ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಸಿ: ಕೋಮುದಳ್ಳುರಿಗೆ ಬೆಂದಿದ್ದ ಹುಲೇಕಲ್ ಶಾಂತ

|
Google Oneindia Kannada News

ಶಿರಸಿ, ನವೆಂಬರ್. 23: ಶಿರಸಿ ತಾಲೂಕಿನ ಹುಲೇಕಲ್ ನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ದಿಲೀಪ್‌ ನೇತೃತ್ವದಲ್ಲಿ ಅಧಿಕಾರಿಗಳು ಶಾಂತಿ ಸಭೆ ನಡೆಸಿದ್ದಾರೆ.

ಶಿವಮೊಗ್ಗ ಮತ್ತು ಕೊಡಗಿನಲ್ಲಿ ಶಾಂತಿ ಕದಡಿದ್ದ ಬಗೆಯ ಕೋಮು ಸಂಘರ್ಷದ ಪ್ರಕರಣಕ್ಕೆ ಶಿರಸಿ ತಾಲೂಕಿನ ಹುಲೇಕಲ್ ಶನಿವಾರ ಸಾಕ್ಷಿಯಾಗಿತ್ತು. ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರನ್ನು ತಡೆಗಟ್ಟಿದ್ದ ಬಜರಂಗದಳದ ಕಾರ್ಯಕರ್ತ ವಿನಯ್ ನಾಯ್ಕ್ ಎಂಬುವರ ಮೇಲೆ ಇನ್ನೊಂದು ಕೋಮಿನ ಜನ ಹಲ್ಲೆಗೆ 60 ಜನ ಹಲ್ಲೆಗೆ ಮುಂದಾಗಿದ್ದರು.[ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]

Sirsi: The condition at Hulekal under control

ನಂತರ ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದವು. ಒಂದು ದಿನ ಕಾಲ ಹುಲೇಕಲ್ ನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಹಿಂದೂ ಪರ ಸಂಘಟನೆಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ನವೆಂಬರ್ 24 ರಂದು ಶಿರಸಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿವೆ.[ಮಡಿಕೇರಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಏನು?]

ಯಾವುದೇ ಗಲಾಟೆ ಗೊಂದಲಗಳಿಗೆ ಅವಕಾಶವಿಲ್ಲದ, ಅಂತಹ ಇತಿಹಾಸವನ್ನು ಹೊಂದಿರದ ಉತ್ತರ ಕನ್ನಡ ಜಿಲ್ಲೆಯ ಘಟ್ಟೆದ ಮೇಲಿನ ಭಾಗದಲ್ಲೂ ಈ ಬಗೆಯ ಪ್ರಕರಣಗಳು ಆತಂಕ ಸೃಷ್ಟಿಸಿವೆ.

English summary
Sirsi: The condition at Hulekal is now under the control. Hulekal witnessed riot on November 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X