಾಧೀಶರು.

ಮಧ್ವಾಚಾರ್ಯರ ಕಾಲದಲ್ಲಿ ಎರಡು ತಿಂಗಳಿಗೊಮ್ಮೆ ಇದ್ದ ಪೂಜೆ ಬದಲಾಗುವ ಪದ್ದತಿ, ವಾದಿರಾಜ ಗುರುಗಳ ಕಾಲದಲ್ಲಿ ಎರಡು ವರ್ಷಕ್ಕೊಮ್ಮೆ ಬದಲಾಯಿತು.

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಪರ್ಯಾಯ ಪೂಜಾ ಪದ್ದತಿಯನ್ನು ಪೇಜಾವರ ಶ್ರೀಗಳಿಗೆ ಹಸ್ತಾಂತರಿಸಲಿದ್ದಾರೆ.

Udupi Pejawar seerr Paryaya religious activity and procession highlights

ರಥಬೀದಿ ಪ್ರವೇಶಿಸಿದ ಅಷ್ಠಮಠಾಧೀಶರು. ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದು, ಕನಕನ ಕಿಂಡಿಯ ಮೂಲಕ ಕೃಷ್ಣನ ದರ್ಶನ ಪಡೆದ ಪೇಜಾವರ ಮತ್ತು ಇತರ ಶ್ರೀಗಳು.

ಪರ್ಯಾಯ ಮೆರವಣಿಗೆ, ಪೂಜಾಡಳಿತ ಹಸ್ತಾಂತರ, ದರ್ಬಾರ್ - ಚಂದನ, ಬಿಟಿವಿ ಮತ್ತು ಸಿ4ಯು ವಾಹಿನಿಗಳಿಂದ ನೇರಪ್ರಸಾರ.ರಥಬೀದಿಯಲ್ಲಿ ಭಾರೀ ನೂಕುನುಗ್ಗುಲು. ಸೂರ್ಯೋದಯದ ಬ್ರಾಹ್ಮೀ ಮಹೂರ್ತದಲ್ಲಿ ಕೃಷ್ಣಮಠ ಪ್ರವೇಶಿಸಿದ ಪೇಜಾವರ ಶ್ರೀಗಳು.

ಅಡ್ವಾಣಿ, ಉಮಾಭಾರತಿ, ಚಂದ್ರಬಾಬು ನಾಯ್ಡು, ನಿರ್ಮಲಾ ಸೀತಾರಾಮನ್, ಆಸ್ಕರ್ ಫೆರ್ನಾಂಡಿಸ್ ಸೇರಿದಂತೆ ಹಲವು ಗಣ್ಯರ ಆಗಮನ.

Udupi Pejawar seerr Paryaya religious activity and procession highlights

ಪರ್ಯಾಯ ಪೂಜೆಯ ಮುಕ್ತಾಯದಲ್ಲಿರುವ ಕಾಣಿಯೂರು ಶ್ರೀಗಳಿಂದ ಪೇಜಾವರ ಹಿರಿಯ ಮತ್ತು ಕಿರಿಯ ಶ್ರೀಗಳಿಗೆ ಸ್ವಾಗತ, ಅರಳು ಪುಷ್ವವೃಷ್ಠಿ.

ನವಗೃಹ ಕಿಂಡಿಯ ಮೂಲಕ ಪೇಜಾವರ ಶ್ರೀಗಳಿಗೆ ಕೃಷ್ಣ, ಮುಖ್ಯಪ್ರಾಣನ ದರ್ಶನ ಮಾಡಿಸಿ ಗಂಧೋಪಚಾರ ಮಾಡಿದ ಕಾಣಿಯೂರು ಶ್ರೀಗಳು.

Udupi Pejawar seerr Paryaya religious activity and procession highlights

ಮಧ್ವಾಚಾರ್ಯರ ಪ್ರತಿಮೆ ಮೂಲಕ ಗರ್ಭಗುಡಿ ಪ್ರವೇಶಿಸಿದ ಪೇಜಾವರ ಶ್ರೀಗಳು. ಅಕ್ಷಯಪಾತ್ರೆ, ಕೃಷ್ಣಮಠದ ಬೀಗದಕೈ ಪೇಜಾವರ ಶ್ರೀಗಳಿಗೆ ಹಸ್ತಾಂತರ.

ಸರ್ವಜ್ಞ ಪೀಠವನ್ನೇರಿದ ಪೇಜಾವರ ಶ್ರೀಗಳು. ಮುಂದಿನ ಎರಡು ವರ್ಷಕ್ಕೆ ಉಡುಪಿ ಕೃಷ್ಣಮಠದ ಅಧಿಕಾರ ಪೇಜಾವರ ಶ್ರೀಗಳಿಗೆ. ಪರ್ಯಾಯ ಧಾರ್ಮಿಕ ಪ್ರಕ್ರಿಯೆ ಸಂಪನ್ನ.

Udupi Pejawar seerr Paryaya religious activity and procession highlights

ಔಪಚಾರಿಕ ಪರ್ಯಾಯ ದರ್ಬಾರ್ ಕಾರ್ಯಕ್ರಮ ಕೆಲವೇ ಕ್ಷಣದಲ್ಲಿ ಆರಂಭ. ಪರ್ಯಾಯ ದರ್ಬಾರ್ ನಡೆಯಲಿರುವ ಆನಂದತೀರ್ಥ ಮಂಟಪಕ್ಕೆ ಆಗಮಿಸಿದ ಅಡ್ವಾಣಿ, ಅನಂತಕುಮಾರ್, ಚಂದ್ರಬಾಬು ನಾಯ್ಡು, ಆಸ್ಕರ್ ಫೆರ್ನಾಂಡಿಸ್, ಸದಾನಂದ ಗೌಡ, ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ, ವಿನಯ ಕುಮಾರ್ ಸೊರಕೆ, ಯಡಿಯೂರಪ್ಪ, ಸದಾನಂದ ಗೌಡ, ಈಶ್ವರಪ್ಪ, ಪ್ರಲ್ಹಾದ್ ಜೋಶಿ ಇತರರು.

English summary
Udupi Pejawar seerr Paryaya religious activity and procession highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X