ಟೋಲ್ ದರ ಏರಿಕೆ: ಉತ್ತರ ಕೇಳಿ ನೈಸ್ ಕಂಪನಿಗೆ ನೋಟಿಸ್

Subscribe to Oneindia Kannada

ಬೆಂಗಳೂರು, ಜುಲೈ 11: ಟೋಲ್ ಸರ ಏರಿಸಿದ್ದ ನೈಸ್ ಕಂಪನಿಗೀಗ ಸಂಕಷ್ಟ ಎದುರಾಗಿದೆ. ಟೋಲ್‌ ದರ ಏರಿಕೆಯನ್ನು 7 ದಿನದೊಳಗೆ ಹಿಂತೆಗೆದುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿ ಲೋಕೋಪಯೋಗಿ ಇಲಾಖೆ ಕೊನೆಗೂ ನೈಸ್ ಸಂಸ್ಥೆಗೆ ನೋಟಿಸ್‌ ಜಾರಿಗೊಳಿಸಿದೆ.

ನೈಸ್ ರಸ್ತೆ ಟೋಲ್ ದರ ಏರಿಕೆ, ಎಲ್ಲೆಲ್ಲಿ? ಎಷ್ಟೆಷ್ಟು?

ಜುಲೈ 1 ರಿಂದ 'ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌' (ನೈಸ್‌) ಕಂಪನಿ ಶೇ. 33 ರಷ್ಟು ಟೋಲ್‌ ದರ ಏರಿಕೆ ಮಾಡಿತ್ತು. ಇದು ಸಾರ್ವಜನಿಕರಿಗೆ ವಿಪರೀತ ಹೊರೆಯಾಗಿತ್ತು. ಮತ್ತು ವ್ಯಾಪಕ ಆಕ್ರೋಶಕ್ಕೂ ಗುರಿಯಾಗಿತ್ತು.

Toll rate hike: Notices to NICE company by Department of Public Works

"ಫ್ರೇಮ್‌ ವರ್ಕ್‌ ಅಗ್ರಿಮೆಂಟ್‌ ಜಾರಿಗೊಳಿಸದೇ ನೈಸ್ ಕಂಪನಿ ಕರ್ತವ್ಯ ಲೋಪ ಎಸಗಿದೆ. ಈ ಕುರಿತು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ಆದರೆ ಅದಿನ್ನೂ ಇತ್ಯರ್ಥ ಆಗಿಲ್ಲ. ಹೀಗಿದ್ದೂ ಟೋಲ್‌ ದರ ಹೆಚ್ಚಿಸಿರುವುದು ಅಕ್ರಮ. ಕೂಡಲೇ ಈ ನಿರ್ಧಾರ ಹಿಂಪಡೆಯಿರಿ," ಎಂದು ಕಂಪನಿಗೆ ಸ್ಪಷ್ಟವಾಗಿ ನೋಟಿಸ್ ನಲ್ಲಿ ಹೇಳಲಾಗಿದೆ.

ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ : ಚಾಲಕರ ವಿರೋಧ

ಫ್ರೇಮ್‌ ವರ್ಕ್‌ ಅಗ್ರಿಮೆಂಟ್‌ ನಂತೆ ಪೆರಿಫರಲ್‌ ಮತ್ತು ಲಿಂಕ್‌ ರಸ್ತೆಯನ್ನು 2012 ರ ಮಾರ್ಚ್‌ 29 ರೊಳಗೆ ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಬೇಕಿತ್ತು. ಆದರೆ ಡಾಂಬರ್‌ ರಸ್ತೆಯನ್ನು ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಿಲ್ಲ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಫೆಬ್ರುವರಿ 5, 2016ರಂದು ಕಂಪನಿಗೆ ನೋಟಿಸ್‌ ನೀಡಿದೆ.

'ಇದನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಟೋಲ್‌ ದರ ಹೆಚ್ಚಳಕ್ಕೆ ಅವಕಾಶವಿಲ್ಲ. ದರ ಪರಿಷ್ಕರಣೆ ಮತ್ತು ಏರಿಕೆ ರಾಜ್ಯ ಸರ್ಕಾರದ ಅಧಿಸೂಚನೆ ಮೂಲಕವೇ ಆಗಬೇಕು. ಆಗ ಮಾತ್ರ ಅದಕ್ಕೆ ಮಾನ್ಯತೆ' ಎಂದು ನೋಟಿಸ್ ನಲ್ಲಿ ಸ್ಪಷ್ಟಪಡಿಸಲಾಗಿದೆ.

English summary
The Department of Public Works has finally issued a notice to NICE, claiming that it would take legal action if the toll hike was not withdrawn within 7 days.
Please Wait while comments are loading...