ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ-ಕರ್ನಾಟಕ ನಡುವೆ ಸಂಚರಿಸಲಿವೆ ಹೆಚ್ಚುವರಿ ಬಸ್

|
Google Oneindia Kannada News

ಬೆಂಗಳೂರು, ಜ. 20 : ಗೋವಾಕ್ಕೆ ಪ್ರಯಾಣಿಸುವ ಜನರಿಗೆ ಸಿಹಿ ಸುದ್ದಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗೋವಾಕ್ಕೆ ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸುತ್ತಿದೆ. 28 ಹೊಸ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಕೆಎಸ್ಆರ್‌ಟಿಸಿ ಮತ್ತು ಗೋವಾದ ಕದಂಬ ಸಾರಿಗೆ ಸಂಸ್ಥೆಗಳು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡಿವೆ. ಈ ಕುರಿತ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಮಾಡಲಿವೆ. ಪ್ರಸ್ತುತ 2007ರ ಒಪ್ಪಂದದಂತೆ ಉಭಯ ರಾಜ್ಯಗಳ ನಡುವೆ ಬಸ್ ಸಂಚರಿಸುತ್ತಿವೆ.

ksrtc

ಉಭಯ ರಾಜ್ಯಗಳ ನಡುವೆ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ ಇದನ್ನು ಗಮನದಲ್ಲಿಟ್ಟುಕೊಂಡು ಉಭಯ ರಾಜ್ಯಗಳು ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ. ನೂತನ ಒಪ್ಪಂದದಂತೆ ಕದಂಬ ಸಾರಿಗೆ ಸಂಸ್ಥೆಯೂ ಕರ್ನಾಟಕದಲ್ಲಿ ತನ್ನ ಸೇವೆಯನ್ನು ಹೆಚ್ಚಿಸಲಿದೆ. [ಗಣರಾಜ್ಯೋತ್ಸವಕ್ಕೆ ಹೆಚ್ಚುವರಿ ಬಸ್]

ಕೆಎಸ್ಆರ್‌ಟಿಸಿ ವಾಯುವ್ಯ ಕರ್ನಾಟಕ ಸಾರಿಗೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳನ್ನು ಗೋವಾಕ್ಕೆ ಸಂಪರ್ಕ ಕಲ್ಪಿಸಲು ಬಳಸಿಕೊಳ್ಳಲಿದೆ. 28 ಹೊಸ ಮಾರ್ಗ ಮತ್ತು ಈಗಿರುವ ಮಾರ್ಗದಲ್ಲಿಯೇ 59 ಹೊಸ ಬಸ್ಸುಗಳನ್ನು ಓಡಿಸಲಿದೆ.

ಯಾವ ಸ್ಥಳಗಳು : ಪಣಜಿ, ವಾಸ್ಕೋ, ಮಡಗಾಂವ್ ಮುಂತಾದ ಪ್ರದೇಶಗಳಿಗೆ ಕೆಎಸ್ಆರ್‌ಟಿಸಿ ಬಸ್ಸುಗಳು ಇನ್ನುಮುಂದೆ ಸಂಚರಿಸಲಿವೆ. ಕದಂಬ ಸಾರಿಗೆ ಸಂಸ್ಥೆಯ ಕರ್ನಾಟಕದ 28 ಹೊ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಆರಂಭಿಸಲಿದ್ದು, ಇವುಗಳಲ್ಲಿ ಮೈಸೂರು, ಬೆಂಗಳೂರು, ಮುರುಡೇಶ್ವರ, ಗೋಕರ್ಣ, ಬೆಳಗಾವಿ ಮುಂತಾದ ಪ್ರದೇಶಗಳು ಸೇರಿವೆ.

ಉಭಯ ರಾಜ್ಯಗಳ ನಡುವೆ ಹಬ್ಬ ಮತ್ತು ರಜೆಯ ದಿನಗಳಲ್ಲಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಲು ಎರಡೂ ರಾಜ್ಯಗಳು ಒಪ್ಪಿಗೆ ನೀಡಿವೆ. ಈ ಹೊಸ ಒಪ್ಪಂದ ಪತ್ರಕ್ಕೆ ಎರಡೂ ರಾಜ್ಯಗಳ ಸಹಿ ಬಿದ್ದ ನಂತರ ಬಸ್ ಸಂಚಾರ ಆರಂಭವಾಗಲಿದೆ.

English summary
Karnataka State Road Transport Corporation (KSRTC)announced that it will soon introduce additional services to Goa as part of a new inter state reciprocal transport agreement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X