ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಬಿ ರಚನೆ : ಕೃಷ್ಣ ಕೊಟ್ಟ ಸಲಹೆ ಕೇಳ್ತಾರಾ ಸಿದ್ದು?

|
Google Oneindia Kannada News

ಮೈಸೂರು, ಮಾರ್ಚ್ 21 : ಕರ್ನಾಟಕ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿರುವುದಕ್ಕೆ ಎಸ್.ಎಂ.ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಈಗಲೂ ಕಾಲ ಮಿಂಚಿಲ್ಲ. ಅಧಿಕಾರಸ್ಥರು ಈ ನಿಟ್ಟಿನಲ್ಲಿ ನಿರ್ಧಾರ ಪರಿಶೀಲಿಸಲು ಕಾರ್ಯಪ್ರವೃತರಾಗಬೇಕು' ಎಂದು ಕೃಷ್ಣ ಸಲಹೆ ನೀಡಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಅವರು, 'ನೆಗಡಿ ಬಂತು ಎಂದು ಮೂಗಿಗೆ ಕತ್ತರಿ ಹಾಕುವುದು ಸರಿಯಲ್ಲ. ಎಸಿಬಿಯಿಂದ ಲೋಕಾಯಕ್ತ ಸ್ಥಾಪಿಸಿ ಉನ್ನತಮಟ್ಟಕ್ಕೆ ಏರಿದ್ದೆವು. ಈಗ ಪುನಃ ಎಸಿಬಿ ಸ್ಥಾಪಿಸಿ ಕೆಳಮಟ್ಟಕ್ಕೆ ಇಳಿಯುತ್ತಿದ್ದೇವೆ' ಎಂದು ಹೇಳಿದರು. [ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದ ಸರ್ಕಾರ]

sm krishna

'ಅಧಿಕಾರಶಾಹಿಯ ಮೇಲೆ ತನಿಖೆ ನಡೆಸುವುದು ಲೋಕಾಯುಕ್ತ ಸಂಸ್ಥೆಯ ಕೆಲಸವಾಗಿದೆ. ಈಗ ಎಸಿಬಿ ರಚನೆಯಿಂದಾಗಿ ಅಧಿಕಾರಶಾಹಿಯೇ ಅಧಿಕಾರಿಶಾಹಿ ಮೇಲೆ ತನಿಖೆ ನಡೆಸುತ್ತದೆ. ಇದು ನನಗೆ ವೈಯುಕ್ತಿಕವಾಗಿ ಅಶಾಂತಿ ಮೂಡಿಸಿದೆ, ಸರ್ಕಾರದ ಕ್ರಮದ ಬಗ್ಗೆ ತೀವ್ರ ಅಸಮಾಧಾನ ಇದೆ' ಎಂದು ಕೃಷ್ಣ ತಿಳಿಸಿದರು. [ಕರ್ನಾಟಕ ಲೋಕಾಯುಕ್ತರ ನೇಮಕ ಮತ್ತಷ್ಟು ವಿಳಂಬ]

'ಎಸಿಬಿ ರಚನೆ ಕುರಿತು ಪರಿಶೀಲನೆ ನಡೆಸಲು ಇನ್ನೂ ಸಮಯವಿದೆ. ಅಧಿಕಾರಸ್ಥರು ಈ ನಿಟ್ಟಿನಲ್ಲಿ ನಿರ್ಧಾರ ಪರಿಶೀಲಿಸಲು ಕಾರ್ಯಪ್ರವೃತರಾಗಬೇಕು ಎಂಬುದು ನನ್ನ ವಿನಮ್ರಪೂರ್ವಕ ಮನವಿ' ಎಂದು ಹೇಳಿದರು. [ಸಂದರ್ಶನ : ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ]

ಕಾಂಗ್ರೆಸ್ ನಾಯಕರ ವಿರೋಧ : ಕರ್ನಾಟಕ ಸರ್ಕಾರದ ಕ್ರಮಕ್ಕೆ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮತ್ತು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಎಸಿಬಿ ರಚನೆ ವಿವಾದ ಈಗಾಗಲೇ ಪಕ್ಷದ ಹೈಕಮಾಂಡ್ ತನಕ ತಲುಪಿದೆ.

ಇತ್ತ ಪ್ರತಿಪಕ್ಷ ಬಿಜೆಪಿ ಸಹ ಸರ್ಕಾರದ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸೋಮವಾರ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಲು ಅವಕಾಶ ಕೇಳುವ ಸಾಧ್ಯತೆ ಇದೆ.

ಎಸಿಬಿ ರಚನೆ ಆದೇಶ : ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau- ACB) ರಚನೆ ಮಾಡಿ ಮಾರ್ಚ್ 15ರಂದು ಆದೇಶ ಹೊರಡಿಸಿದೆ. ಎಡಿಜಿಪಿ ಈ ದಳದ ಮುಖ್ಯಸ್ಥರಾಗಿರುತ್ತಾರೆ. ಎಸಿಬಿ ರಚನೆಯನ್ನು ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಎಸಿಬಿ ರಚನೆ ಮಾಡಲಾಗುತ್ತಿದೆ ಆರೋಪಿಸಿವೆ.

English summary
Senior Congress leaders S.M. Krishna unhappy over Karnataka government decision of set up Anti-Corruption Bureau (ACB). In Mysuru on Sunday SM Krishna advised the government to rethink about decision, as there is still time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X