ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಿನಲ್ಲಿ ಲಂಡನ್‌ ಪ್ರವಾಸ ಹೊರಟ ಉಡುಪಿ ದಂಪತಿಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 02 : ಉಡುಪಿಯ ದಂಪತಿಗಳು ಕಾರಿನಲ್ಲಿ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. 'ದಿ ಲೈಫ್ ಟೈಂ ಜರ್ನಿ 2016' ನಿರ್ಗತಿಕರು, ನೊಂದವರ ಕಣ್ಣೀರು ಒರೆಸಲಿದೆ. ಮೇ 20ರಂದು ಮುಂಬೈನಿಂದ ಪ್ರವಾಸ ಆರಂಭಿಸಲಿರುವ ದಂಪತಿ, 42 ದೇಶಗಳ 50 ಸಾವಿರ ಕಿ.ಮೀ ಯಾತ್ರೆ ಮಾಡಲಿದ್ದಾರೆ.

ಮಲ್ಪೆಯ ವಡಭಾಂಡೇಶ್ವರ ಬೀಚ್ ನಿವಾಸಿಗಳಾದ ಲುವಿಸ್ ಡಿ ಸೋಜಾ (61), ಜಾನೆಟ್ ಡಿ ಸೋಜಾ (55) ಪ್ರವಾಸ ಹೊರಟಿರುವ ದಂಪತಿಗಳು. ಬಿಎಂಡಬ್ಲ್ಯು ಎಕ್ಸ್ 5(2008) ಕಾರಿನಲ್ಲಿ ಪ್ರಯಾಣ ಹೊರಟಿರುವ ದಂಪತಿಗಳು, ಗುರಿ ಮುಟ್ಟಿದ ಬಳಿಕ ಮುಂಬೈಯ ಮುಸ್ಕಾನ್, ಮಂಗಳೂರಿನ ವೈಟ್ ಡವ್ ಸಮಾಜ ಸೇವಾ ಸಂಸ್ಥೆಗೆ 5 ಲಕ್ಷ ರೂ ದೇಣಿಗೆ ಮತ್ತು ತಮ್ಮ ಪಾಲಿನ 5 ರಿಂದ 8 ಲಕ್ಷ ರೂ. ದೇಣಿಗೆ ನೀಡಲಿದ್ದಾರೆ. [ಎಲೈ ಛಲವೇ.. ನಿನಗೆ ಶರಣು ಶರಣೆಂಬೆ]

mumbai

ಯಾವ-ಯಾವ ದೇಶ? : ಈ ದಂಪತಿಗಳು ಇಂಫಾಲಾ, ಮ್ಯಾನ್ಮಾರ್, ಚೀನಾ, ಮಂಗೋಲಿಯಾ, ರಷ್ಯಾ, ಲಾಟಿವಾ , ಲಿತ್ಯುಯೇನಿಯ, ಇಸ್ಟೊನಿಯ, ಫಿನ್ಲ್ಯಾಂಡ್, ನಾರ್ವೆ, ಸ್ವೀಡನ್, ಡೆನ್‌ಮಾರ್ಕ್, ಜರ್ಮನಿ, ನೆದರ್‌ಲ್ಯಾಂಡ್, ಬೆಲ್ಜಿಯಂ, ಯುಕೆ, ಫ್ರಾನ್ಸ್, ಸ್ಪೇನ್, ಪೋರ್ಚುಗಲ್, ಆಸ್ಟ್ರಿಯಾ, ಇಟಲಿ, ಮಾಲ್ಟಾ, ಗ್ರೀಸ್, ಟರ್ಕಿ ಸೇರಿದಂತೆ ವಿವಿಧ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಯಾರಿಗೆ ನೆರವು? : ಮಂಗಳೂರಿನ ಬೆಂದೂರು ಚರ್ಚ್ ಬಳಿಯ ವೈಟ್ ಡವ್ ಎನ್‌ಜಿಓ ನಡೆಸುತ್ತಿರುವ ವಿಶೇಷ ಶಾಲೆಯಲ್ಲಿ ಅನಾಥ ಮಕ್ಕಳು, ನಿರ್ಗತಿಕರು, ವಿಶೇಷಚೇತನರು ಸೇರಿದಂತೆ 130 ಮಂದಿ ಇದ್ದಾರೆ. ಮುಂಬೈನ ಮುಸ್ಕಾನ್ ಫೌಂಡೇಶನ್ ವತಿಯಿಂದ ಬಾಂದ್ರಾ, ಲೋವರ್ ಪರೆಲ್ ಹಾಗೂ ವಾಡಿಯಾ ಆಸ್ಪತ್ರೆ ಕೇಂದ್ರಗಳಲ್ಲಿ 80 ಕ್ಕೂ ಅಧಿಕ ವಿಶೇಷ ಮಕ್ಕಳಿದ್ದು ಲೂಯಿಸ್ ಜಾನೆಟ್ ದಂಪತಿ ಸಾಹಸ ಯಾತ್ರೆಯಿಂದ ಇವರಿಗೆ ನೆರವು ದೊರೆಯಲಿದೆ.

ಮೇ 20 ರಂದು ಲೂಯಿಸ್ 62 ನೇ ವಸಂತಕ್ಕೆ ಕಾಲಿಡಲಿದ್ದು, ಅಂದೆ ಪತ್ನಿ ಜಾನೆಟ್ ಜತೆ ಬದುಕಿಗೆ ಹೊಸ ಅನುಭವ ನೀಡುವ ಯಾತ್ರೆ ಆರಂಭಿಸಲಿದ್ದಾರೆ. ಇದಕ್ಕಾಗಿ ಮುಂಬೈನಲ್ಲಿ ಏ.16ರಂದು ಬಿಎಂಡಬ್ಲು ಎಕ್ಸ್ 5 ಕಾರು ಖರೀದಿಸಿದ್ದಾರೆ.

ಮುಂಬೈನಿಂದ ಲಂಡನ್‌ಗೆ ತೆರಳಿ ಬಳಿಕ ವಾಪಸ್ ಬರುವ ಬರುವ ಹಾದಿಯಲ್ಲಿ ಮಧ್ಯ ಏಷ್ಯಾ, ಮಧ್ಯ ಯುರೋಪ್ ರಾಷ್ಟ್ರಗಳನ್ನು ಕಾರಿನಲ್ಲೇ ಸುತ್ತಲಿದ್ದಾರೆ. ಮುಂಬೈನಲ್ಲಿ ಉದ್ಯಮ ನಡೆಸುತ್ತಿರುವ ಲುವಿಸ್, 1978ರಲ್ಲಿ ಜಾನೆಟ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದರು. ನಂತರ ಇಬ್ಬರು 1982ರಲ್ಲಿ ವಿವಾಹವಾಗಿದ್ದರು.

ದಂಪತಿಗಳ ಪಿತ್ರ ಮಗ ಲಾಯ್ಡ್ (32) ಬೆಲ್ಜಿಯಂನಲ್ಲಿದ್ದರೆ, ಮಗಳು ಲೆನಿಟ್ (30) ಮುಂಬೈನಲ್ಲಿದ್ದಾರೆ. ಜಾನೆಟ್ ದಂಪತಿ ಉದ್ಯಮ ಮತ್ತು ಸಂಸಾರದ ಜವಾಬ್ದಾರಿ ನಿಭಾಯಿಸಿದ ಬಳಿಕ ಬದುಕಿನ ಹೊಸ ಸಾಹಸ ಯಾತ್ರೆಗೆ ಮುಂದಾಗಿದ್ದಾರೆ.

English summary
Udupi based Louis D Souza and Janet D’Souza’s 'The Lifetime Journey' to be flagged off from Mumbai on May 20, 2016 to London through Central Asia, Europe and back to Mumbai covering more than 50,000 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X