ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ, ತಿವಾರಿ ಸಾವಿಗೆ ಪ್ರತಾಪ್ ಕಂಬನಿ

ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ಲಕ್ನೋದಲ್ಲಿ ನಿಗೂಢ ಸಾವಿಗೀಡಾಗಿರುವ ಸುದ್ದಿ ಕಂಡು ಟ್ವೀಟ್ ಲೋಕ ಕಂಬನಿ ಮಿಡಿದಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 17: ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ಲಕ್ನೋದಲ್ಲಿ ನಿಗೂಢ ಸಾವಿಗೀಡಾಗಿರುವ ಸುದ್ದಿ ಕಂಡು ಟ್ವೀಟ್ ಲೋಕ ಕಂಬನಿ ಮಿಡಿದಿದೆ. ಹಲವಾರು ರಾಜಕಾರಣಿಗಳು, ಐಎಎಸ್ ಬ್ಯಾಚ್ ಮೇಟ್ ಗಳು, ಸಾರ್ವಜನಿಕರು ಸೇರಿದಂತೆ ಅನೇಕ ಮಂದಿ ಟ್ವೀಟ್ ಮಾಡಿ ತಮ್ಮ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ಮುಖಂಡ ಸುರೇಶ್ ಕುಮಾರ್, ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕರ ಸಂತಾಪ ಸಂದೇಶಗಳು ಇಲ್ಲಿವೆ. [ಆಹಾರ ಇಲಾಖೆ ಆಯುಕ್ತ ಅನುರಾಗ್ ತಿವಾರಿ ಶವವಾಗಿ ಪತ್ತೆ!]

'ಬೆಳಗ್ಗೆ ಎದ್ದ ಕೂಡಲೇ ಎಂಥಾ ಕೆಟ್ಟ ವಾರ್ತೆ ಕೇಳಿದೆ, ನನ್ನ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ' ಎಂದು ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಫೇಸ್ ಬುಕ್ ವಾಲ್ ಮೇಲೆ ಬರೆದುಕೊಂಡಿದ್ದಾರೆ.

ಕರ್ನಾಟಕ ಕೇಡರ್ ನ 2007ನೇ ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರು ಸದ್ಯ ಆಹಾರ ಮತ್ತು ನಾಗರಿಕ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. 4 ವಾರಗಳ ರಜೆ ಮೇಲೆ ಸ್ವಂತ ಊರಿಗೆ ತೆರಳಿದ್ದರು. ಲಕ್ನೋದಿಂದ 130 ಕಿ.ಮೀದ ತಮ್ಮ ಗ್ರಾಮಕ್ಕೆ ತೆರಳಿದ್ದ ತಿವಾರಿ ಅವರು ಹುಟ್ಟುಹಬ್ಬ ಆಚರಣೆಗಾಗಿ ಲಕ್ನೋದ ಹಜರತ್ ಗಂಜ್ ನ ಮೀರಾಭಾಯಿ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರು.

36 ವರ್ಷ ವಯಸ್ಸಿನ ತಿವಾರಿ

36 ವರ್ಷ ವಯಸ್ಸಿನ ತಿವಾರಿ

2007 ಬ್ಯಾಚಿನ ಅಧಿಕಾರಿ ತಿವಾರಿ ಅವರು ಜೂನ್ 2015ರಲ್ಲಿ ಬೀದರ್ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಲಕ್ನೋ ವಿವಿಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ ತಿವಾರಿ ಅವರು, ಮಧುಗಿರಿ ಸಹಾಯಕ ಆಯುಕ್ತ, ಕೊಡಗು ಜಿಲ್ಲಾಧಿಕಾರಿ,ಆಹಾರ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅಧಿಕಾರಿ ಸಾವಿನ ಅಘಾತ

ಐಎಎಸ್ ಅಧಿಕಾರಿ ಸಾವು ಆಘಾತ ತಂದಿದೆ. ಉತ್ತರಪ್ರದೇಶದಲ್ಲಿ ಯಾವ ಸರ್ಕಾರವಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ತಿವಾರಿ ಸಾವಿನ ಆಘಾತ

ಲಕ್ನೋ ವಿವಿಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ ತಿವಾರಿ ನನ್ನ ಬ್ಯಾಚ್ ಮೇಟ್, ಈ ರೀತಿ ಆತನ ಬದುಕು ಅಂತ್ಯಗೊಂಡಿರುವುದು ದುರಂತ ಎಂದು ಬ್ಯಾಚ್ ಮೇಟ್ ಟ್ವೀಟ್ ಮಾಡಿದ್ದಾರೆ.

ತಿವಾರಿ ಸಾವಿಗೆ ಸಂತಾಪ

ಅನುರಾಗ್ ತಿವಾರಿ ಸಾವು ಆಘಾತ ತಂದಿದೆ ಎಂದು ಸಂತಾಪ ಸೂಚಿಸಿದ ಮಾಜಿ ಸಚಿವ, ಬಿಜೆಪಿ ಮುಖಂಡ ಸುರೇಶ್ ಕುಮಾರ್.

ಹಲವು ಅನುಮಾನ

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿ ಹೇಳುತ್ತಿದೆ. ಇನ್ನೂ ಅಟ್ಸಾಪಿ ವರದಿ ಬಂದಿಲ್ಲ. ಸಾವಿನ ಸುತ್ತಾ ಹಲವು ಅನುಮಾನಗಳು ಕಾಡುತ್ತಿವೆ.

{promotion-urls}

English summary
Twitterati mourns Karnataka IAS officer Anurag Tiwari death in Lucknow. Anurag Tiwari, a Karnataka cadre officer's body was found dead by a road in Uttar Pradesh capital Lucknow early this morning, the police said, calling it a "suspicious death".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X