ಹುಡುಗಿಗಾಗಿ ಹಾಸನ ಬಸ್ ನಿಲ್ದಾಣದಲ್ಲಿ ಮಾರಾಮಾರಿ

Posted By:
Subscribe to Oneindia Kannada

ಹಾಸನ, ಜೂನ್ 22 : ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ನೂರಾರು ಜನರೆದುರು ಬಡಿದಾಡಿಕೊಂಡ ಘಟನೆ ಹಾಸನ ಬಸ್ ನಿಲ್ದಾಣದಲ್ಲಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡಿರುವ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಂಗಳವಾರ ಸಂಜೆ ಹಾಸನದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸುದೀಪ್ ಮತ್ತು ಸುನೀಲ್ ಎಂಬ ಹುಡುಗರು ಒಬ್ಬಳೆ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಸುದೀಪ್ ಪ್ರೀತಿ ಮಾಡುತ್ತಿರುವ ವಿಷಯ ತಿಳಿದ ಸುನೀಲ್ ಆತನ ಮೇಲೆ ಹಲ್ಲೆ ಮಾಡಿದ್ದಾನೆ. [ಹೆಣ್ಣಿನ ಆಶೆಗೆ ಬಿದ್ದವರನ್ನು ಏನು ಮಾಡ್ತಿದ್ದರು ಗೊತ್ತಾ?]

hassan

ಸುದೀಪ್ ಹಿಂಬಾಲಿಸಿಕೊಂಡು ಬಂದ ಸುನೀಲ್ ಆತನ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸುದೀಪ್ ಸುನೀಲ್ ಮೇಲೆ ಹಲ್ಲೆ ಮಾಡಿದ್ದಾನೆ. ಸುನೀಲ್ ಸಹೋದರ ಮತ್ತು ಆತನ ಗೆಳೆಯರು ಈ ಸಂದರ್ಭದಲ್ಲಿ ಆತನನ್ನು ತಡೆಯಲು ಮುಂದಾಗಿದ್ದಾರೆ. [ಬೆಂಗಳೂರಲ್ಲಿ 27/65 'ಅಪೂರ್ವ'ವಾದ ಪ್ರೇಮವಿವಾಹ ಕಥೆ]

ಈ ಸಮಯದಲ್ಲಿ ಸುನೀಲ್ ಸುದೀಪ್‌ಗೆ ಚಾಕುವಿನಿಂದ ಇರಿದಿದ್ದಾನೆ. ಸುದೀಪ್ ಆತನ ಸ್ನೇಹಿತ ಹೇಮಂತ್ ಸೇರಿಕೊಂಡು ನೂರಾರು ಜನರ ಮುಂದೆಯೇ ಸುನೀಲ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ನೂರಾರು ಜನರಿದ್ದರೂ ಯಾರೂ ಜಗಳ ಬಿಡಿಸಲಿಲ್ಲ. [ಪ್ರಿಯಕರನ ಹಿಂಸೆಗೆ ಬೇಸತ್ತ 15 ವರ್ಷದ ಹುಡುಗಿ ಆತ್ಮಹತ್ಯೆ]

ಸುನೀಲ್ ಹೊಟ್ಟೆ ಮತ್ತು ಎದೆ ಭಾಗಕ್ಕೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Two youths have been taken to hospital after fight in Hassan bus stand on June 21, 2016.
Please Wait while comments are loading...