ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ದುಬಾರಿ ಕಾರುಗಳ ಪಟ್ಟಿ ಬಿಡುಗಡೆ!

|
Google Oneindia Kannada News

ಬೆಂಗಳೂರು, ಫೆಬ್ರವರಿ 20 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪುರಾಣ ಬಿಚ್ಚಿಟ್ಟಿದ್ದ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸಿಗರು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರು ಹೊಂದಿರುವ ದುಬಾರಿ ಬೆಲೆಯ ಕಾರುಗಳು ಮತ್ತು ವಾಚ್‌ಗಳ ಪಟ್ಟಿಯನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಸಿದ್ದರಾಮಯ್ಯ ಆಪ್ತ ಎಚ್.ಎಂ.ರೇವಣ್ಣ ಮುಂತಾದ ನಾಯಕರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ದುಬಾರಿ ಕಾರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]

'ಕುಮಾರಸ್ವಾಮಿ ಅವರು ದುಬಾರಿ ಕಾರು ಮತ್ತು ವಾಚುಗಳ ಸರದಾರ' ಎಂದು ಲೇವಡಿ ಮಾಡಿದ ಉಗ್ರಪ್ಪ ಅವರು, 'ಕುಮಾರಸ್ವಾಮಿ ಮತ್ತು ಅವರ ಪುತ್ರ ಲಕ್ಷ-ಲಕ್ಷ ರೂ.ಬೆಲೆಬಾಳುವ ವಾಚುಗಳನ್ನು ಹೊಂದಿದ್ದಾರೆ' ಎಂದು ಆರೋಪಿಸಿದರು. [ವಾಚ್ ತೊಟ್ಟ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್?]

'ಎಚ್.ಡಿ.ಕುಮಾರಸ್ವಾಮಿ ಅವರು 1.3 ಕೋಟಿ ಮೌಲ್ಯದ ವಾಚ್ ಅನ್ನು ದುಬೈನಲ್ಲಿ ಉಡುಗೊರೆಯಾಗಿ ಪಡೆದಿದ್ದಾರೆ' ಎಂದು ಆರೋಪ ಮಾಡಿದ ಉಗ್ರಪ್ಪ ಅವರು, 'ಸಿದ್ದರಾಮಯ್ಯ ಅವರು ತಮ್ಮ ವಾಚ್‌ನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು ರಾಜ್ಯದ ಬೊಕ್ಕಸಕ್ಕೆ ನೀಡಬೇಕು' ಎಂದು ಮನವಿ ಮಾಡಿದರು........ [ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!]

ಎಚ್ಡಿಕೆ ಬಳಿ 8 ದುಬಾರಿ ಕಾರುಗಳಿವೆ

ಎಚ್ಡಿಕೆ ಬಳಿ 8 ದುಬಾರಿ ಕಾರುಗಳಿವೆ

ಎಚ್.ಡಿ.ಕುಮಾರಸ್ವಾಮಿ ಅವರ ಬಳಿ 8 ದುಬಾರಿ ಕಾರುಗಳಿವೆ ಎಂದು ವಿ.ಎಸ್.ಉಗ್ರಪ್ಪ ಆರೋಪಿಸಿದರು. 8 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರು, 3 ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರು, 1.2 ಕೋಟಿ ಬೆಲೆ ಬಾಳುವ ಇನ್ಫಿನಿಟಿ ಇಎಕ್ಸ್ - 35 ಕಾರುಗಳಿವೆ. 8 ಕಾರುಗಳ ಪೈಕಿ ಇನ್ನೂ 2 ಕಾರುಗಳ ನೋಂದಣಿ ಆಗಿಲ್ಲ ಎಂದು ದೂರಿದರು.

ಕಂಪನಿ ಬಗ್ಗೆ ತನಿಖೆಯಾಗಲಿ

ಕಂಪನಿ ಬಗ್ಗೆ ತನಿಖೆಯಾಗಲಿ

'ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಬಳಿ ದುಬಾರಿ ಕಾರಿದೆ. ಅದನ್ನು ಕಂಪನಿಯೊಂದು ಉಡುಗೊರೆ ಕೊಟ್ಟಿದೆ ಎಂದು ಹೇಳುತ್ತಾರೆ. ಆ ಕಂಪನಿ ಬಗ್ಗೆ ತನಿಖೆಯಾಗಬೇಕು. ನಿನ್ನೆಯಿಂದ ಎಲ್ಲಾ ಕಾರುಗಳಿಗೆ ಕವರ್ ಹಾಕಿ ನಿಲ್ಲಿಸಲಾಗಿದೆ' ಎಂದು ಉಗ್ರಪ್ಪ ದೂರಿದರು.

ಕನಿಷ್ಠ 50 ವಾಚ್‌ಗಳಿವೆ

ಕನಿಷ್ಠ 50 ವಾಚ್‌ಗಳಿವೆ

ಮುಖ್ಯಮಂತ್ರಿಗಳು ದುಬಾರಿ ವಾಚ್ ಕಟ್ಟುತ್ತಾರೆ ಎಂದು ಆರೋಪ ಮಾಡುವ ಕುಮಾರಸ್ವಾಮಿ ಅವರ ಬಳಿ ಕನಿಷ್ಠ 50 ದುಬಾರಿ ವಾಚ್‌ಗಳಿವೆ. 25 ಲಕ್ಷದಿಂದ ಕೋಟಿ ಬೆಳೆಬಾಳುವ ವಾಚ್‌ಗಳು ಅವರ ಬಳಿ ಇವೆ. ಕುಮಾರಸ್ವಾಮಿ ಅವರು ಕಾರು, ವಾಚ್‌ಗಳ ಸರದಾರ' ಎಂದು ಉಗ್ರಪ್ಪ ವ್ಯಂಗ್ಯವಾಡಿದರು.

1.3 ಕೋಟಿ ಮೌಲ್ಯದ ವಾಚ್ ಇದೆ

1.3 ಕೋಟಿ ಮೌಲ್ಯದ ವಾಚ್ ಇದೆ

'ಕುಮಾರಸ್ವಾಮಿ ಅವರು 1.3 ಕೋಟಿ ರೂ. ಮೌಲ್ಯದ ವಾಚ್‌ ಅನ್ನು ದುಬೈನಲ್ಲಿ ಉಡುಗೊರೆಯಾಗಿ ಪಡೆದಿದ್ದಾರೆ' ಎಂದು ಆರೋಪಿಸಿದ ಉಗ್ರಪ್ಪ ಅವರು, 'ಈ ವಾಚ್‌ಅನ್ನು ಯಾರು ನೀಡಿದರು?, ಏಕೆ ನೀಡಿದರು?, ಇದಕ್ಕೆ ಪ್ರತಿಯಾಗಿ ಏನು ಕೆಲಸ ಮಾಡಿಕೊಟ್ಟರು? ಎಂದು ತಿಳಿಯಬೇಕಾಗಿದೆ' ಎಂದು ಹೊಸ ಬಾಂಬ್ ಸಿಡಿಸಿದರು.

ಆರೋಪ ಮಾಡಿ ಪಲಾಯನ ಮಾಡ್ತಾರೆ

ಆರೋಪ ಮಾಡಿ ಪಲಾಯನ ಮಾಡ್ತಾರೆ

'ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿ ಪಲಾಯನ ಮಾಡುತ್ತಾರೆ' ಎಂದು ಆರೋಪಿಸಿದ ಉಗ್ರಪ್ಪ ಅವರು, 'ಆರೋಪ ಮಾಡಿದ ಮೇಲೆ ಅದಕ್ಕೆ ಸಾಕ್ಷಿಗಳು ಬೇಕು. ಸಾಕ್ಷಿಗಳು ಎಲ್ಲಿವೆ ನೀಡಿ?' ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

'ಬಿಜೆಪಿ ನಾಯಕರ ಬಳಿಯೂ ವಾಚ್ ಗಳಿವೆ'

'ಬಿಜೆಪಿ ನಾಯಕರ ಬಳಿಯೂ ವಾಚ್ ಗಳಿವೆ'

'ಎಚ್.ಡಿ.ಕುಮಾರಸ್ವಾಮಿ ಮಾತ್ರವಲ್ಲ ಕೆಲವು ಬಿಜೆಪಿ ನಾಯಕರ ಬಳಿಯೂ ದುಬಾರಿ ವಾಚ್‌ಗಳಿವೆ' ಎಂದು ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಸಿದ್ದರಾಮಯ್ಯಗೆ ಸಲಹೆ ನೀಡಿದ ನಾಯಕರು

ಸಿದ್ದರಾಮಯ್ಯಗೆ ಸಲಹೆ ನೀಡಿದ ನಾಯಕರು

'ಮುಖ್ಯಮಂತ್ರಿಗಳಿಗೆ ಬರುವ ಉಡುಗೊರೆಗಳು ರಾಜ್ಯದ ಸ್ವತ್ತಾಗಬೇಕು. ಸಿದ್ದರಾಮಯ್ಯ ಅವರು ತಮ್ಮ ವಾಚ್ ಹರಾಜು ಹಾಕಿ ಅದರ ಹಣವನ್ನು ರಾಜ್ಯದ ಬೊಕ್ಕಸಕ್ಕೆ ಸೇರಿಸಬೇಕು' ಎಂದು ಕಾಂಗ್ರೆಸ್ ನಾಯಕರು ಸಲಹೆ ನೀಡಿದರು.

'ತಿರುಗೇಟು ಕೊಟ್ಟ ಕಾಂಗ್ರೆಸ್'

'ತಿರುಗೇಟು ಕೊಟ್ಟ ಕಾಂಗ್ರೆಸ್'

ಸಿದ್ದರಾಮಯ್ಯ ಅವರ ಕೈಯಲ್ಲಿದ್ದ 'ಹ್ಯೂಬ್ಲೋಟ್‌' ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಯ ವಾಚ್ ಬಗ್ಗೆ ಮೊದಲು ಮಾತನಾಡಿದ್ದ ಕುಮಾರಸ್ವಾಮಿ ಅವರು ಕಳೆದ ವಾರ, 'ಮುಖ್ಯಮಂತ್ರಿಗಳ ಬಳಿ ಇನ್ನೂ 7 ರಿಂದ 8 ದುಬಾರಿ ವಾಚ್‌ಗಳಿವೆ ಅವುಗಳ ಬಗ್ಗೆ ದಾಖಲೆ ಸಮೇತ ವಿವರಣೆ ನೀಡುತ್ತೇನೆ. ಸ್ವಲ್ಪ ಸಮಯ ಕೊಡಿ' ಎಂದು ಮಂಡ್ಯದಲ್ಲಿ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ತಿರಗೇಟು ಕೊಟ್ಟಿದೆ.

ಕಾರಿನ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ

ಕಾರಿನ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ

ಕುಮಾರಸ್ವಾಮಿ ಅವರು ವಾಚ್ ಬಗ್ಗೆ ಮಾತನಾಡಿದಾಗ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕುಮಾರಸ್ವಾಮಿ ಅವರು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು ಬೇಡ. ಅವರ ಮಗ ಕೋಟ್ಯಾಂತರ ರೂ.ಮೌಲ್ಯದ ಕಾರು ತೆಗೆದುಕೊಂಡಿಲ್ವಾ?, ಅದು ಕುಮಾರಸ್ವಾಮಿ ಮಗ ದುಡಿದಿರುವ ದುಡ್ಡಾ? ಅವ್ರ ಮಗ ಕೋಟ್ಯಾಂತರ ರೂಪಾಯಿ ಸಿನಿಮಾ ಮಾಡ್ತಿದ್ದಾನೆ. ಈ ಸಿನಿಮಾ ಮಾಡಲು ದುಡ್ಡು ಎಲ್ಲಿಂದ ಬಂತು?' ಎಂದು ಪ್ರಶ್ನಿಸಿದ್ದರು.

ವಾಚ್ ಯಾರು ಕೊಟ್ಟಿದ್ದು ಹೇಳಿ?

ವಾಚ್ ಯಾರು ಕೊಟ್ಟಿದ್ದು ಹೇಳಿ?

ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯ ಅವರ ವಾಚ್‌ ಬಗ್ಗೆ ಹೇಳಿಕೆ ನೀಡಿದ್ದು, 'ಸಿದ್ದರಾಮಯ್ಯ ಧರಿಸುತ್ತಿದ್ದ ವಜ್ರ ಖಚಿತವಾದ ವಾಚ್‌ ಅನ್ನು ಉಡುಗೊರೆಯಾಗಿ ನೀಡಿದವರು ಯಾರು?, ಯಾವ ಕಾರಣಕ್ಕಾಗಿ' ಎಂದು ಬಹಿರಂಗಪಡಿಸಬೇಕು ಸ್ಪಷ್ಟನೆ ನೀಡದಿದ್ದರೆ ಸಂಸತ್ತಿನಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸುತ್ತೇನೆ. ಕೇಂದ್ರ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒತ್ತಾಯ ಮಾಡುತ್ತೇನೆ' ಎಂದು ಹೇಳಿದ್ದರು.

English summary
Karnataka chief minister Siddaramaiah's luxury watch row to be getting bigger by the week. MLC and Congress leader V.S. Ugrappa released H.D.Kumaraswamys costliest cars list on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X