ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ನಿಮಗೇನು ಧಾಡಿǃ

|
Google Oneindia Kannada News

ಬೆಂಗಳೂರು, ಅ.23 : ಕರ್ನಾಟಕ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಸರ್ಕಾರದ ಮೇಲೆ ಮತ್ತೊಮ್ಮೆ ಚಾಟಿ ಬೀಸಿದ್ದಾರೆ.

ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ನಿಮಗೇನು ದಾಢಿ. ಡಾಕ್ಟರ್ ಗಳು ಮತ್ತು ನರ್ಸ್ ಗಳಿಲ್ಲದೇ ರಾಜ್ಯಾದ್ಯಂತ ಜನ ತೊಂದ್ರೆ ಪಡ್ತೀದಾರೆ, ಇದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ? ಮೊದಲು ಹುದ್ದೆ ಭರ್ತಿಗೆ ಕ್ರಮ ತೆಗೆದುಕೊಳ್ರೀ' ಇದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಗುರುವಾರ ತರಾಟೆಗೆ ತೆಗೆದುಕೊಂಡ ಬಗೆ.[ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಆಡಳಿತದಂತಾಗಿದೆ!]

kagodu

ತಮ್ಮ ಕಚೇರಿಗೆ ಆರೋಗ್ಯ ಸಚಿವರನ್ನು ಕರೆಸಿಕೊಂಡ ಸ್ಪೀಕರ್ ವಿಳಂಬದ ಕುರಿತು ಮಾಹಿತಿ ಪಡೆದರು. ರಾಜ್ಯೆದೆಲ್ಲೆಡೆ ವೈದ್ಯರು ಮತ್ತು ದಾದಿಯರ ಕೊರತೆಯಿದ್ದು, ಇದರಿಂದಾಗಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೋಡು ಖಾದರ್ ಅವರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು.

ನಂತರ ಮಾತನಾಡಿದ ಸಚಿವ ಖಾದರ್ ವಾಸ್ತವ ಸ್ಥಿತಿ ಮತ್ತು ನೇಮಕ ವಿಳಂಬ ಯಾಕಾಗುತ್ತಿದೆ ಎಂಬ ಸಂಗತಿಯನ್ನು ಸ್ಪೀಕರ್ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಹಣಕಾಸು ಇಲಾಖೆ ಮತ್ತು ಆರೋಗ್ಯ ಇಲಾಖೆ ನಡುವೆ ಯಾವುದೇ ಭಿನ್ನಾಭ್ರಿಯವಿಲ್ಲ. ವದಂತಿಗಳಿಗೆ ಕಿವಿಕೊಡಬೇಡಿ ಎಂದು ಹೇಳಿದರು.[ವಿದ್ಯುತ್ ಖರೀದಿ, ನೈಸ್ ಅಕ್ರಮ ತನಿಖೆಗೆ ಸಮಿತಿ ರಚನೆ]

ಸಾಮೂಹಿಕ ರಾಜೀನಾಮೆ ಎಚ್ಚರ
ಒಂದೆಡೆ ನೇಮಕಾತಿ ಕುರಿತು ಸರ್ಕಾರದ ಒಳಗೆ ಹಗ್ಗಜಗ್ಗಾಟ ನಡೆಯುತ್ತಿದ್ದರೆ ಇತ್ತ ನಮ್ಮ ಬೇಡಿಕೆ ಈಡೇರಿಸಿಲ್ಲ ಹಾಗಾಗಿ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಸರ್ಕಾರಿ ವೈದ್ಯರು ಎಚ್ಚರಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯರ ಕೊರತೆಯಿದೆ. ಶೇ. 60 ತಜ್ಞ ವೈದ್ಯರ ಹುದ್ದೆಗಳು ಖಾಲಿಯಿದ್ದು, 5 ವರ್ಷಗಳಿಂದ ಭರ್ತಿ ಮಾಡಲು ಸರ್ಕಾರ ಮುಂದಾಗಿಲ್ಲ. ಇದನ್ನು ಮತ್ತೆ ಮತ್ತೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿ ಸಂಘದ ಕಾರ್ಯದರ್ಶಿ ಡಾ. ಗೂಳೂರು ಶ್ರೀನಿವಾಸ್ ತಿಳಿಸಿದ್ದಾರೆ.

English summary
Karnataka assembly speaker Kagodu timmappa once again targeted congress government. This time he criticized Health department programme. He lambaste U.T.Kadhir, minister of health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X