ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು ಸಿಕ್ಕರೂ ಶ್ಯೂರಿಟಿ ಸಿಗಲಿಲ್ಲ, ಜಯಚಂದ್ರ ಅಂದರ್

ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಸಿ ಜಯಚಂದ್ರ ಅವರಿಗೆ ನಗರದ ಸಿಟಿ ಸಿವಿಲ್ ಕೋರ್ಟಿನಿಂದ ಗುರುವಾರ ಮಧ್ಯಂತರ ಜಾಮೀನು ಮಂಜೂರಾಗಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎಸ್.ಸಿ ಜಯಚಂದ್ರ ಅವರಿಗೆ ನಗರದ ಸಿಟಿ ಸಿವಿಲ್ ಕೋರ್ಟಿನಿಂದ ಗುರುವಾರ ಮಧ್ಯಂತರ ಜಾಮೀನು ಮಂಜೂರಾಗಾಗಿದೆ.

ಆದರೆ, ಜಾಮೀನು ಸಿಕ್ಕರೂ 5 ಲಕ್ಷ ರು ಬೆಲೆಯ ಶ್ಯೂರಿಟಿ ಮೊತ್ತ ಪಾವತಿಸಲು ವಿಳಂಬವಾದ ಕಾರಣ, ಜಯಚಂದ್ರರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಯಿತು. ನಾಳೆ ವಿಚಾರಣೆ ನಡೆಯಲಿದ್ದು, ಆರೋಪಿಯನ್ನು ತಮ್ಮ ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಎಸಿಬಿ ಕಾದಿದ್ದಾರೆ.

ಇಡಿ, ಸಿಬಿಐಯಿಂದ ವಿಚಾರಣೆಗೊಳಲ್ಪಟ್ಟಿದ್ದ ಜಯಚಂದ್ರ ಅವರ ಮನೆ ಹಾಗೂ ಕಚೇರಿಯಲ್ಲಿ ಅಪಾರ ಪ್ರಮಾಣದ ನಗದು ಹಾಗೂ ಚಿನ್ನದ ಗಟ್ಟಿ ಪತ್ತೆಯಾಗಿತ್ತು.

State Highway Development Corporation SC Jayachandra gets interim bail

152ಕೋಟಿ ರು ಗೂ ಅಧಿಕ ಅಕ್ರಮ ಆಸ್ತಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಚಂದ್ರ ಸೇರಿದಂತೆ ಅನೇಕ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖೆಗೊಳಪಡಿಸಿತ್ತು. ಜಯಚಂದ್ರ ಅವರಿಗೆ ಸಾಕ್ಷಿನಾಶಪಡಿಸದಂತೆ ಸೂಚಿಸಿ, ಶ್ಯೂರಿಟಿ ಪಡೆದು ಷರತ್ತುಬದ್ಧ ಜಾಮೀನು ನೀಡಲಾಗಿದೆ.
English summary
S.C. Jayachandra, Chief Project Officer, State Highway Development Project (SHDP) gets interim bail in Illegal asset case. A city civil court in Bengaluru today granted conditional bail to Jayachandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X