ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಪಾತಗಳ ಜಿಲ್ಲೆ ಉತ್ತರ ಕನ್ನಡಕ್ಕೆ ಜೀವರಕ್ಷಕರ ಸಾಥ್

By ಬಸವರಾಜ ಮರಳಿಹಳ್ಳಿ
|
Google Oneindia Kannada News

ಕಾರವಾರ, ಜೂನ್ 14: ಮಳೆಗಾಲ ಬಂತೆಂದರೆ ಕಾರವಾರ ಜಿಲ್ಲೆಯ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಎತ್ತರದಿಂದ ಧುಮ್ಮಿಕ್ಕಿ ಹರಿಯುವ ನೀರಿನ ಸೊಬಗನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ದಾಂಗುಡಿ ಇಡುತ್ತಾರೆ.

ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...

ಹೀಗೆ ಬರುವ ಕೆಲ ಪ್ರವಾಸಿಗರು ಪ್ರಕೃತಿ ಸೊಬಗನ್ನು ದೂರದಿಂದಲೇ ಸವಿಯುವ ಬದಲು ಜಲಪಾತಗಳಿಗೆ ಧುಮುಕುವ ಪ್ರವೃತ್ತಿ ಹೊಂದಿದ್ದು, ಇದರಿಂದ ಹಲವು ಬಾರಿ ಸಾವು ನೋವಿನ ಅವಘಡಗಳು ಸಂಭವಿಸಿವೆ. ಇಂಥ ಘಟನೆಗಳನ್ನು ತಪ್ಪಿಸಲು ಕಾರವಾರ ಜಿಲ್ಲಾಡಳಿತ ಪ್ರಮುಖ ಜಲಪಾತಗಳಲ್ಲಿ ಜೀವ ರಕ್ಷಕರನ್ನು ನೇಮಕ ಮಾಡಲು ಯೋಜನೆ ರೂಪಿಸಿದೆ.

ಯಲ್ಲಾಪುರದಿ 'ಶಿರ್ಲೆ'ಗಳು ಸಂಗೀತವಾ ಹಾಡಿವೆ!ಯಲ್ಲಾಪುರದಿ 'ಶಿರ್ಲೆ'ಗಳು ಸಂಗೀತವಾ ಹಾಡಿವೆ!

ಸಮುದ್ರ ತೀರಗಳಲ್ಲಿ ಇರುವಂತೆ ಜಲಪಾತಗಳಲ್ಲಿಯೂ ನುರಿತ ಜೀವ ರಕ್ಷಕರ ನಿಯೋಜನೆಗೆ ಮುಂದಾಗಿರುವ ಜಿಲ್ಲಾಡಳಿತದ ಕ್ರಮ ಪ್ರವಾಸಿಗರ ನೆಮ್ಮದಿಗೆ ಕಾರಣವಾಗಿದೆ.

ಉಂಚಳ್ಳಿ ಜಲಪಾತ : ಏನೀ ಸೌಂದರ್ಯವೋ? ಏನೀ ಆರ್ಭಟವೋ?

ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಜಲಪಾತಗಳಲ್ಲಿ 17 ಪ್ರವಾಸಿಗರು ಸಾವಿಗೀಡಾಗಿದ್ದಾರೆ. ಯಲ್ಲಾಪುರದ ಸಾತೋಡಿ ಜಲಪಾತದಲ್ಲಿ 5, ಶಿರಲೆ ಜಲಪಾತದಲ್ಲಿ 1, ಶಿವಗಂಗಾ ಜಲಪಾತದಲ್ಲಿ 3, ಸಿದ್ದಾಪುರದ ಬುರುಡೆ ಜಲಪಾತದಲ್ಲಿ 4, ಜೋಗ ಜಲಪಾತದಲ್ಲಿ ಹಾಗೂ ದೇವಿಮನೆ ಜಲಪಾತದಲ್ಲಿ ತಲಾ 2 ಸಾವು ಸಂಭವಿಸಿರುವುದು ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಕಾರಣವಾಗಿದೆ.

ಯಾವ್ಯಾವ ಜಲಪಾತಗಳಿಗೆ ಜೀವರಕ್ಷಕರ ನೇಮಕ?

ಯಾವ್ಯಾವ ಜಲಪಾತಗಳಿಗೆ ಜೀವರಕ್ಷಕರ ನೇಮಕ?

ಸಾತೋಡ್ಡಿ, ಬುರುಡೆ, ಜೋಗ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತಗಳಲ್ಲಿ ಡಾ.ರವೀಂದ್ರನಾಥ ಟ್ಯಾಗೋರ್ ಕಡಲತೀರಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ ವತಿಯಿಂದ ಜೀವರಕ್ಷಕರನ್ನು ನೇಮಕ ಮಾಡಲು ಸಿದ್ಧತೆ ನಡೆಸಲಾಗಿದೆ. ಅಲ್ಲದೆ ಹೊಸದಾಗಿ ನಿಯೋಜನೆಗೊಳ್ಳುವ ಜೀವರಕ್ಷಕರಿಗೆ ಈಗಾಗಲೇ ಗೋಕರ್ಣದಲ್ಲಿ ಐದು ದಿನಗಳ ತರಬೇತಿ ನೀಡಲಾಗಿದೆ.

ಜೀವ ಹಾನಿ ತಡೆಗೆ ಕ್ರಮ

ಜೀವ ಹಾನಿ ತಡೆಗೆ ಕ್ರಮ

'ಜಿಲ್ಲೆಯ ಜಲಪಾತಗಳಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಸಂಭವಿಸಿದ ಅನಾಹುತಗಳ ಮಾಹಿತಿಯನ್ನು ತಹಶೀಲ್ದಾರ್ ಮೂಲಕ ಪಡೆದಿದ್ದೇವೆ. ಜೀವಹಾನಿ ಬಗ್ಗೆ ಪೊಲೀಸರಿಂದಲೂ ವರದಿ ಕೇಳಿದ್ದೇವೆ. ಮೊದಲ ಹಂತದಲ್ಲಿ ಜಿಲ್ಲೆಯ ಪ್ರಮುಖ ಜಲಪಾತಗಳಲ್ಲಿ ಜೀವರಕ್ಷಕರನ್ನು ನೇಮಕ ಮಾಡಲಾಗುತ್ತಿದೆ' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ತಿಳಿಸಿದರು.

ಅನೇಕ ಜಲಪಾತಗಳು ಅರಣ್ಯ ಪ್ರದೇಶದಲ್ಲಿದ್ದು, ಅವುಗಳ ನಿರ್ವಹಣೆಯನ್ನು ಗ್ರಾಮ ಅರಣ್ಯ ಸಮಿತಿ ನೋಡಿಕೊಳ್ಳುತ್ತಿದೆ. ಈ ಸಮಿತಿಯು ಅಲ್ಲಿನ ಸ್ವಚ್ಛತೆ ಹಾಗೂ ಭದ್ರತೆ ವಿಷಯದಲ್ಲಿ ನಮ್ಮ ಜೊತೆ ಕೈಜೋಡಿಸಿದರೆ ಅನಾಹುತ ನಡೆಯುವುದನ್ನು ತಪ್ಪಿಸಬಹುದು' ಎಂದೂ ಅವರು ಅಭಿಪ್ರಾಯಪಟ್ಟರು.

ಸ್ಥಳೀಯರಿಗೆ ಉದ್ಯೋಗ ಭಾಗ್ಯ

ಸ್ಥಳೀಯರಿಗೆ ಉದ್ಯೋಗ ಭಾಗ್ಯ

ಜೀವರಕ್ಷಕರ ನೇಮಕದಿಂದ ಸ್ಥಳೀಯರಿಗೆ ಉದ್ಯೋಗವೂ ದೊರೆಯುತ್ತಿದ್ದು, ಜಿಲ್ಲೆಯ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಮುರ್ಡೇಶ್ವರ ಕಡಲತೀರ, ಗೋಕರ್ಣ ಪ್ರಮುಖ ಕಡಲತೀರ, ಓಂ ಬೀಚ್ ಹಾಗೂ ಕುಡ್ಲೆ ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ ನಾಲ್ಕೈದು ತಿಂಗಳ ಹಿಂದೆ ಒಟ್ಟು 14 ಜೀವರಕ್ಷಕರನ್ನು ನೇಮಕ ಮಾಡಿಕೊಳ್ಳಲಾದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಕಾರವಾರ ನಡೆಸಿದ ತರಬೇತಿಯಲ್ಲಿ 40 ಅಭ್ಯರ್ಥಿಗಳು ಹಾಗೂ ಮುರ್ಡೇಶ್ವರದಲ್ಲಿ ನಡೆಸಿದ ತರಬೇತಿಯಲ್ಲಿ 27 ಅಭ್ಯರ್ಥಿಗಳು ಭಾಗವಹಿಸಿದ್ದರು. ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗಿದೆ.

ಎಲ್ಲೆಡೆ ಜೀವರಕ್ಷಕರು

ಎಲ್ಲೆಡೆ ಜೀವರಕ್ಷಕರು

ಕಾರವಾರದ ಟ್ಯಾಗೋರ್ ಕಡಲತೀರ ಹಾಗೂ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡಾ ಚಟುವಟಿಕೆ ಆರಂಭಗೊಂಡಿದ್ದು, ಇಲ್ಲಿ ಜೀವರಕ್ಷಕರಾಗಿ ತರಬೇತಿ ಪಡೆದ ಅನೇಕ ಅಭ್ಯರ್ಥಿಗಳನ್ನೇ ನಿಯೋಜಿಸಲಾಗಿದೆ. ಜಂಗಲ್ ರೆಸಾರ್ಟ್‌ನಲ್ಲೂ ಇಬ್ಬರಿಗೆ ಉದ್ಯೋಗ ದೊರೆತಿದೆ. ಜಿಲ್ಲೆಯ ತೀಳಮಾತಿ, ಮಾಜಾಳಿ, ಹನಿ ಬೀಚ್ ಹಾಗೂ ಕಾಸರಗೋಡು ಕಡಲತೀರಗಳಲ್ಲೂ ಜೀವರಕ್ಷಕರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ಧಾರೆ.

ಪ್ರವಾಸಿಗರ ಹಿತ ಕಾಯುವ ಯತ್ನ

ಪ್ರವಾಸಿಗರ ಹಿತ ಕಾಯುವ ಯತ್ನ

ಪ್ರಮುಖ ಕಡಲ ತೀರಗಳಲ್ಲಿ ನೇಮಕವಾಗಿರುವ ಜೀವ ರಕ್ಷಕರು ಈವರೆಗೆ ಒಟ್ಟು 5 ಮಂದಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಜಲಪಾತಗಳಲ್ಲಿ ನೇಮಕವಾಗುವ ಜೀವರಕ್ಷಕರು ಈಜು ಪರಿಣಿತರಾಗಿದ್ದು, ಸದಾ ಪ್ರವಾಸಿಗರ ಹಿತ ಕಾಯುವಲ್ಲಿ ನಿರತರಾಗಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಹೇಳಿದ್ದಾರೆ.

English summary
To stop deaths in the water falls, Uttara kannada district administration decided to appoint life savers in all dangerous water falls. It may helpful to the tourism of the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X