ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಮಹಾನಗರಗಳಲ್ಲೂ ನೀರಿನ ದರ ಹೆಚ್ಚಳ

|
Google Oneindia Kannada News

ಬೆಂಗಳೂರು, ನ.20 : ಬೆಂಗಳೂರು ಮಹಾನಗರದಲ್ಲಿ ನೀರಿನ ದರ ಹೆಚ್ಚಳವಾಗಿ ವಾರಗಳು ಕಳೆಯುತ್ತಾ ಬಂತು, ಸದ್ಯ ರಾಜ್ಯದ ಎಲ್ಲಾ ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ನೀರಿನ ದರವನ್ನು ಹೆಚ್ಚಳ ಮಾಡುವ ಪ್ರಸ್ತಾಪ ಕೇಳಿಬಂದಿದೆ. ಚುನಾವಣೆ ಕಾರಣದಿಂದ ತಡೆಹಿಡಿಯಲಾಗಿದ್ದ ದರ ಪರಿಷ್ಕರಣೆ ಶೀಘ್ರದಲ್ಲೇ ಜಾರಿಗೆ ಬರಲಿದೆ.

ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೂರೈಸುವ ನೀರಿನ ದರ ಪರಿಷ್ಕರಿಸುವಂತೆ ಎರಡು ವರ್ಷಗಳ ಹಿಂದೆಯೇ ನಗರಾಭಿವೃದ್ಧಿ ಇಲಾಖೆ ಸುತ್ತೋಲೆ ರವಾನಿಸಿತ್ತು. [ಬೆಂಗಳೂರಿನ ನೀರಿನ ದರ]

vinay kumar sorake

ಚುನಾವಣೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಿರಲಿಲ್ಲ. ಹಿಂದೆ ಕಳಿಸಿದ ಸುತ್ತೋಲೆ, ಸ್ಲಾಬ್ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡುವಂತೆ ಸದ್ಯ ಸೂಚನೆ ನೀಡಲಾಗಿದ್ದು, ಹೊಸ ಮಾದರಿಯಲ್ಲಿಯೇ ನೀರಿನ ಕರ ವಸೂಲು ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. [ಹೊಸ ನೀರಿನ ಸಂಪರ್ಕ ಪಡೆಯುವುದು ಹೇಗೆ?]

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅಕ್ರಮ ನೀರಿನ ಸಂಪರ್ಕಗಳನ್ನು ಮೂರು ತಿಂಗಳೊಳಗೆ ಅಧಿಕೃತಗೊಳಿಸಿ, ನಂತರ ದರ ಏರಿಕೆ ಆದೇಶ ಜಾರಿಗೆ ತರಲಾಗುತ್ತದೆ. ಮೂರು ತಿಂಗಳೊಳಗೆ ನೀರಿನ ಸಂಪರ್ಕ ಸಕ್ರಮ ಮಾಡಿಕೊಳ್ಳದಿದ್ದರೆ, ನೀರಿನ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಸ್ಮಾರ್ಟ್ ಸಿಟಿಗೆ ಪ್ರಸ್ತಾವನೆ ಸಲ್ಲಿಕೆ : ಕೇಂದ್ರ ಸರ್ಕಾರದ 'ಸ್ಮಾರ್ಟ್ ಸಿಟಿ' ಯೋಜನೆಗೆ ಆರು ನಗರಗಳ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು. ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ, ದಾವಣಗೆರೆಯ ಹೆಸರನ್ನು ಪ್ರಸ್ತಾವನೆಯಲ್ಲಿ ಕಳಿಸಲಾಗಿದೆ ಎಂದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿರು ಹೊಸಪೇಟೆ, ವಿಜಯಪುರ ಹಾಗೂ ಉಡುಪಿ ನಗರಗಳನ್ನು ಪರಂಪರೆ ನಗರವೆಂದು ಘೋಷಿಸಿ, ಅಭಿವೃದ್ಧಿಗೆ ನೆರವಾಗುವಂತೆ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿತ್ತು. ಮುಖ್ಯಮಂತ್ರಿಗಳು ಇದನ್ನು ಅನುಮೋದಿಸಿ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ಸಚಿವರು ಹೇಳಿದರು.

ಉಪ ನಗರ ಅಭಿವೃದ್ಧಿ : ಬೆಂಗಳೂರಿನ ಜನಸಂಖ್ಯೆ 90 ಲಕ್ಷದ ಗಡಿ ದಾಟುತ್ತಿದೆ. ಆದ್ದರಿಂದ ಬೆಂಗಳೂರಿಗೆ ಹೊಂದಿಕೊಂಡಂತಿರುವ ರಾಮನಗರ, ತುಮಕೂರು, ದೇವನಹಳ್ಳಿಗಳನ್ನು ಉಪನಗರಗಳಾಗಿ ಅಭಿವೃದ್ಧಿ ಪಡಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

English summary
Water tariff increased in all City Municipal Council and Mahanagara Palike in Karnataka said, minister for urban development Vinay Kumar Sorake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X