ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಪೊಲೀಸರ ನೂತನ ವೆಬ್‌ಸೈಟ್‌ಗೆ ಸ್ವಾಗತ

|
Google Oneindia Kannada News

ಉಡುಪಿ, ಸೆಪ್ಟೆಂಬರ್ 23 : ಜನರಿಗೆ ಮತ್ತಷ್ಟು ಉತ್ತಮವಾದ ಸೇವೆಗಳನ್ನು ಒದಗಿಸಲು ಸಹಾಯಕವಾಗುವಂತೆ ಉಡುಪಿ ಜಿಲ್ಲಾ ಪೊಲೀಸರು ನೂತನ ವೆಬ್‌ಸೈಟ್‌ ಆರಂಭಿಸಿದ್ದಾರೆ. ಪಾಸ್‌ಪೋರ್ಟ್‌ ಸ್ಥಿತಿ-ಗತಿಯ ಬಗ್ಗೆಯೂ ಜನರು ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯಬಹುದಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಬುಧವಾರ ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಇಷ್ಟು ದಿನ ಬ್ಲಾಗ್ ಮೂಲಕ ಮಾಹಿತಿ ನೀಡುತ್ತಿದ್ದ ಪೊಲೀಸರು ನೂತನವಾಗಿ ವೆಬ್‌ಸೈಟ್ ಆರಂಭಿಸಿದ್ದಾರೆ. ಚಿಪ್ಸಿ ಮೊಬಿಲಿಟಿ ಸರ್ವಿಸಸ್‌ನ ಸಂದೀಪ್ ಭಕ್ತ ಎಂಬುವವರು ಈ ವೆಬ್‌ಸೈಟ್‌ ಅಭಿವೃದ್ಧಿಪಡಿಸಿದ್ದಾರೆ. [ವೆಬ್ ಸೈಟ್ ಗೆ ಭೇಟಿ ಕೊಡಿ]

udupi

ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅಣ್ಣಾಮಲೈ ಅವರು, 'ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಜನರು ಸುತ್ತೋಲೆಗಳು, ದಿನದ ಅಪರಾಧ ಪ್ರಕರಣಗಳು, ಕಾಣೆಯಾದವರ ಬಗೆಗಿನ ಮಾಹಿತಿ, ಸಕಾಲ ಯೋಜನೆಯ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ' ಎಂದರು. [ಉಡುಪಿ : ಪೊಲೀಸ್ ಠಾಣೆಯಲ್ಲಿ ನಡೆಯಿತು ಕೋಳಿಗಳ ಹರಾಜು!]

ಜನರು ವೆಬ್‌ಸೈಟ್‌ ಮೂಲಕ ಆರ್‌ಟಿಐ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಪರಾಧ ಪ್ರಕರಣಗಳ ಬಗ್ಗೆ ಜನರು ದೂರು ನೀಡಲು ಸಹಾಯಕವಾಗುವಂತೆ ಸಿಟಿಜನ್ ಕಾರ್ನರ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.[ಉಡುಪಿಗೆ ಸಿಕ್ತು ಪೊಲೀಸ್ ತರಬೇತಿ ಕೇಂದ್ರ]

ಪಾಸ್‌ಪೋರ್ಟ್ ಪಡೆಯುವುದು ಹೇಗೆ?, ಪಾಸ್‌ಪೋರ್ಟ್‌ನ ಸ್ಥಿತಿ-ಗತಿ, ಸಂಚಾರಿ ನಿಯಮಗಳು ಮತ್ತು ದಂಡದ ಕುರಿತು ವೆಬ್‌ಸೈಟ್‌ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

English summary
Udupi district superintendent of police Annamalai on Wednesday launched the website of Udupi district police at his office. The newly launched website udupipolice.org developed by Sandeep Bhaktha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X