ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಮಾಂಸ ಭಕ್ಷಕರ ವಿರುದ್ಧ ಟ್ವಿಟ್ಟಿಗರ ತೀವ್ರ ಆಕ್ಷೇಪ

ಕಣ್ಣೂರಿನಲ್ಲಿ ಪ್ರತಿಭಟನೆಯ ವೇಳೆ ದನವನ್ನು ಹತ್ಯೆಗೈದು ಮಾಂಸವನ್ನು ಹಂಚಿದ ಯುವ ಕಾಂಗ್ರೆಸ್ ಮುಖಂಡರ ಕ್ರಮ ವ್ಯಾಪಕ ಟೀಕೆಗೊಳಗಾಗಿದೆ.

|
Google Oneindia Kannada News

ದೇವರನಾಡು ಕೇರಳದ ಕಣ್ಣೂರಿನಲ್ಲಿ ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದನ್ನು ಪ್ರತಿಭಟಿಸುವ ವೇಳೆ, ದನವನ್ನು ಹತ್ಯೆಗೈದು ಮಾಂಸವನ್ನು ಹಂಚಿದ ಯುವ ಕಾಂಗ್ರೆಸ್ ಮುಖಂಡರ ಕ್ರಮ ವ್ಯಾಪಕ ಟೀಕೆಗೊಳಗಾಗಿದೆ.

ಗೋಹತ್ಯೆ ನಿಷೇಧವಿಲ್ಲದ ರಾಜ್ಯಗಳಲ್ಲಿ ಕೇರಳ ಕೂಡ ಒಂದಾಗಿದ್ದರೂ, ಪ್ರತಿಭಟನೆಯ ನೆಪದಲ್ಲಿ ಅನಾಗರೀಕರಂತೆ ವರ್ತಿಸಿದ ಕಾಂಗ್ರೆಸ್ ಯುವ ಮುಖಂಡರನ್ನು ಟ್ವಿಟ್ಟಿಗರು ಹಿಗ್ಗಾಮುಗ್ಗ ಜಾಲಾಡಿಸುತ್ತಿದ್ದಾರೆ. (ಬೀಫ್ ಫೆಸ್ಟಿವಲ್ ವಿರುದ್ಧ ಗೋರಕ್ಷಕರ ಪ್ರತಿಭಟನೆ)

ಖುದ್ದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಾ ತಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಶೈಲಿಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಆದರೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನಾವು ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವ ಪಾಠವನ್ನು ದೆಹಲಿ ಅಥವಾ ನಾಗಪುರದಿಂದ ಕಲಿಯಬೇಕಾಗಿಲ್ಲ ಎನ್ನುವ ಮೂಲಕ ಕಣ್ಣೂರಿನ ಘಟನೆಯನ್ನು ಸಮರ್ಥಿಸಿಕೊಂಡಂತೆ ಹೇಳಿಕೆ ನೀಡಿದ್ದಾರೆ.

#StopBeefFest ಮತ್ತು #Congress ಹ್ಯಾಷ್ ಟ್ಯಾಗ್ ನಲ್ಲಿ ಟ್ವಿಟ್ಟಿಗರು ಯುವ ಕಾಂಗ್ರೆಸ್ ಮತ್ತು ಕಣ್ಣೂರಿನಲ್ಲಿ ನಡೆದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಕೆಲವೊಂದು ಸ್ಯಾಂಪಲ್..

ಬೀಫ್ ಫೆಸ್ಟ್ ಗೆ ಅವಕಾಶ ನೀಡಬಾರದು

ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಬೀಫ್ ಫೆಸ್ಟ್ ನಡೆಯಲು ಅವಕಾಶ ನೀಡಬಾರದು. ಪುಣ್ಯಕೋಟಿಯ ಮೇಲೆ ಇದೆಂಥಾ ನಾಚಿಕೆಗೇಡಿನ ಕ್ರಮ.

ಕೇರಳದಲ್ಲಿ ನಡೆದದ್ದು ಇಲ್ಲಿ ನಡೆಯಬಾರದು

ನಮ್ಮ ದೇಶ ಬೀಫ್ ಫೆಸ್ಟ್ ವಿರೋಧಿಸುತ್ತದೆ. ಕೇರಳದಲ್ಲಿ ನಡೆದ ದೇಶದ ಇತರ ಭಾಗಗಳಲ್ಲಿ ನಡೆಯಬಾರದು.

ದೇವರ ನಾಡು, ದೆವ್ವಗಳ ನಾಡಾಗಿದೆ

ದೇವರ ನಾಡು, ದೆವ್ವಗಳ ನಾಡಾಗಿದೆ, ನಮ್ಮ ಬೆಂಗಳೂರು ನಿಮ್ಮ ಕ್ರೂರತೆ ತೋರಿಸುವ ನಗರವಲ್ಲ.

ಮುಂದೆ ಮನುಷ್ಯರನ್ನೂ ಕೊಲ್ಲುತ್ತಾರೆ

ಇವತ್ತು ದನವನ್ನು ಕೊಲ್ಲುವವರು ನಾಳೆ ಮನುಷ್ಯನನ್ನೂ ಕೊಲ್ಲುತ್ತಾರೆ.

ಬೆಂಗಳೂರು ಪೊಲೀಸರು ಮಧ್ಯಪ್ರವೇಶಿಸಬೇಕು

ದಯವಿಟ್ಟು ಬೆಂಗಳೂರು ಪೊಲೀಸರು ಈ ಕಾರ್ಯಕ್ರಮವನ್ನು ತಡೆಹಿಡಿಯಿರಿ, ನಮ್ಮ ಬೆಂಗಳೂರಿನಲ್ಲಿ ಇಂತಹಾ ಕ್ರೂರ ಘಟನೆ ನಡೆಯುವುದು ಬೇಡ.

ಮೋದಿಯವರನ್ನು ವಿರೋಧಿಸುವ ಸಲುವಾಗಿ ದನ ಸಾಯಿಸಬೇಡಿ

ಮೋದಿಯವರನ್ನು ವಿರೋಧಿಸ ಬೇಕು ಎನ್ನುವ ಕಾರಣಕ್ಕಾಗಿ ಇಂತಹ ಕಾರ್ಯಕ್ರಮವನ್ನು ಬೆಂಗಳೂರಿಗೆ ತರಬೇಡಿ.

ಕರ್ನಾಟಕದಲ್ಲಿ ಇಂತಹ ಘಟನೆ ನಡೆಯಲು ಬಿಡುವುದಿಲ್ಲ

ನಮ್ಮ ಕಣ್ಣಮುಂದೆ ಇಂತಹ ಯಾವುದೇ ಘಟನೆ ನಡೆಯಲು ಬಿಡುವುದಿಲ್ಲ. ಕೇರಳದಲ್ಲಿ ನಡೆದ ಘಟನೆ ಕರ್ನಾಟಕದಲ್ಲಿ ನಡೆಯಲು ಬಿಡುವುದಿಲ್ಲ.

English summary
Twitterati condemning Kannuru incident and strongly opposing Beef Fest organized in Bengaluru on May 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X