ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಅಕಾಲಿಕ ಮಳೆ, ಯಾಕೆ ಹೀಗೆ?

|
Google Oneindia Kannada News

ಬೆಂಗಳೂರು, ಮಾ. 2: ತಾಪಮಾನ ಏರಿಕೆ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಭಾನುವಾರ ಮಳೆ ಬಿದ್ದಿದೆ. ಹುಬ್ಬಳ್ಳಿ, ಶಿರಸಿ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವೆಡೆ ಮಳೆಯಾಗಿದೆ.

ಬೇಸಿಗೆಗೂ ಮುನ್ನವೇ ಬಿಸಿಲು ತನ್ನ ಆರ್ಭಟ ತೋರಿಸಲು ಆರಂಭಿಸಿದೆ. ವಾತಾವರಣದಲ್ಲಿನ ಉಷ್ಣಾಂಶ ಏಕಾಏಕಿ ಏರಿಕೆಯಾಗಿದ್ದು 32 ಡಿಗ್ರಿ ಸೆಲ್ಸಿಯಸ್ ತಲುಪುದೆ. ಇದೆಲ್ಲದರ ಪರಿಣಾಮ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.[ರಾಜ್ಯದ 'ಮಹಾ' ಮಳೆಗೆ ಪಶ್ಚಿಮ ಘಟ್ಟ ಕಾರಣ]

rain

ಇದೇ ರೀತಿಯ ಹವಾಮಾನ ಮುಂದುವರಿದರೆ ಬೆಂಗಳೂರು ಸೇರಿದಂತೆ ವಿವಿಧೆಡೆ ಇನ್ನೂ 4 ದಿನ ಮಳೆಯಾಗಲಿದ. ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಮಳೆ ಬಿದ್ದಿದೆ. ಎಂ.ಜಿ.ರಸ್ತೆ, ಗಿರಿನಗರ, ಶಿವಾಜಿನಗರ, ವಿಧಾನಸೌಧ, ಹನುಮಂತ ನಗರ ಸೇರಿದಂತೆ ಹಲವೆಡೆ ಭಾನುವಾರ ಸಂಜೆ ಧಾರಾಕಾರ ಮಳೆ ಸುರಿಯಿತು.

ಕಟಾವು ಮಾಡಿ ಒಣಗಲು ಹಾಕಿದ್ದ ಬಿಳಿಜೋಳ, ಕಡಲೆ, ಗೋವಿನ ಜೋಳ ಹಾಗೂ ಗೋಧಿ ಬೆಳೆಗೆ ಹಾನಿಯಾಗಿದೆ. ಸಿದ್ದಾಪುರ, ಇಟಗಿ, ಶಿರಸಿ, ಹಳಿಯಾಳ ಸೇರಿದಂತೆ ಭಾಗದಲ್ಲಿ ರೈತರ ಕಬ್ಬು ಮತ್ತು ಭತ್ತ ಕಟಾವಿಗೆ ಮಳೆ ಅಡ್ಡಿ ಮಾಡಿದೆ.[ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ]

ಉತ್ತರ ಕರ್ನಾಟಕ ಭಾಗದಲ್ಲಿ ಇದು ಹಿಂಗಾರು ಹಂಗಾಮಿನ ಕೊಯ್ಲು ಸಮಯ. ಕಡಲೆ ಮತ್ತು ಗೋದಿ, ಜೋಳ, ಗೋವಿನ ಜೋಳಗಳನ್ನು ಕೊಯ್ಲು ಮಾಡಿ ಹೊಲದಲ್ಲಿ ಒಣಗಲು ಬಿಡಲಾಗಿದೆ. ಶನಿವಾರವೇ ಮೋಡ ಕವಿದ ವಾತಾವರಣ ಕಂಡುಬಂದಿದ್ದರೂ ರೈತರು ಮಳೆ ಬರಲಿಕ್ಕಿಲ್ಲ ಎನ್ನುವ ಭಾವನೆಯಲ್ಲಿದ್ದರು. ಹೀಗಾಗಿ ಕೊಯ್ಲು ಮಾಡಿದ ಫಸಲನ್ನು ಹೊಲದಲ್ಲಿಯೇ ಬಿಡಲಾಗಿತ್ತು. ಭಾನುವಾರ ಬೆಳಗಿನ ಜಾವ ಇದ್ದಕ್ಕಿದ್ದಂತೆ ಶುರುವಾದ ಮಳೆ ಹಾನಿ ಮಾಡಿತು.

ಮಾವು ಮಿಡಿ ಕಚ್ಚಲ್ಲ
ಮಾವು ಹೂವು ಬಿಡುತ್ತಿದ್ದು ಉದುರುವ ಆತಂಕ ಎದುರಾಗಿದೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಲವೆಡೆ ತೆರಳಿ ಬೆಳೆಗಳ ಸಮೀಕ್ಷೆ ನಡೆಸಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಗಳಲ್ಲೂ ತುಂತುರು ಮಳೆಯಾಗಿದ್ದು ಇನ್ನೆರಡು ದಿನ ಮುಂದುವರಿದರೆ ಮಾವು ಹುಳಿಯಾಗುವುದರಲ್ಲಿ ಅನುಮಾನವಿಲ್ಲ.

ಉಪ್ಪು ಉತ್ಪಾದನೆಗೂ ಬ್ರೇಕ್
ಕರವಾಳಿ ಭಾಗದಲ್ಲಿ ಮಳೆಯಾಗಿರುವುದು ಉಪ್ಪು ತಯಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗದ್ದೆಗಳಲ್ಲಿ ಉಪ್ಪು ತಯಾರಿಕೆಗೆ ಮಾಡಿದ್ದ ಆವರಣಗಳಲ್ಲಿ ನೀರು ತುಂಬಿಕೊಡ್ಡಿದ್ದು ಮತ್ತೆ ಮೊದಲಿನ ಸ್ಥಿತಿಗೆ ಬರಲು ಅನೇಕ ದಿನ ಹಿಡಿಯುವುದು. ಅಲ್ಲದೆ ಗೋಡಂಬಿ ಬೆಳೆಗಾರರು ಆತಂಕ ಎದುರಿಸುವಂತಾಗಿದೆ.

English summary
The unseasonal rain and thundershowers witnessed in several parts of the Karnataka, on Sunday. Bengaluru, Hubli, Sirsi and North Karnataka parts received rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X