ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲೇ ಪ್ರಥಮ, ಮಠಾಧೀಶರಿಗಾಗಿ ವಿಶ್ರಾಂತಿ ಗೃಹ

By Mahesh
|
Google Oneindia Kannada News

ಬೆಂಗಳೂರು, ನ.25: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಮಠಾಧೀಶರಿಗೆಂದೇ ವಿಶೇಷ ವಿಶ್ರಾಂತಿ ಗೃಹ ಸಿದ್ಧವಾಗಿದೆ.ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ನಿರ್ಮಾಣವಾಗಿರುವ ಈ ವಿಶ್ರಾಂತಿ ಗೃಹಗಳು ವೀರಶೈವ, ಲಿಂಗಾಯತ ಮಠಾಧೀಶರ ಅನುಕೂಲಕ್ಕಾಗಿ ಸಜ್ಜಾಗಿವೆ.

ಬೆಂಗಳೂರಿನಿಂದ ನಾಡಿನ ವಿವಿಧೆಡೆ ಮಠಾಧೀಶರು ಆಗಾಗ ಪ್ರವಾಸ ಕೈಗೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು. ವಿಶ್ರಾಂತಿ ಗೃಹಗಳನ್ನು ಅವರ ಆಗತ್ಯಕ್ಕೆ ವಿನ್ಯಾಸಗೊಳಿಸಲಾಗಿದ್ದು, ಸ್ವಾಮೀಜಿಗಳ ವ್ರತ ನೇಮ ನಿಷ್ಠೆ, ಪೂಜಾ ಕೈಂಕರ್ಯಗೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ವಿಶ್ರಾಂತಿಗೃಹದಲ್ಲಿ ಸಿಗಲಿರುವ ವ್ಯವಸ್ಥೆಗಳು:
* ವಿಶೇಷ ಪೂಜಾ ಕೊಠಡಿ
* ಸಂಪೂರ್ಣ ಹವಾ ನಿಯಂತ್ರಿತ
* ಪ್ರಸಾದ ವ್ಯವಸ್ಥೆ
* ಗ್ರಂಥಾಲಯ ವ್ಯವಸ್ಥೆ
* ಲ್ಯಾಪ್ ಟಾಪ್ ಸಹಿತ ಇಂಟರ್ನೆಟ್ ಸೌಲಭ್ಯ
* ಸುರಕ್ಷಿತ ಲಾಕರ್ ವ್ಯವಸ್ಥೆ
* ಲಾಂಡ್ರಿ ಸೇವೆ
* ನಿರಂತರ ವಿದ್ಯುತ್ ಪೂರೈಕೆ

ಇದರ ಜೊತೆಗೆ ಸ್ವಾಮೀಜಿ ಹಾಗೂ ಅವರ ಜೊತೆ ತಂಗಲಿರುವ ವ್ಯಕ್ತಿಗಳಿಗೆ ರೈಲು,ವಿಮಾನ ಹಗೂ ಬಸ್ ನಿಲ್ದಾಣಗಳಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಎಲ್ಲಾ ಸೇವೆಗಳನ್ನು ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ ಎಂದು ವೇದಿಕೆಯ ಮುಖ್ಯಸ್ಥ ಪ್ರಶಾಂತ್ ಕಲ್ಲೂರ ಅವರು ಒನ್ ಇಂಡಿಯಾಗೆ ತಿಳಿಸಿದ್ದಾರೆ.

ನಾಡಿನ ಪ್ರಮುಖ ವೀರಶೈವ ಮುಖಂಡರು, ರಾಜಕಾರಣಿಗಳು ಆದ ಬಿ.ಎಸ್ ಯಡಿಯೂರಪ್ಪ, ವಿಜಯ ಸಂಕೇಶ್ವರ್, ಅಶೋಕ್ ಖೇಣಿ, ಪ್ರಭಾಕರ್ ಕೋರೆ, ಜಗದೀಶ್ ಶೆಟ್ಟರ್, ಜಿ.ಎಂ. ಸಿದ್ದೇಶ್, ಯು ಎಸ್ ಶೇಖರ್ ಇವರ ಸಾಧನೆಯನ್ನು ಸ್ಮರಿಸಿ ಇವರುಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ "ಬಸವಜ್ಯೋತಿ" ವಿದ್ಯಾರ್ಥಿವೇತನ ನೀಡುತ್ತಿದೆ ಎಂದು ಪ್ರಶಾಂತ್ ಕಲ್ಲೂರ್ ಹೇಳಿದ್ದಾರೆ. ಸ್ವಾಮೀಜಿಗಳು ತಂಗಲು ಮಾಡಲಾಗಿರುವ ಈ ವಿನೂತನ ವಿಶ್ರಾಂತಿ ಗೃಹಗಳ ಮೊದಲ ಲುಕ್ ಚಿತ್ರಗಳು ಇಲ್ಲಿವೆ ನೋಡಿ

ಶರಣ ಪ್ರಶಾಂತ್ ಕಲ್ಲೂರ್, ರಾಜ್ಯ ಅಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ (ರಿ.) 92424 44444 / 080 6455 5554

English summary
Veerashaiva Lingayat Yuva Vedike today announced that a special rest house will be made available to all the Veerashaiva Seers across the State. The rest house will be fully equipped and designed according to the need of Seers said Vedike president Prashanth Kallur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X