ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು : ಹುಲಿ ದಾಳಿಗೆ ಮಹಿಳೆ ಬಲಿ

|
Google Oneindia Kannada News

ಚಿಕ್ಕಮಗಳೂರು, ನ. 15 : ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಕಾರಿನಲ್ಲಿ ಹೋಗುತ್ತಿದ್ದವರನ್ನು ಅಟ್ಟಿಸಿಕೊಂಡು ಬಂದಿದ್ದ ಹುಲಿ, ಶನಿವಾರ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಹುಲಿಯನ್ನು ಜನರು ಮುಳ್ಳಯ್ಯನ ಗಿರಿ ಕಾಡಿಗೆ ಓಡಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದಾರೆ.

ಶನಿವಾರ ಬೆಳಗ್ಗೆ ಪಂಡರವಳ್ಳಿಯಲ್ಲಿ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಸುಮಿತ್ರಾ (25) ಎಂಬ ಮಹಿಳೆ ಮೇಲೆ ಹುಲಿ ದಾಳಿ ಮಾಡಿ, ಆಕೆಯನ್ನು ಒಂದು ಕಿ.ಮೀ.ಹೆಚ್ಚು ದೂರ ಎಳೆದುಕೊಂಡು ಹೋಗಿದೆ. ರಸ್ತೆಯಲ್ಲಿ ರಕ್ತ ನೋಡಿದ ಸ್ಥಳೀಯರು ಸುಮಿತ್ರಾ ಶವವನ್ನು ಹುಲಿ ತಿಂದಿರುವುದನ್ನು ಗಮನಿಸಿದ್ದಾರೆ. ಪಟಾಕಿ ಹೊಡೆದು, ಹುಲಿಯನ್ನು ಮುಳ್ಳಯ್ಯನ ಗಿರಿ ಕಾಡಿಗೆ ಓಡಿಸಿದ್ದಾರೆ.

tiger

ಇಂದು ಬೆಳಗ್ಗೆ 8.30ರ ಸುಮಾರಿಗೆ ಸುಮಿತ್ರಾ ಕೂಲಿ ಕೆಲಸಕ್ಕೆ ಹೊರಟ್ಟಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಕಳೆದ ನಾಲ್ಕು ದಿನಗಳಿಂದ ಪಂಡರವಳ್ಳಿ ಗ್ರಾಮದ ಸಮೀಪ ಹುಲಿ ಕಾಣಿಸಿಕೊಂಡಿತ್ತು. ಎರಡು ದಿನಗಳ ಹಿಂದೆ ಮುಳ್ಳಯ್ಯನ ಗಿರಿ ಪ್ರದೇಶದಲ್ಲಿ ಪ್ರವಾಸಿಗರ ಕಾರನ್ನು ಅರ್ಧ ಕಿ.ಮೀ ದೂರ ಅಟ್ಟಿಸಿಕೊಂಡು ಬಂದಿತ್ತು. [ಗುಂಡ್ಲುಪೇಟೆಯಲ್ಲಿ ಸೆರೆಸಿಕ್ಕಿತು ನರಭಕ್ಷಕ ವ್ಯಾಘ್ರ]

ಮಲ್ಲಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿಯೇ ಸುಮಿತ್ರಾ ಶವದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಮಧ್ಯಾಹ್ನ ಕುಟುಂಬದವರಿಗೆ ಶವ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ['ವಿಜಯ್‌' ನರಭಕ್ಷಕನಲ್ಲ]

ಈ ಹುಲಿ ಸುಮಾರು 4 ವರ್ಷದ್ದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ನಾಲ್ಕು ದಿನಗಳಿಂದ ಬೇರೆ-ಬೇರೆ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದ್ದರೂ ಅದನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಇಂದು ಅದು ಮಹಿಳೆಯನ್ನು ಕೊಂದು ಹಾಕಿದೆ.

English summary
A tiger killed a 25-year-old woman while she was going to work in Pandaravalli village of Chikkamagaluru district Karnataka. Tiger found near village form two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X