ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ಜಿಲ್ಲೆಗಳಲ್ಲಿ ನೂತನ ಮೆಡಿಕಲ್ ಕಾಲೇಜು ಸ್ಥಾಪನೆ

|
Google Oneindia Kannada News

ಬೆಂಗಳೂರು, ಆ.28 : ಕರ್ನಾಟಕ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಯೋಜನೆ ತಯಾರಿಸಿದೆ. 150 ಸೀಟುಗಳ ಕಾಲೇಜು ಮುಂದಿನ 2015ರ ಶೈಕ್ಷಣಿಕ ವರ್ಷಕ್ಕೆ ಆರು ಜಿಲ್ಲೆಗಳಲ್ಲಿ ಆರಂಭಗೊಳ್ಳಲಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಈ ಕುರಿತು ಈಗಾಗಲೇ ಯೋಜನೆ ತಯಾರಿಸಿದೆ. ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಯೋಜನೆ ತಯಾರಿಸಲಾಗಿದೆ.

medical colleges

ಈ ಕಾಲೇಜುಗಳು ಆರಂಭವಾದ ಬಳಿಕ ದೇಶದಲ್ಲಿಯೇ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿದ ರಾಜ್ಯ ಎಂಬ ಖ್ಯಾತಿಗೆ ಕರ್ನಾಟಕ ಪಾತ್ರವಾಗಲಿದೆ. ಆರು ಕಾಲೇಜುಗಳು ಸ್ಥಾಪನೆಯಾದ ಬಳಿಕ ರಾಜ್ಯದಲ್ಲಿ ಒಟ್ಟು 22 ಸರ್ಕಾರಿ ಮೆಡಿಕಲ್ ಕಾಲೇಜುಗಳಾಗುತ್ತವೆ. [ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು]

ಸುಮಾರು 199 ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣ ಮಾಡಲಾಗುತ್ತದೆ. 150 ಮೆಡಿಕಲ್ ಸೀಟುಗಳನ್ನು ಹೊಂದಿರುವ ಈ ಕಾಲೇಜುಗಳು 2015ರ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿವೆ. ಈ ಕಾಲೇಜುಗಳು ಆರಂಭವಾದ ನಂತರ ರಾಜ್ಯದಲ್ಲಿ 4000 ಮೆಡಿಕಲ್ ಸೀಟುಗಳು ಲಭ್ಯವಾಗಲಿವೆ.

ಸದ್ಯ ಇರುವ ಕಾಲೇಜುಗಳು : ಅಂದಹಾಗೆ ರಾಜ್ಯದ ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಬೀದರ್, ರಾಯಚೂರು, ಬೆಳಗಾವಿ, ಶಿವಮೊಗ್ಗ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯುನಿರ್ವಹಿಸುತ್ತಿವೆ.

English summary
The Karnataka state medical education department has announced that the state government will establish 6 new government medical colleges in the economically backward districts across the state. Colleges will come up in Tumkur, Chitradurga, Chikkaballapur, Bagalkot, Haveri and Yadgir district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X