ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline

Posted By:
Subscribe to Oneindia Kannada

ಬೆಂಗಳೂರು, ಜುಲೈ 18: ಮಂಗಳೂರಿನ ಡಿವೈಎಸ್ಪಿ ಎಂಕೆ ಗಣಪತಿ ಅವರು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಟೈಮ್ ಲೈನ್ ಇಲ್ಲಿದೆ.

ವರ್ಗಾವಣೆಯ ಜೊತೆಗೆ ವೃತ್ತಿ ಬದುಕು ಕಟ್ಟಿಕೊಂಡಿದ್ದ ಗಣಪತಿ ಅವರ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಸಿಐಡಿ ಮಧ್ಯಂತರ ವರದಿಯಲ್ಲಿ ಕಂಡು ಬಂದಿದೆ. ಆದರೆ, ಪೊಲೀಸ್ ಇಲಾಖೆ ಕಿರುಕುಳವೇ ಕಾರಣ ಎಂಬುದಕ್ಕೆ ಸಾಕ್ಷಿ ಸಿಕ್ಕಿಲ್ಲ. ಈಗ ನ್ಯಾಯಾಂಗ ತನಿಖೆ ಜಾರಿಯಲ್ಲಿದೆ. [ಗಣಪತಿ ಆತ್ಮಹತ್ಯೆ ಕೇಸ್: ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ]

ಮಡಿಕೇರಿ ಬಳಿಯ ಸಿದ್ಧಾಪುರದ ಮಂಜರಾಯನಪಟ್ಟಣದವರು. ಎಂ ಕುಶಾಲಪ್ಪ ಅವರ ಪುತ್ರ ಗಣಪತಿ ಅವರ ಸಾವಿನ ಕಾರಣ ಸ್ಪಷ್ಟವಾದರೂ ತನಿಖೆ, ಶಿಕ್ಷೆ ಬಗ್ಗೆ ಸ್ಪಷ್ಟನೆ ಸಿಗುತ್ತಿಲ್ಲ. ಗಣಪತಿ ಅವರ ಸೇವಾ ಅವಧಿ ಹಾಗೂ ಆತ್ಮಹತ್ಯೆ ಹಾಗೂ ನಂತರದ ಘಟನಾವಳಿಗಳತ್ತ ಒಂದು ನೋಟ ಮುಂದಿದೆ.

MK Ganapati case Timeline


ಜುಲೈ 19:
ಮಾಜಿ ಸಚಿವ ಕೆಜೆ ಜಾರ್ಜ್ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಮಡಿಕೇರಿ ಪೊಲೀಸರು ಮಂಗಳವಾರ ಪ್ರಾಥಮಿಕ ತನಿಖಾ ವರದಿ (ಎಫ್ ಐಆರ್) ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಜಾರ್ಜ್ ಅವರು ಮೊದಲ ಆರೋಪಿ (A1) ಆಗಿದ್ದಾರೆ.[ಹೆಚ್ಚಿನ ವಿವರಗಳಿಗೆ ಮುಂದೆ ಓದಿ]
ಜುಲೈ 18:
ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆಜೆ ಜಾರ್ಜ್, ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ವಜುಭಾಯಿ ವಾಲ.

* ಮೊದಲ ಬಾರಿಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಎಡಿಜಿಪಿ ಪ್ರಣಬ್ ಮೊಹಂತಿ. ಮಡಿಕೇರಿ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಕೆ. [ವಿವರ ಇಲ್ಲಿ ಓದಿ]

* ಕೆಜೆ ಜಾರ್ಜ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ತನಿಖಾಧಿಕಾರಿಗಳಿಗೆ ಮಡಿಕೇರಿ ಜೆಎಂಎಫ್ ಸಿ ನ್ಯಾಯಾಲಯದಿಂದ ಆದೇಶ. ಗಣಪತಿ ಅವರ ಪುತ್ರ ನೇಹಲ್ ಅವರ ಅರ್ಜಿ ಪುರಸ್ಕರಿಸಿದ ನ್ಯಾ. ಅನ್ನಪೂರ್ಣೆಶ್ವರಿ.

ಜುಲೈ 17, 2016 : ಸೋಮವಾರಪೇಟೆಯ ರಂಗಸಮುದ್ರದಲ್ಲಿ ಗಣಪತಿ ಅವರ 11 ನೇ ದಿನ ಕಾರ್ಯಗಳು ನೆರವೇರಿಸಲಾಯಿತು. ನ್ಯಾಯಾಂಗ ತನಿಖೆ ಬೇಡ, ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಗಣಪತಿ ಕುಟುಂಬದವರ ಆಗ್ರಹ.

KJ George

ಜುಲೈ 16: ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಅಧಿಕೃತ ನ್ಯಾ.ಕೆ.ಎನ್.ಕೇಶವನಾರಾಯಣ ಅವರನ್ನು ನೇಮಿಸಲಾಗಿದೆ. ವಿಚಾರಣೆ ಆಯೋಗ-1952ರ ಪ್ರಕಾರ ನ್ಯಾ.ಕೇಶವನಾರಾಯಣ ಕಾರ್ಯನಿರ್ವಹಿಸಲಿದ್ದು, 6 ತಿಂಗಳೊಳಗೆ ವರದಿ ನೀಡಬೇಕಿದೆ. [ಹೆಚ್ಚಿನ ವಿವರ ಇಲ್ಲಿದೆ]

* ಜುಲೈ 15 : ಪೊಲೀಸ್ ಇಲಾಖೆಯಿಂದ ಗಣಪತಿ ಅವರಿಗೆ ಕಿರುಕುಳವಾಗಿಲ್ಲ ಎಂದು ಎಡಿಜಿಪಿ ಎಎಂ ಪ್ರಸಾದ್ ಅವರಿಂದ ಹೇಳಿಕೆ.

* ಕೆಜೆ ಜಾರ್ಜ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್.

* ಸಿಐಡಿ ವರದಿ ಸೋರಿಕೆ ಬಂದ ಸುದ್ದಿಯನ್ನು ಅಲ್ಲಗೆಳೆದ ಸಿಎಂ ಸಿದ್ದರಾಮಯ್ಯ.

* ಜುಲೈ 14 : ಕೆಜೆ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ನಡೆಸಲಾದ ಕೊಡಗು ಬಂದ್ ಯಶಸ್ವಿ.
* ಸದನದಲ್ಲಿ ಸ್ಪೀಕರ್ ಸಂಧಾನ ವಿಫಲ, ವಿಪಕ್ಷಗಳಿಂದ ಅಹೋರಾತ್ರಿ ಧರಣಿ ಮುಂದುವರಿಕೆ.

* ಜುಲೈ 13 : ಕೆಜೆ ಜಾರ್ಜ್ ಅವರು ರಾಜೀನಾಮೆ ನೀಡುತ್ತಿಲ್ಲ ಎಂದು ಲಿಖಿತ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ.
* ಪ್ರತಿಪಕ್ಷಗಳಿ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದಾಗಿ ಸಿದ್ದರಾಮಯ್ಯರಿಂದ ಘೋಷಣೆ.
* ಸರ್ಕಾರದ ಕ್ರಮ ಖಂಡಿಸಿ, ಬಿಜೆಪಿ, ಜೆಡಿಎಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ.

* ಜುಲೈ 12 : ಬಿಜೆಪಿಯಿಂದ ಪ್ರತಿಭಟನೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವಂತೆ ಆಗ್ರಹ.
* ಸಿಎಂ ಬಯಸಿದರೆ ಒಂದು ನಿಮಿಷದಲ್ಲೇ ರಾಜೀನಾಮೆ ನೀಡುತ್ತೇನೆ, ನನಗೂ ಈ ಕೇಸಿಗೂ ಸಂಬಂಧವಿಲ್ಲ ಎಂದು ಕೆಜೆ ಜಾರ್ಜ್ ಸದನದಲ್ಲಿ ಸ್ಪಷ್ಟನೆ.


* ಜುಲೈ 11 : ಸಚಿವ ಕೆಜೆ ಜಾರ್ಜ್ ವಿರುದ್ಧ ಗಣಪತಿ ಅವರ ಪತ್ನಿ ಪಾವನಾ ಹಾಗೂ ಪುತ್ರ ನೇಹಾಲ್ ಅವರಿಂದ ಪ್ರತ್ಯೇಕ ದೂರು. ಆದರೆ, ಎಫ್ ಐಆರ್ ದಾಖಲಿಸಲು ಮುಂದಾಗದ ಪೊಲೀಸರು.
* ಡಿವೈಎಸ್ಪಿ ಕಲ್ಲಪ್ಪ ಹಾಗೂ ಗಣಪತಿ ಆತ್ಮಹತ್ಯೆ ಬಗ್ಗೆ ವರದಿ ಕೇಳಿದ ಎಐಸಿಸಿ.
* ವಿಧಾನಸಭೆ ಅಧಿವೇಶನದಲ್ಲೂ ಗಣಪತಿ ಆತ್ಮಹತ್ಯೆ ಬಗ್ಗೆ ಚರ್ಚೆ. ಜಾರ್ಜ್ ಬೆಂಬಲಕ್ಕೆ ನಿಂತ ಸಿಎಂ ಸಿದ್ದರಾಮಯ್ಯ.
* ಸಿಐಡಿ ಎಡಿಜಿಪಿ ಪ್ರತಾಪ್ ಅವರಿಂದ ತನಿಖೆ, ಮಂಗಳೂರಿನ ಡಾ. ಕಿರಣ್ ರಿಂದ ಮಾಹಿತಿ ಸಂಗ್ರಹ. ಮಡಿಕೇರಿ ಲಾಡ್ಜ್ ಹಾಗೂ ಮನೆಗೆ ಭೇಟಿ.

* ಜುಲೈ 10 : ಮಂಗಳೂರಿನಲ್ಲಿದ್ದಾಗ ಮಾನಸಿಕ ಖಿನ್ನತೆ, ತಲೆನೋವು, ಮರೆವು ಕಾಯಿಲೆಗಾಗಿ ಡಾ. ಕಿರಣ್ ಕುಮಾರ್ ಅವರಿಂದ ಗಣಪತಿ ಅವರು ಚಿಕಿತ್ಸೆ ಪಡೆದಿದ್ದ ಬಗ್ಗೆ ವರದಿ.

* ಜುಲೈ 9 : ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಕಾಫಿತೋಟದಲ್ಲಿ ಎಂಕೆ ಗಣಪತಿ ಅವರ ಅಂತ್ಯಕ್ರಿಯೆ ಕೊಡವ ಸಂಪ್ರದಾಯದಂತೆ ನೆರವೇರಿತು.

* ಸಚಿವ ಕೆಜೆ ಜಾರ್ಜ್ ಬಂಧನಕ್ಕೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ .
* ಆತ್ಮಹತ್ಯೆಗೂ ಮುನ್ನ ರೂಮಿನಲ್ಲಿ ಎರಡು ಬಾರಿ ಗುಂಡು ಹಾರಿಸಿದ್ದು ಏಕೆ? ಡೆತ್ ನೋಟ್ ಬರೆದಿಟ್ಟರೆ ಅದು ಎಲ್ಲಿದೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

* ಜುಲೈ 8: ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆಜೆ ಜಾರ್ಜ್ ಹೇಳಿಕೆ.
* ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ ಕರ್ನಾಟಕ ಸರ್ಕಾರ.
* ಗಣಪತಿ ಅವರ ಮೇಲಿದ್ದ ಆರೋಪ, ಕೇಸ್ ಬಗ್ಗೆ ಮಾಧ್ಯಮಗಳಲ್ಲಿ ವರದಿ, ಯಶವಂತಪುರ ಎನ್ ಕೌಂಟರ್, ಮಡಿವಾಳ ಹಾಗೂ ರಾಜಗೋಪಾಲ ನಗರ ಠಾಣೆಯಲ್ಲಿ ಕರ್ತವ್ಯ ಲೋಪ ಆರೋಪ. [ಅವರ ಮೇಲಿದ್ದ ಆರೋಪಗಳು]

* ಜುಲೈ 7: ಮಡಿಕೇರಿಯ ಲಾಡ್ಜ್ ನಲ್ಲಿ(ರೂಮ್ ನಂಬರ್ 315) ನೇಣು ಬಿಗಿದುಕೊಂಡು ಆತ್ಮಹತ್ಯೆ
* ಆತ್ಮಹತ್ಯೆಗೂ ಮುನ್ನ ಸ್ಥಳೀಯ ಚಾನೆಲ್ ವೊಂದರ ಮೂಲಕ ವಿಡಿಯೋ ಮಾಡಿ ಗುಪ್ತಚರ ಎಡಿಜಿಪಿ ಎಎಂ ಪ್ರಸಾದ್ ಹಾಗೂ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ಹಾಗೂ ಸಚಿವ ಕೆಜೆ ಜಾರ್ಜ್ ವಿರುದ್ಧ ಆರೋಪ.

MK Ganapati

ವೃತ್ತಿ ಬದುಕು: [ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]
* ಏಪ್ರಿಲ್ 13, 2016ರಂದು ಡಿವೈಎಸ್ಪಿಯಾಗಿ ಬಡ್ತಿ ನೀಡಲಾಯಿತು.
* ಮಾರ್ಚ್ 10, 2014 ರಿಂದ ಏಪ್ರಿಲ್ 10, 2014 ರ ತನಕ ಸಸ್ಪೆಂಡ್ ಆಗಿದ್ದರು.
* 2011 ಮೃತ ರೌಡಿ ಪಚ್ಚು ಅಲಿಯಾಸ್ ಪ್ರಶಾಂತ್(20) ಅವರ ಸೋದರ ರವೀಂದ್ರ ಅವರು ಗಣಪತಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಮಾನವಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದಾರೆ.
* ಯಶವಂತಪುರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಆಗಸ್ಟ್ 26, 2009 ರಿಂದ ನವೆಂಬರ್ 12, 2011 ರ ತನಕ ಕರ್ತವ್ಯ ನಿರ್ವಹಿಸಿದ್ದರು.
* ಆಲ್ದೂರು, ಸಖರಾಯಪಟ್ಟಣ(ಚಿಕ್ಕಮಗಳೂರು)ದಲ್ಲಿ ಮೊದಲ ಅನುಭವ. ನಂತರ ಮಂಗಳೂರು, ಪುತ್ತೂರು, ಉಳ್ಳಾಲ, ಬೆಂಗಳೂರಿನ ಸಿಐಡಿ ಕಚೇರಿ. ನಂತರ ಉಳ್ಳಾಲ, ಬಂಟ್ವಾಲ, ಕದ್ರಿ(ಮಂಗಳೂರು), ಲಷ್ಕರ್(ಮೈಸೂರು), ಬೆಂಗಳೂರಿನ ಡಿಐಜಿ ಕಚೇರಿ, ಯಶವಂತಪುರ, ಮಡಿವಾಳ, ಬೆಂಗಳೂರಿನ ಐಜಿ ಕಚೇರಿ, ಬೆಂಗಳೂರು ಗ್ರಾಮಾಂತರ, ಐಜಿಪಿ(ಪಶ್ಚಿಮ ವಲಯ) ಮಂಗಳೂರು,

* 1991 ರ ಬ್ಯಾಚಿನ ಅಧಿಕಾರಿ, ಬಿಇಎಂಎಲ್ ನಲ್ಲೂ ಕಾರ್ಯ ನಿರ್ವಹಿಸಿದರು. ಸಬ್ ಇನ್ಸ್ ಪೆಕ್ಟರ್ ಆಗಿ 1994ರಲ್ಲಿ ಅಧಿಕಾರ.

(ಒನ್ಇಂಡಿಯಾ ಸುದ್ದಿ)

English summary
Mangaluru-Madikeri-DySP MK Ganapati Death Case Timeline :Siddaramaiah led Congress government has ordered formation of a single-judge commission of enquiry headed by retired high court judge, Justice K N Keshavanarayana. Here is the timeline of Ganapati' professional life and suicide case
Please Wait while comments are loading...