ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿಕರಿಗೆ ನೆಮ್ಮದಿ ತಂದ 'ಕೃಷಿ ಭಾಗ್ಯ' ಯೋಜನೆ!

|
Google Oneindia Kannada News

ಅನ್ನದಾತನ ಜಮೀನಿಗೆ ನೀರೊದಗಿಸುವ ಉದ್ದೇಶದಿಂದ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಮುಂಗಾರು ಮಳೆಯನ್ನೇ ನಂಬಿದ ರೈತ ಬರಡು ನೆಲವನ್ನು ನೋಡುತ್ತಾ ಕುಳಿತುಕೊಳ್ಳಬೇಕಾದ ದುಸ್ಥಿತಿ ಇತ್ತು. ಯೋಜನೆಯಿಂದಾಗಿ ರೈತರ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ನೀರು ಶೇಖರಿಸಿ ಜಮೀನಿನಲ್ಲಿ ಸರಾಗವಾಗಿ ಬೆಳೆ ತೆಗೆಯಲು ಸಹಕಾರಿಯಾಗಿದೆ.

* ಬಾಗಲಕೋಟೆ ಜಿಲ್ಲೆಯ ಶಿರಸೂರು ಗ್ರಾಮದ ರೈತ ಬಸಲಿಂಗಪ್ಪ ಗುಗ್ಗಿ ಅವರು ಯೋಜನೆ ಬಗ್ಗೆ ಮಾತನಾಡುತ್ತಾ, 'ನಮ್ಮ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲ. ಸಂಕಷ್ಟದಲ್ಲಿದ್ದೆವು. ಕೃಷಿ ಹೊಂಡದಿಂದಾಗಿ ನಮ್ಮ ಜಮೀನು ಹಸನಾಯಿತು. ಉತ್ತಮ ಬೆಳೆ ತೆಗೆದು ನೆಮ್ಮದಿಯ ಬದುಕಿಗೆ ದಾರಿಯಾಯಿತು' ಎಂದು ಸಂತಸ ಹಂಚಿಕೊಂಡರು. [ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]

Success story of Krushi Bhagya scheme

* ಯಲಬುರ್ಗಾದ ತಹಕಲ್ ಗ್ರಾಮದ ಸಿದ್ದನಗೌಡ ತೋಟಯ್ಯ ಅವರು, ' ಕೃಷಿ ಭಾಗ್ಯದಿಂದ ನಮಗೆ ಅನುಕೂಲವಾಗಿದೆ. ಎಲ್ಲ ಭಾಗ್ಯಗಳಿಗಿಂತ ಇದು ಹೆಚ್ಚಿನ ಭಾಗ್ಯ ತಂದು ಕೊಟ್ಟಿದೆ. ಸರ್ಕಾರವು ನಮ್ಮ ಭಾಗದಲ್ಲಿ ಇನ್ನೂ 1 ಸಾವಿರ ಕೃಷಿ ಹೊಂಡ ನಮ್ಮಲ್ಲಿ ತೆಗೆಯುವ ಯೋಜನೆ ರೂಪಿಸಿದೆ. ಈ ಯೋಜನೆಯಿಂದ ಭೂಮಿ ತಂಪಾಗುವುದಲ್ಲದೆ ಅಂತರ್ಜಲವು ಅಭಿವೃದ್ಧಿಯಾಗಲಿದೆ' ಎಂದರು.

English summary
Success story of Krushi Bhagya scheme. Chief Minister Siddaramaiah interact with farmers who beneficiaries of scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X