ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲಮಂಗಲ ಬಸ್ ಬೆಂಕಿಯಲ್ಲಿ ಗಾಯಗೊಂಡಿದ್ದ ಮಮತಾ ಸಾವು

ನಿಧನರಾಗುವ ಮುನ್ನ ತಮ್ಮ ಪರಿತ್ಯಕ್ತ ಪತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮಮತಾ. ಸೋಮವಾರ ತಡರಾತ್ರಿ ನಡೆದಿದ್ದ

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ನೆಲಮಂಗಲದಲ್ಲಿ ಇತ್ತೀಚೆಗೆ ಸಂಭವಿಸಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಕೆಂಗೇರಿಯ ನಿವಾಸಿ ಮಮತಾ ಅವರು ಶುಕ್ರವಾರ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

ಸೋಮವಾರ (ಫೆ. 20) ತಡರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಬೆಂಗಳೂರಿನ ಪೀಣ್ಯದ ಮಹಿಳೆಯೊಬ್ಬರು ಭಾಗ್ಯಮ್ಮ ಎಂಬುವರು ನಿಧನರಾಗಿದ್ದರಲ್ಲದೆ, 10 ಜನರು ಗಾಯಗೊಂಡಿದ್ದರು. ಅವರಲ್ಲಿ ಮಮತಾ ಕೂಡ ಒಬ್ಬರು. ಆದರೆ, ಅವರ ಸ್ಥಿತಿ ಗಂಭೀರವಾಗಿತ್ತು.[ನೆಲಮಂಗಲ:ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ,1 ಸಾವು,10 ಜನರಿಗೆ ಗಾಯ]

The Lady severely injured in Nelamangala Bus fire incident died

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಮತಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ಅವರು ಶುಕ್ರವಾರ ಅಸುನೀಗಿದ್ದಾರೆ.[ನೆಲಮಂಗಲ ಬಸ್ ಅಗ್ನಿ ದುರಂತಕ್ಕೆ ಪೂಜಾ ಸಾಮಗ್ರಿಯೇ ಕಾರಣ]

ಆರು ತಿಂಗಳ ಹಿಂದೆ ಪತಿಯಿಂದ ಪರಿತ್ಯಕ್ತರಾಗಿದ್ದ ಮಮತಾ ತಮ್ಮ ಮಗನೊಟ್ಟಿಗೆ ಜೀವನ ಸಾಗಿಸುತ್ತಿದ್ದರು. ಆದರೆ, ಬಸ್ ದುರಂತದಲ್ಲಾದ ಸುಟ್ಟ ಗಾಯಗಳಿಂದ ಅವರು ನಿಧನರಾಗಿದ್ದಾರೆ. ಆದರೆ, ಸಾಯುವುದಕ್ಕೂ ಮುನ್ನ ಕೆಲವೇ ನಿಮಿಷಗಳ ಹಿಂದೆ ತಮ್ಮ ಪತಿ ಸುರೇಶ್ ಅವರೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದರು.

English summary
The victim named Mamatha who had got severe injuries in recent Nelamangala Bus fire tragedy succumbed to death on Friday (Feb. 24). She was a resident of Kengeri in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X