ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಗಗನಕ್ಕೇರಿದ ಮೀನಿನ ಬೆಲೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಮಾರ್ಚ್ 07 : ಕರಾವಳಿ ಭಾಗದಲ್ಲಿ ಮತ್ತೆ ಮತ್ಸ್ಯಕ್ಷಾಮ ಎದುರಾಗಿದೆ. ಮೀನಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ತೆತ್ತು ಬಂಗುಡೆ, ಬೂತಾಯಿ ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಂಜಲ್, ಪಾಂಪ್ಲೆಟ್, ಸೀಗಡಿ ಮೀನುಗಳ ಬೆಲೆ ಗಗನಕ್ಕೇರಿದೆ.

ಪ್ರತಿವರ್ಷ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪರ್ಸಿನ್, ನಾಡದೋಣಿ ಹಾಗೂ ಆಳ ಸಮುದ್ರ ಮೀನುಗಾರಿಕೆ ಲಾಭದಾಯಕ. ಈ ಮೂರು ತಿಂಗಳು ಮೀನುಗಾರರ ಆದಾಯವು ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಬಗೆ-ಬಗೆಯ ಮೀನುಗಳು ಲಭ್ಯವಾಗುತ್ತವೆ. [ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!]

fish

ಈ ವರ್ಷದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮೀನುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಜನವರಿ ಮತ್ತು ಫೆಬ್ರವರಿ ಮತ್ತು ಮಾರ್ಚ್ ಮೊದಲ ವಾರದಲ್ಲಿ ಮೀನುಗಾರಿಕೆ ಸಂಪೂರ್ಣ ಕುಸಿದಿದೆ. ಇದರಿಂದ ಮೀನುಗಾರರು ಮತ್ತು ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. [ಬಣ್ಣನ ಬಣ್ಣದ ಮೀನು, ಬಗೆ ಬಗೆಯ ಖಾದ್ಯ!]

ಇಂಧನದ ಹೊರೆ ಹೆಚ್ಚು : ಪರ್ಸಿನ್, ಆಳದೋಣಿ ಮತ್ತು ನಾಡದೋಣಿ ಮೀನುಗಾರಿಕೆ ಮಾಡುತ್ತಿರುವ ಕುಟುಂಬದ ಸದಸ್ಯರಿಗೆ ಇಂಧನದ ಹೊರೆ ಬಿದ್ದಿದೆ. ದೋಣಿ ಮಾಲೀಕರಿಗೆ ಡೀಸೆಲ್, ಸೀಮೆ ಎಣ್ಣೆ ಮತ್ತು ಪೆಟ್ರೋಲ್ ಹೊರೆಯಾಗುತ್ತಿದೆ. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]

ನಾಡದೋಣಿ ಮೀನುಗಾರರು ದಿನಕ್ಕೆ 30-40 ಸಾವಿರ ರೂಪಾಯಿಗಳ ಸೀಮೆ ಎಣ್ಣೆ ಮತ್ತು ಪೆಟ್ರೋಲ್ ವ್ಯಯಿಸಿದರೂ, 10 ಸಾವಿರ ರೂ. ಸಂಪಾದನೆ ಮಾಡಲು ಆಗುತ್ತಿಲ್ಲ. ಪರ್ಸಿನ್ ಬೋಟ್‌ಗಳಿಗೆ ದಿನಕ್ಕೆ 50-70 ಸಾವಿರ ರೂ. ಗಳ ಡೀಸೆಲ್ ಅಗತ್ಯವಿದೆ. ನಷ್ಟ ನಿರ್ವಹಣೆ ಸಾಧ್ಯವಾಗದೆ ಕಳೆದ ಎರಡು ತಿಂಗಳಿಂದ ಮಲ್ಪೆ ಹಾಗೂ ಗಂಗೊಳ್ಳಿ ಬಂದರಿನಲ್ಲಿ ಪರ್ಸಿನ್ ಬೋಟ್‌ಗಳು ಲಂಗರು ಹಾಕಿವೆ.

ಆಳ ದೋಣಿ ಮೀನುಗಾರಿಕೆಗೆ 10 ದಿನಕ್ಕೆ 6000 ಲೀಟರ್ ಡೀಸೆಲ್ ತುಂಬಬೇಕು. ಕನಿಷ್ಟ 3 ರಿಂದ 3.50 ಲಕ್ಷ ರೂ. ಇದಕ್ಕೆ ಬೇಕಾಗುತ್ತದೆ. ಬಲೆ, ಇಂಜಿನ್, ಮೀನುಗಾರರ ಖರ್ಚು ಸೇರಿ 1 ಲಕ್ಷ ಬೇಕಾಗುತ್ತದೆ. 5 ಲಕ್ಷ ರೂ. ಮೀನು ಹಿಡಿದರೂ ಲಾಭ ಇರುವುದಿಲ್ಲ. ಆದ್ದರಿಂದ, ಆಳದೋಣಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಮೀನಿನ ಪ್ರಮಾಣ ಕ್ಷೀಣಿಸುತ್ತಿದೆ : ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳನಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುತ್ತವೆ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಆಳದೋಣಿ ಮೀನುಗಾರಿಕೆಯಿಂದ ಅತಿ ಸಣ್ಣ ರಂಧ್ರದ ಬಲೆಗಳಿಂದ ಮೀನಿನ ಮರಿಗಳನ್ನು ಹಿಡಿಯಲಾಗುತ್ತದೆ.

ಮೂರು ತಿಂಗಳಲ್ಲಿ ಟನ್‌ ಗಟ್ಟಲೆ ಮೀನು ಬಂದರಿಗೆ ಬರುತ್ತದೆ. ಮಾರುಕಟ್ಟೆಯಲ್ಲೂ ಒಳ್ಳೆಯ ಬೆಲೆ ಇರುತ್ತದೆ. ಮೀನಿನ ಸಂತತಿ ನಾಶವಾಗುತ್ತಿದೆ ಎಂಬ ಅರಿವಿದ್ದರೂ ಮೀನುಗಾರಿಕೆ ನಡೆಯುತ್ತಲೇ ಇರುತ್ತದೆ. ಈ ಕುರಿತು ಸರ್ಕಾರದ ಯಾವ ನೀತಿಯು ಇಲ್ಲ.

ಗಗನಕ್ಕೇರಿದ ಬೆಲೆ : ಮಲ್ಪೆ , ಗಂಗೊಳ್ಳಿ ಸೇರಿದಂತೆ ಉಡುಪಿ ಜಿಲ್ಲಾ ವ್ಯಾಪ್ತಿಯ ಕಿರು ಬಂದರುಗಳಲ್ಲಿ 1 ಕೆಜಿ ಅಂಜಲ್ ಮೀನು 350-400 ರೂ., ಬಂಗುಡೆ 100-150 ರೂ., ಅಡೂಮೀನು 130-140 ರೂ., ಸಿಗಡಿ (ವೈಟ್) 250 ರೂ., (ಬ್ರೌನ್)-125 ರೂ. ದರವಿದೆ.

ರಬ್ಬಯ್ಯ, ಬೂತಾಯಿ ಇತ್ಯಾದಿ ಚಿಲ್ಲರೆ ವ್ಯಾಪಾರದ ಮೀನನ್ನು ಬುಟ್ಟಿಗೆ 1000, 1200 ರೂ. ಗಳಲ್ಲಿ ಮಾರಾಟ ಮಾಡಯತ್ತಿದ್ದಾರೆ. ಮಂಗಳೂರಿನಲ್ಲಿ ಕಳೆದ ಆಗಸ್ಟ್‌ನಲ್ಲಿ ಕೆಜಿಗೆ 280 ರೂ. ಗೆ ದೊರೆಯುತ್ತಿದ್ದ ಅಂಜಲ್ ಮೀನು ಬೆಲೆ ಈಗ 550 ರೂ. ಗೆ ತಲುಪಿದೆ. ಆರು ತಿಂಗಳ ಹಿಂದೆ ಕೆಜಿಗೆ 120 ರೂ.ಗೆ ದೊರೆಯುತ್ತಿದ್ದ ದೊಡ್ಡ ಗಾತ್ರದ ಬಂಗುಡೆ ಬೆಲೆ ಇಂದು 200 ರೂ.

English summary
Prices of some of the popular fish in demand have gone up along with summer temperature in Udupi market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X