ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?

|
Google Oneindia Kannada News

ಬೆಂಗಳೂರು, ಅ. 1 : ಅಕ್ಟೋಬರ್ ಒಂದು ವಿಶ್ವಹಿರಿಯ ನಾಗರಿಕರ ದಿನಾಚರಣೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ಸೌಲಭ್ಯಗಳ ಪಟ್ಟಿಯನ್ನು ನಿಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ.

ರಾಜ್ಯದ ಜನಸಂಖ್ಯೆಯ ಶೇ. 7 ರಷ್ಟಿರುವ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳು
* 60 ವರ್ಷ ಮೇಲ್ಪಟ್ಟವರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಗುರುತಿನ ಚೀಟಿ ವಿತರಣೆ.

* 60 ರಿಂದ 64 ವರ್ಷದೊಳಗಿನ ಹಿರಿಯರಿಗೆ ಎರಡು ನೂರು ರೂಪಾಯಿ, 65 ರಿಂದ 79 ವರ್ಷದೊಳಗಿನ ಹಿರಿಯರಿಗೆ 500 ರೂ. ಮತ್ತು 80 ವರ್ಷ ಮೇಲಿನವರಿಗೆ 750 ರೂ. ವೃದ್ಧಾಪ್ಯ ವೇತನ.[ಎಸ್‌.ಎನ್‌.ಸುಬ್ಬರಾವ್‌ ಗೆ ಗಾಂಧಿ ಸೇವಾ ಪುರಸ್ಕಾರ]

* ರಾಜ್ಯದ ಎಲ್ಲಾ ಸರ್ಕಾರಿ ಬಸ್‌ ಗಳಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಪ್ರಯಾಣ ದರದಲ್ಲಿ ಶೇ. 25 ರಷ್ಟು ರಿಯಾಯಿತಿ.

vidhana sovda

* ಹಿರಿಯ ನಾಗರಿಕರ ಸಮಸ್ಯೆಗೆ ಸ್ಪಂದಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಹಾಯವಾಣಿ ಕೇಂದ್ರ.

* ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೃದ್ಧಾಶ್ರಮ ನಡೆಸಲಾಗುತ್ತಿದ್ದು, ಉಡುಪಿ ಮತ್ತು ಯಾದಗಿರಿಯಲ್ಲಿ ಆರಂಭಮಾಡಬೇಕಿದ್ದು ಈ ಯೊಜನೆಗೆ 1. 85 ಕೋಟಿ ರೂ ವೆಚ್ಚ.

* ಧಾರವಾಡ, ಬೆಂಗಳೂರು, ಬೆಳಗಾವಿ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ನಾಲ್ಕು ಹಗಲು ಯೋಗಕ್ಷೇಮ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಯನ್ನು ಇತರೆ ಹತ್ತು ಜಿಲ್ಲೆಗಳಿಗೆ ವಿಸ್ತರಿಸಲು ಯೋಜನೆ.

* ಕೇಂದ್ರ ಸರ್ಕಾರದ ವಿಪಿಒಪಿ ಯೋಜನೆಯಡಿ ಬೆಳಗಾವಿ ಮತ್ತು ಕೋಲಾರ ಜಿಲ್ಲೆಯಲ್ಲಿ ಸಂಚಾರಿ ವೈದ್ಯಕೀಯ ಘಟಕ.

* ಹಿರಿಯ ನಾಗರಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ಪ್ರಶಸ್ತಿ ಮೊತ್ತವನ್ನು ಹತ್ತು ಸಾವಿರ ರೂ. ನಿಂದ ಒಂದು ಲಕ್ಷ ರೂ.ಗೆ ಏರಿಕೆ.

* ಹಿರಿಯ ನಾಗರಿಕರ ಕುಂದು, ಕೊರತೆ ಆಲಿಸುವ ಸಹಾಯವಾಣಿ ಈಗಾಗಲೇ 14 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶೀಘ್ರವೇ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ಉಡುಪಿ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಯಾದಗಿರಿ, ಹಾಸನ ಜಿಲ್ಲೆಗಳಿಗೂ ವಿಸ್ತರಿಸಲು ಯೋಜನೆ.

* ವೃದ್ಧಾಶ್ರಮಗಳ ವಾರ್ಷಿಕ ಅನುದಾನ 1.96 ಲಕ್ಷ ರೂ. ದಿಂದ 8 ಲಕ್ಷ ರೂ.ಗೆ ಏರಿಕೆ.

* ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆ 1090.

* ಹಿರಿಯ ನಾಗರಿಕರ ವಿವಿಧ ಯೋಜನೆಗಳ ಕುರಿತು ಅರುವು ಮೂಡಿಸಲು ಪ್ರಚಾರಕ್ಕೆ 25 ಲಕ್ಷ ರೂ. ಮೀಸಲು

* ಹೆಚ್ಚಿನ ಮಾಹಿತಿಗೆ www.welfareofdisabled.kar.nic.in ಗೂ ಭೇಟಿ ನೀಡಬಹುದು.

English summary
Karnataka state government providing number of facilities to senior citizens. Identity card, Mobile medicare service, Bus fare subsidy, like that. Take a brief look of these facilities regarding senior citizens day celabaration on October 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X