ಮಾವಿಗೂ ತಟ್ಟಿದ ಬರದ ಬಿಸಿ, ಮಾರುಕಟ್ಟೆಯಿಂದ ಕಣ್ಮರೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಮೇ 04 : ಬರಗಾಲ ಮತ್ತು ರಣ ಬಿಸಿಲಿನ ಬಿಸಿ ಮಾವಿನ ಬೆಳೆಗೂ ತಟ್ಟಿದೆ. ಉಡುಪಿಯ ಮಾರುಕಟ್ಟೆಯಲ್ಲಿರುತ್ತಿದ್ದ ಸ್ಥಳೀಯ ತಳಿಗಳ ಮಾವು ಈ ಬಾರಿ ಸಿಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 60ರಷ್ಟು ಮಾವಿನ ರಫ್ತು ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಜಿಲ್ಲೆಯಲ್ಲಿ ಈ ಬಾರಿ ಚಳಿ ಇರಲಿಲ್ಲ. ಬಿಸಿಲಿನ ಧಗೆಯೇ ಹೆಚ್ಚಾಗಿತ್ತು. ಆದ್ದರಿಂದ, ನೈಸರ್ಗಿಕವಾಗಿ ಬೆಳೆದು ಸಿಹಿ ಹಂಚುತ್ತಿದ್ದ ಸ್ಥಳೀಯ ತಳಿಯ ಮಾವುಗಳೆಲ್ಲ ಹೂವಿನ ಹಂತದಲ್ಲಿಯೇ ಕರಟಿ ಹೋಗಿವೆ. ಇದರಿಂದಾಗಿ ಬೇಡಿಕೆ ಇದ್ದರೂ ಮಾವು ಪೂರೈಕೆಯಾಗುತ್ತಿಲ್ಲ. [ಕರ್ನಾಟಕದ ಮಾವು ನೇರ ರಫ್ತಿಗಾಗಿ ಕೇಂದ್ರಕ್ಕೆ ಮನವಿ]

mango

ಮಾರುಕಟ್ಟೆಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಸ್ಥಳೀಯ ತಳಿಗಳಾದ ಮುಂಡಪ್ಪ, ಮಲಬಾರ್, ತೋತಾಪುರಿ ಈ ಬಾರಿ ಮಾರುಕಟ್ಟೆ ಪ್ರವೇಶಕ್ಕೆ ಮುನ್ನವೇ ಕಣ್ಮರೆಯಾಗಿವೆ. ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಗಿರಾಕಿಗಳನ್ನು ಕೂಗಿ ಕರೆಯುತ್ತಿದ್ದ ಮಾವಿನ ಯುಗ ಕಳೆದು ಹೋಗಿದೆ. [ಮೈಸೂರಿನ ರಸ್ತೆ ಬದಿಯಲ್ಲೇ ಮಾವಿನಸಂತೆ...]

ಹಿಂದೆ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಸ್ಥಳೀಯ ಮಾವಿನ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದವು. ಸಂತೆಯಲ್ಲಿ ಲೋಡ್ ಗಟ್ಟಲೆ ಮಾರಾಟವಾಗುತ್ತಿತ್ತು. ಆದರೆ, ಈಗ ಸಂತೆ ಮಾರುಕಟ್ಟೆಯಲ್ಲಿ ಈ ತಳಿಗಳು ಸಿಗುತ್ತಿಲ್ಲ. ವ್ಯಾಪಾರಿಗಳನ್ನು ವಿಚಾರಿಸಿದರೆ ಈ ಬಾರಿ ಚಳಿ ಇಲ್ಲ, ಮಳೆ ಇಲ್ಲ ಸುಡು ಬಿಸಿಲು ಮಾವು ಎಲ್ಲಿಂದ ಬರಬೇಕು ಬಿಡಿ ಎನ್ನುತ್ತಿದ್ದಾರೆ. [ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]

ಡಜನ್‌ಗೆ 1000 ರೂ. : ಅಚ್ಚರಿಯಾದರೂ ಇದು ಸತ್ಯ. ಜ್ಯೂಸ್ ಪ್ರಿಯರ ಬೇಡಿಕೆಗಳಿಸಿರುವ ಬಂಗನಪಲ್ಲಿ ತಳಿಯ ಮಾವು ಮಾರುಕಟ್ಟೆಯಲ್ಲಿ ಬರುತ್ತಲೇ ಇಲ್ಲ. ಅದೆಲ್ಲಾ ಮುಂಬೈ, ಕೋಲ್ಕತ್ತಾ, ಪುಣೆ, ಮೊದಲಾದ ನಗರಗಳಿಗೆ ರಫ್ತಾಗುತ್ತಿವೆ.

ಅಲ್ಲಿ ಡಜನ್ ಮಾವಿನ ಬೆಲೆ 1 ರಿಂದ 2 ಸಾವಿರದ ತನಕ ಇದೆ. ಇಲ್ಲಿ ಈ ಮಾವಿನಹಣ್ಣು ಸಿಕ್ಕಿದರು ಅಷ್ಟೊಂದು ಗುಣಮಟ್ಟದ ಹಣ್ಣು ಸಿಗುವುದಿಲ್ಲ ಎನ್ನತ್ತಾರೆ ವ್ಯಾಪಾರಿಗಳು. ಸ್ಥಳೀಯವಾಗಿ ಹಣ್ಣು ಸಿಗದಿದ್ದರೂ, ಮಾರುಕಟ್ಟೆಗೆ ಬರವು ಮೊದಲೇ ಹಣ್ಣುಗಳು ಬೇರೆ ನಗರಗಳಿಗೆ ಹೋಗುತ್ತಿವೆ.

English summary
Drought situation in Udupi district has hit mango production. Demand created for Mundappa and other local mango bread.
Please Wait while comments are loading...