ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿಯ ಉದ್ಯೋಗ ಖಾತರಿ ಯೋಜನೆ ಯಶಸ್ಸಿನ ಕಥೆ

|
Google Oneindia Kannada News

ಕಲಬುರಗಿ, ನವೆಂಬರ್ 21 : ಕಲಬುರಗಿ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ ಇಲ್ಲಿಯ ತನಕ 4.78 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. ಕಾರ್ಮಿಕರಿಗೆ ಸುಮಾರು 80 ಕೋಟಿ ರೂ. ಹಣವನ್ನು ಪಾವತಿ ಮಾಡಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ 60:40 ಅನುಪಾತವಿದೆ. ಜಿಲ್ಲೆಯ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ 85:15 ಅನುಪಾತ ರೂಪಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಾದ್ಯಂತ 7 ರಿಂದ 8 ಸಾವಿರ ಕೂಲಿ ಕಾರ್ಮಿಕರು ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. [ಕಲ್ಲು ತುಂಬಿಸುವವ ಮ್ಯಾನೇಜರ್ ಆದ ಹಿಂದಿನ ಯಶಸ್ಸಿನ ಕಥೆ]

kalaburagi

ಎಷ್ಟು ದಿನ ಉದ್ಯೋಗ? : ಉದ್ಯೋಗ ಖಾತ್ರಿ ಯೋಜನೆಯ ಅನ್ವಯ ಸಾಮಾನ್ಯ ಪ್ರದೇಶದಲ್ಲಿ 100 ದಿನಗಳ ಉದ್ಯೋಗ ಕಲ್ಪಿಸಲು ಅವಕಾಶವಿದೆ. ಬರಪೀಡಿತ ಪ್ರದೇಶದಲ್ಲಿ 150 ದಿನ ಉದ್ಯೋಗ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 100 ದಿನ ಉದ್ಯೋಗ ಪೂರ್ಣಗೊಳಿಸಿದವರಿಗೆ 150 ದಿನಗಳ ಉದ್ಯೋಗ ನೀಡಲಾಗುತ್ತಿದೆ. [ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]

ಜಿಲ್ಲೆಯಾದ್ಯಂತ ಬರಪರಿಸ್ಥಿತಿ ಇರುವುದರಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಬುಧವಾರ ಮತ್ತು ಶನಿವಾರಗಳಂದು ಉದ್ಯೋಗ ಖಾತರಿ ಕಾಮಗಾರಿ ಪ್ರಾರಂಭಿಸಿ ಕಾರ್ಮಿಕರಿಗೆ 10 ದಿನಗಳಲ್ಲಿ ಒಂದು ವಾರದ ವೇತನ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.

ಯಾವ-ಯಾವ ಕಾಮಗಾರಿಗಳು : ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಉಪಯೋಗವಾಗುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಬದು, ಕೃಷಿ ಹೊಂಡ ಮುಂತಾದ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದಲ್ಲದೇ ಕೆರೆ ನಿರ್ಮಾಣ, ಕೆರೆ ಹೊಳೆತ್ತುವ ಕಾರ್ಯ, ಅರಣ್ಯೀಕರಣ ಮತ್ತು ಅರಣ್ಯ ಸಂರಕ್ಷಣೆಯಂತಹ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

jobs

ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಾಗ ಜಮೀನಿನ ರೈತರೇ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಮುಂದೆ ಬಂದರೆ ಅವರಿಗೂ ಸಹ ಜಾಬ್ ಕಾರ್ಡ್ ನೀಡಲಾಗುತ್ತದೆ. ಅಫಜಲಪುರ ತಾಲೂಕಿನ ಮಾಶಾಳ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸಿದ 10 ಜನ ಕೂಲಿ ಕಾರ್ಮಿಕರಿಗೆ ಹೈದರಾಬಾದಿನಲ್ಲಿ ಇಟ್ಟಿಗೆ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ. ಇದರಿಂದ ಅವರ ಆದಾಯ ಹೆಚ್ಚಿದಂತಾಗಿದೆ.

ಉದ್ಯೋಗ ಖಾತರಿ ಕಾಮಗಾರಿ ನಡೆಯುವ ಸ್ಥಳದಲ್ಲಿ 30 ಜನ ಕೂಲಿ ಕಾರ್ಮಿಕರಿಗೊಬ್ಬರಂತೆ ಕಾಯಕ ಬಂಧು ಎಂದು ನೇಮಿಸಲಾಗಿದೆ. ಇವರು ಪ್ರತಿದಿನ ಕಾಮಗಾರಿಯ ಅಳತೆ ಮಾಡಿ ಕಾಮಗಾರಿಯನ್ನು ನೀಡುವುದು ಹಾಗೂ ಕಾಮಗಾರಿ ಮುಗಿದ ನಂತರ ಕಾಮಗಾರಿಯ ಅಳತೆಯನ್ನು ಪಡೆಯತ್ತಾರೆ.

English summary
4 lakhs of jobs created under Mahatma Gandhi National Rural Employment Guarantee Scheme(MGNREGA) at Kalaburagi district, Karnataka. Here is success story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X