ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ಐಎ ಎಸ್ಪಿ ಹುದ್ದೆಗೆ ಸೋನಿಯಾ ನಾರಂಗ್

ರಾಜ್ಯ ಕಂಡ ದಿಟ್ಟ ಪೊಲೀಸ್ ಅಧಿಕಾರಿ ಸೋನಿಯಾ ನಾರಂಗ್ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಎಸ್ಪಿಯಾಗಿ ನೇಮಕಗೊಂಡಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 22: ರಾಜ್ಯ ಕಂಡ ದಿಟ್ಟ ಪೊಲೀಸ್ ಅಧಿಕಾರಿ ಸೋನಿಯಾ ನಾರಂಗ್ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಎಸ್ಪಿಯಾಗಿ ನೇಮಕಗೊಂಡಿದ್ದಾರೆ.

2002 ರಾಜ್ಯ ಕೇಡರ್ ನ ಐಪಿಎಸ್ ಅಧಿಕಾರಿಯಾಗಿರುವ ಸೋನಿಯಾ ನಾರಂಗ್ ಈ ಹಿಂದೆ ಸಿಐಡಿ ಐಡಿಜಿಪಿಯಾಗಿದ್ದರು. ಲೋಕಾಯುಕ್ತ ಎಸ್ಪಿಯಾಗಿದ್ದ ವೇಳೆ ಅವರು ಹಲವು ಮಹತ್ತರ ತನಿಖೆಗಳನ್ನು ನಡೆಸಿ ಭ್ರಷ್ಟರನ್ನು ಹೆಡೆಮುರಿ ಕಟ್ಟಿದ್ದರು.[ಕೇಂದ್ರ ಸೇವೆಗೆ ಸೋನಿಯಾ ನಾರಂಗ್, ಎನ್‌ಐಎ ಎಸ್ಪಿಯಾಗಿ ನೇಮಕ]

Sonia Narang transferred to Centre as NIA SP

ಅಲ್ಲದೇ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೈ ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ರ 'ಲೋಕಾಯುಕ್ತ ಹಗರಣ'ವನ್ನೂ ಬಯಲಿಗೆಳೆದಿದ್ದರು. ಸಿಐಡಿಗೆ ಹೋದ ನಂತರ ಪಿಯುಸಿಯ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನೂ ನಡೆಸಿದ್ದರು.[ವಿಪರ್ಯಾಸ! ರಾಜ್ಯದ 4 ಖಡಕ್ ಐಪಿಎಸ್ ಅಧಿಕಾರಿಗಳು ಕೇಂದ್ರದ ಸೇವೆಗೆ?]

ಮುಂದಿನ ನಾಲ್ಕು ವರ್ಷ ಅಥವಾ ಕೇಂದ್ರದ ಆದೇಶದವರೆಗೆ ಅವರು ಕೇಂದ್ರ ಗೃಹ ಇಲಾಖೆ ಅಡಿಯಲ್ಲಿ ಬರುವ ಎನ್ಐಎನಲ್ಲಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಅವರನ್ನು ರಾಜ್ಯ ಸೇವೆಯಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ.[ರೂಪ ಐಪಿಎಸ್ ವಿರುದ್ಧದ ಬೆಂಕಿ ಬಿರುಗಾಳಿ ತಣ್ಣಗಾಗಿಸಲು ಪ್ರತಾಪ್ ಯತ್ನ]

English summary
Renowned IPS officer Sonia Narang was transferred to Central service. She will take her position in National Investigative Agency (NIA) as Superintendent of Police (SP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X