ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿ ಹುಡುಕಿದರೂ ಸಿಗದ ಅನುಪಮಾ, ಹುಡುಕಾಟಕ್ಕೆ ತಂಡ ರಚನೆ

|
Google Oneindia Kannada News

ಬೆಂಗಳೂರು, ಜೂನ್ 08 : ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಅವರನ್ನು ಹುಡುಕಲು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಅನುಪಮಾ ಅವರ ಮನವೊಲಿಸಲು ಗೃಹ ಇಲಾಖೆ ಮುಂದಾಗಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ.

ಜೂನ್ 4ರ ಶನಿವಾರ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದಾರೆ. ನಂತರ ಅವರು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಯಾವ ಮಾಧ್ಯಮಗಳ ಜೊತೆಯೂ ಮಾತನಾಡಿಲ್ಲ. ಹಿರಿಯ ಅಧಿಕಾರಿಗಳ ಸಂಪರ್ಕಕ್ಕೂ ಸಿಕ್ಕಿಲ್ಲ. ಆದರೆ, ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ['ಕೊಲೆ ಬೆದರಿಕೆ ಹಾಕ್ತೀರಾ? ದೆವ್ವವಾಗಿ ಬಂದು ಕಾಡ್ತೀನಿ']

anupama shenoy

ರಾಜೀನಾಮೆ ಅಂಗೀಕಾರವಾಗಿಲ್ಲ : ಅನುಪಮಾ ಅವರ ರಾಜೀನಾಮೆಯನ್ನು ಅಂಗೀಕರಿಸ ಬೇಡಿ ಅವರ ಮನವೊಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಜಿಪಿ ಓಂ ಪ್ರಕಾಶ್ ಅವರಿಗೆ ಸೂಚಿಸಿದ್ದಾರೆ. ಡಿಜಿಪಿ ಓಂಪ್ರಕಾಶ್ ಅವರು ಬಳ್ಳಾರಿ ಎಸ್ಪಿ ಆರ್‌.ಚೇತನ್ ಅವರಿಗೆ ಈ ಕುರಿತು ನಿರ್ದೇಶನ ನೀಡಿದ್ದಾರೆ. [ಪರಮೇಶಿಪ್ರೇಮ ಪ್ರಸಂಗ... ಸಿಡಿ ಬೇಕೆ, ಆಡಿಯೋ ಬೇಕೆ?]

ಡಿಜಿಪಿ ಅವರ ನಿರ್ದೇಶನದಂತೆ ಆರ್.ಚೇತನ್ ಅವರು ಅನುಪಮಾ ಅವರನ್ನು ಹುಡುಕಲು ಪೊಲೀಸ್ ತಂಡಗಳನ್ನು ರಚನೆ ಮಾಡಿದ್ದಾರೆ. ಬಳ್ಳಾರಿ, ಬೆಂಗಳೂರು ಮತ್ತು ಅನುಪಮಾ ಅವರ ಹುಟ್ಟೂರು ಉಡುಪಿಯಲ್ಲಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತದೆ. [ಈಸಬೇಕು ಇದ್ದು ಜಯಿಸಬೇಕು ಅನುಪಮಾ ಶೆಣೈ ಮೇಡಂ]

ಅನುಪಮಾ ಅವರ ಮನವೊಲಿಸಲು ಮೊದಲು ಅವರು ಎಲ್ಲಿದ್ದಾರೆ? ಎಂದು ಪತ್ತೆ ಮಾಡಬೇಕು. 4 ದಿನಗಳಿಂದ ಯಾವ ಹಿರಿಯ ಅಧಿಕಾರಿಗಳ ಸಂಪರ್ಕಕ್ಕೂ ಅವರು ಸಿಕ್ಕಿಲ್ಲ. ಆದ್ದರಿಂದ, ಅವರ ಹುಡುಕಾಟಕ್ಕಾಗಿ ಪೊಲೀಸರ ತಂಡವನ್ನು ರಚನೆ ಮಾಡಲಾಗಿದೆ.

English summary
Ballari police have formed special teams to search for Kudligi DYSP Anupama Shenoy who resigned for DYSP post on June 4, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X