ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಗ್ರಹಣ, ಡಿಕೆಶಿ ವಿಚಾರಣೆ ಮತ್ತು ಇತರ ಸುದ್ದಿಗಳು

ಸೋಮವಾರ (ಆಗಸ್ಟ್ 7) ಗಮನ ಸೆಳೆದ ಸುದ್ದಿಗಳು. ಡಿಕೆಶಿವಕುಮಾರ್ ವಿಚಾರಣೆ, ಚಂದ್ರಗ್ರಹಣ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಆಗಸ್ಟ್ 22ಕ್ಕೆ ಬ್ಯಾಂಕ್ ನೌಕರರ ಮುಷ್ಕರ - ಹೆಚ್ಚು ಗಮನ ಸೆಳೆದ ಸುದ್ದಿಗಳು.

|
Google Oneindia Kannada News

ಬೆಂಗಳೂರು, ಆಗಸ್ಟ್ 8: ಸೋಮವಾರದ (ಆಗಸ್ಟ್ 7) ಸುದ್ದಿಗಳಲ್ಲಿ ಜನರ ಗಮನವನ್ನು ಬಹುವಾಗಿ ಸೆಳೆದ ಸುದ್ದಿಗಳೆಂದರೆ, ಅದು ಚಂದ್ರಗ್ರಹಣ, ಆದಾಯ ತೆರಿಗೆ ಅಧಿಕಾರಿಗಳಿಂದ ಡಿಕೆ ಶಿವಕುಮಾರ್ ವಿಚಾರಣೆ, ಇದರ ಜತೆಗೆ ಮಂತ್ರಾಲಯದಲ್ಲಿ ರಾಘವೇಂದ್ರ ಶ್ರೀಗಳ ಆರಾಧನೆ ಇತ್ಯಾದಿ. ಇವು ಬಿಟ್ಟರೆ, ಆಗಸ್ಟ್ 22ರಂದು ಬ್ಯಾಂಕ್ ನೌಕರರ ಮುಷ್ಕರ, ಗುಜರಾತ್ ರಾಜ್ಯಸಭಾ ಚುನಾವಣೆಗೆ ಸಂಬಂಧಪಟ್ಟ ವಿಚಾರಗಳು ಓದುಗರ ಆಸಕ್ತಿ ಕೆರಳಿಸಿದ್ದವು. ಆ ಎಲ್ಲಾ ಸುದ್ದಿಗಳಲ್ಲಿ ಟಾಪ್ 10 ಸುದ್ದಿಗಳ ಹೂರಣವನ್ನು ಸಂಕ್ಷಿಪ್ತವಾಗಿ ನಿಮಗೆ ನೀಡುವ ಪ್ರಯತ್ನ ಇಲ್ಲಿದೆ.

1. ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ: ತಿಳಿಯಬೇಕಾದ 5 ಸಂಗತಿ
ಈ ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ ಆಗಸ್ಟ್ 7ರ ಮಧ್ಯರಾತ್ರಿ ಸಂಭವಿಸಿದೆ. ರಾತ್ರಿ 10:52 ಕ್ಕೆ ಗ್ರಹಣ ಆರಂಭವಾಗಿ, 12:48 ರವರೆಗೆ ಗ್ರಹಣ ಕಾಣಿಸಿಕೊಂಡಿತ್ತು. ಆದರೆ, ಭಾರತದ ಬಹುತೇಕ ಭಾಗಗಳಲ್ಲಿ ಇದು ಸರಿಯಾಗಿ ಗೋಚರಿಸಲಿಲ್ಲ. ಇದಕ್ಕೆ ಕಾರಣ, ಮಳೆ ಹಾಗೂ ಆಗಸದಲ್ಲಿ ಕವಿದ ಮೋಡಗಳು.

Top 5 News of Aug 7: DK Shivakumar's interrogation, lunar eclipse

ಬೆಂಗಳೂರಿನಲ್ಲಿ ಕಂಡ ಭಾಗಶಃ ಚಂದ್ರಗ್ರಹಣಬೆಂಗಳೂರಿನಲ್ಲಿ ಕಂಡ ಭಾಗಶಃ ಚಂದ್ರಗ್ರಹಣ

ಹನ್ನೆರಡು ರಾಶಿಯವರ ಮೇಲೆ ಚಂದ್ರ ಗ್ರಹಣದ ಪರಿಣಾಮಗಳು.. ಹನ್ನೆರಡು ರಾಶಿಯವರ ಮೇಲೆ ಚಂದ್ರ ಗ್ರಹಣದ ಪರಿಣಾಮಗಳು..

2. ತೆರಿಗೆ ಇಲಾಖೆ ಕಚೇರಿಗೆ ವಿಚಾರಣೆಗಾಗಿ ಬಂದ ಇಂಧನ ಸಚಿವ ಡಿಕೆ ಶಿವಕುಮಾರ್
ಇತ್ತೀಚೆಗೆ, ಆದಾಯ ತೆರಿಗೆ ಇಲಾಖೆಯ ದಾಳಿಗೆ ಒಳಪಟ್ಟಿದ್ದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು, ಸೋಮವಾರ ಆದಾಯ ತೆರಿಗೆ ಇಲಾಖೆಗೆ ವಿಚಾರಣೆಗಾಗಿ ಆಗಮಿಸಿದ್ದರು. ಇದೇ ವೇಳೆ ಡಿಕೆಶಿ ಅವರ ಆಪ್ತರೂ ಆದ ಜ್ಯೋತಿಷಿ ದ್ವಾರಕಾನಾಥ್, ಡಿಕೆಶಿ ಸಹೋದರ ಡಿಕೆ ಸುರೇಶ್ ಕೂಡಾ ಇಲಾಖೆ ಕಚೇರಿಗೆ ಆಗಮಿಸಿ ಈ ವಿಚಾರಣೆ ಎದುರಿಸಬೇಕಾಯಿತು.

ಐಟಿ ಕಚೇರಿಗೆ ವಿಚಾರಣೆಗೆ ಬಂದ ಡಿ.ಕೆ.ಶಿವಕುಮಾರ್ ಐಟಿ ಕಚೇರಿಗೆ ವಿಚಾರಣೆಗೆ ಬಂದ ಡಿ.ಕೆ.ಶಿವಕುಮಾರ್

ಇಂದಿನ ವಿಚಾರಣೆ ಮುಗಿದಿದೆ, ನಾಳೆ ಬರಲು ಹೇಳಿಲ್ಲ: ಡಿಕೆಶಿ ಇಂದಿನ ವಿಚಾರಣೆ ಮುಗಿದಿದೆ, ನಾಳೆ ಬರಲು ಹೇಳಿಲ್ಲ: ಡಿಕೆಶಿ

Top 5 News of Aug 7: DK Shivakumar's interrogation, lunar eclipse

3. ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ರಾಯರ ಆರಾಧನೆ

ರಾಘವೇಂದ್ರ ಸ್ವಾಮಿಗಳ 346ನೇ ಆರಾಧನೆ ಮಹೋತ್ಸವಕ್ಕೆ ಮಂತ್ರಾಲಯವು ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ದೇವಸ್ಥಾನವೂ ಒಳಗೊಂಡಂತೆ ಮುಖ್ಯ ಬೀದಿಯ ಹಲವು ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಆಗಸ್ಟ್ ಎಂಟರಿಂದ ಹತ್ತನೇ ತಾರೀಕಿನವರೆಗೆ ಆರಾಧನೆ ನಡೆಯುತ್ತದೆ. ಈ ಮೂರೂ ದಿನ ರಾಯರ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಆರಾಧನೆಗೆ ಮಂತ್ರಾಲಯಕ್ಕೆ ಲಕ್ಷ ಭಕ್ತರ ನಿರೀಕ್ಷೆ, ಸಿದ್ಧತೆ ಪೂರ್ಣ ಆರಾಧನೆಗೆ ಮಂತ್ರಾಲಯಕ್ಕೆ ಲಕ್ಷ ಭಕ್ತರ ನಿರೀಕ್ಷೆ, ಸಿದ್ಧತೆ ಪೂರ್ಣ

4. ಗುಜರಾತ್ ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಗೆ ಸವಾಲು

ಗುಜರಾತ್ ನ ರಾಜ್ಯಸಭಾ ಚುನಾವಣೆಯು ಕರ್ನಾಟಕದ ಗಮನವನ್ನು ಬಹುತೇಕವಾಗಿ ಸೆಳೆದಿದೆ. ಈ ಚುನಾವಣೆಯ ಹಿನ್ನೆಲೆಯಲ್ಲಿ, ಬಿಜೆಪಿಯ ಕುದುರೆ ವ್ಯಾಪಾರಕ್ಕೆ ಹೆದರಿ, ಅಲ್ಲಿನ 44 ಕಾಂಗ್ರೆಸ್ ಶಾಸಕರು, ಬೆಂಗಳೂರಿನ ಈಗಲ್ಟನ್ ರೆಸಾರ್ಟ್ ಗೆ ಪಲಾಯನ ಮಾಡಿದ್ದು ಈಗ ಹಳೇ ವಿಚಾರ. ಈಗ ತಮ್ಮ ಸ್ವಸ್ಥಾನಕ್ಕೆ ಮರಳಿರುವ ಕಾಂಗ್ರೆಸ್ ಶಾಸಕರು ತಮ್ಮ ನಾಯಕ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಿಕೊಳ್ಳುತ್ತಾರೆಯೇ ಎಂಬುದು ಕುತೂಹಲದ ಸಂಗತಿ.

ಗುಜರಾತ್ ಚುನಾವಣೆ: ಡಿಕೆ ಶಿವಕುಮಾರ್ ಅಖಾಡಕ್ಕಿಳಿದರೂ ಗೆಲುವು ಸುಲಭದ ತುತ್ತಲ್ಲ ಗುಜರಾತ್ ಚುನಾವಣೆ: ಡಿಕೆ ಶಿವಕುಮಾರ್ ಅಖಾಡಕ್ಕಿಳಿದರೂ ಗೆಲುವು ಸುಲಭದ ತುತ್ತಲ್ಲ

5. ಆಗಸ್ಟ್ 22ರಿಂದ ಬ್ಯಾಂಕ್ ನೌಕರರ ಮುಷ್ಕರ

ಇತರೆ ಕೆಲವು ಔದ್ಯೋಗಿಕ ವಲಯಗಳಿಗೆ ಹೋಲಿಸಿದರೆ, ವೇತನ, ರಜೆಗಳು, ದುಡಿಮೆಯ ಅವಧಿ ಸೇರಿದಂತೆ ಅನೇಕ ಸವಲತ್ತುಗಳಿದ್ದರೂ, ವರ್ಷಕ್ಕೆರಡು ಬಾರಿ ವೇತನ ಪರಿಷ್ಕರಣೆ ಮುಂತಾದ ಹಲವಾರು ಬೇಡಿಕೆಗಳನ್ನಿಟ್ಟುಕೊಂಡು ಮುಷ್ಕರಕ್ಕಿಳಿಯುವ ಬ್ಯಾಂಕ್ ನೌಕರರು ಈ ಬಾರಿ ಮತ್ತೆ ಧರಣಿಗೆ ಕೂಡಲು ನಿರ್ಧರಿಸಿದ್ದಾರೆ. ಇಡೀ ಬ್ಯಾಂಕಿಂಗ್ ವಲಯವೇ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಹೇಳಲಾಗಿದೆ.

ಆಗಸ್ಟ್ 22ರಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರಆಗಸ್ಟ್ 22ರಂದು ದೇಶದಾದ್ಯಂತ ಬ್ಯಾಂಕ್ ಮುಷ್ಕರ

English summary
Top 5 News on Tuesday (August 7th) including Karnataka's Power Minister DK Shivakumar's interrogation in Income Tax office of Bengaluru, Lunar eclipse, Bank strike on August 22 etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X